Typhoid Causes and prevention: ಭೇದಿ, ಅತಿಸಾರದಂತಹ ಸಮಸ್ಯೆ ಈ ರೋಗದ ಲಕ್ಷಣವಾಗಿರಬಹುದು ಎಚ್ಚರ!

ರೋಗಿಗೆ ದೀರ್ಘಕಾಲದವರೆಗೆ ಜ್ವರ, ತಲೆನೋವು, ಆಯಾಸವು ಕಂಡು ಬರುತ್ತದೆ. ಸಾಮಾನ್ಯವಾಗಿ, ಈ ರೋಗವನ್ನು ತ್ವರಿತವಾಗಿ ಗುಣಪಡಿಸಬಹುದು, ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದು ಅಪಾಯಕಾರಿಯಾಗಬಹುದು. ಹಾಗಾದರೆ ಟೈಫಾಯಿಡ್ ಏಕೆ ಬರುತ್ತದೆ? ಹೇಗೆ ತಡೆಗಟ್ಟಬಹುದು? ಇಲ್ಲಿದೆ ಮಾಹಿತಿ.

Typhoid Causes and prevention: ಭೇದಿ, ಅತಿಸಾರದಂತಹ ಸಮಸ್ಯೆ ಈ ರೋಗದ ಲಕ್ಷಣವಾಗಿರಬಹುದು ಎಚ್ಚರ!
Typhoid Causes and prevention
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:May 01, 2024 | 6:34 PM

ಈ ಋತುವಿನಲ್ಲಿ ಭೇದಿ ಅತಿಸಾರದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ದೇಹದಲ್ಲಿ ಟೈಫಾಯಿಡ್ ಕಾಯಿಲೆಯ ಸಂಕೇತವಾಗಿರಬಹುದು. ಭೇದಿಯ ಹೊರತಾಗಿ, ಈ ರೋಗವು ಇತರ ರೋಗಲಕ್ಷಣಗಳನ್ನು ಹೊಂದಿರುತ್ತದೆ. ರೋಗಿಗೆ ದೀರ್ಘಕಾಲದವರೆಗೆ ಜ್ವರ, ತಲೆನೋವು, ಆಯಾಸವು ಕಂಡು ಬರುತ್ತದೆ. ಸಾಮಾನ್ಯವಾಗಿ, ಈ ರೋಗವನ್ನು ತ್ವರಿತವಾಗಿ ಗುಣಪಡಿಸಬಹುದು, ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಇದು ಅಪಾಯಕಾರಿಯಾಗಬಹುದು. ಹಾಗಾದರೆ ಟೈಫಾಯಿಡ್ ಏಕೆ ಬರುತ್ತದೆ? ಹೇಗೆ ತಡೆಗಟ್ಟಬಹುದು? ಇಲ್ಲಿದೆ ಮಾಹಿತಿ.

ಈ ರೋಗವು ಸಾಲ್ಮೊನೆಲ್ಲಾ ಟೈಫಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾದ ಸೋಂಕು ಜ್ವರ ಮತ್ತು ಜಠರಗರುಳಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಕಲುಷಿತ ನೀರು ಅಥವಾ ಆಹಾರವನ್ನು ಸೇವಿಸುವುದಿರಂದ ಟೈಫಾಯಿಡ್‌ ಜ್ವರಕ್ಕೆ ತುತ್ತಾಗುತ್ತಾರೆ. ಈ ಬೇಸಿಗೆಯಲ್ಲಿ ಆಹಾರವು ಬೇಗನೆ ಹಾಳಾಗುತ್ತದೆ. ಈ ಹಳಸಿದ ಆಹಾರ ಸೇವನೆ ಟೈಫಾಯಿಡ್ ರೋಗಕ್ಕೆ ಕಾರಣವಾಗಬಹುದು. ಈ ಬ್ಯಾಕ್ಟೀರಿಯಾವು ಬಾಯಿಯ ಮೂಲಕ ಕರುಳನ್ನು ಪ್ರವೇಶಿಸುತ್ತದೆ. ಕರುಳಿನ ನಂತರ, ಇದು ರಕ್ತವನ್ನು ಪ್ರವೇಶಿಸುತ್ತದೆ ಮತ್ತು ಟೈಫಾಯಿಡ್ ಜ್ವರಕ್ಕೆ ಕಾರಣವಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಮಾರಣಾಂತಿಕವಾಗಬಹುದು. ಹಾಗಾಗಿ ಈ ಸಮಯದಲ್ಲಿ ಆಹಾರ ಪದ್ಧತಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಶುರುವಾಯಿತು ಚಿಂತೆ? ತಜ್ಞರು ಹೇಳುವುದೇನು?

ಟೈಫಾಯಿಡ್ ರೋಗಿಗಳಿಗೆ ನೀಡುವ ಆಹಾರ ಹೇಗಿರಬೇಕು?

ಈ ರೋಗಿಗಳಿಗೆ ಜೀರ್ಣಕಾರಿ ಸಮಸ್ಯೆಗಳಿರುತ್ತವೆ, ಹಾಗಾಗಿ ಅವರು ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಸಮತೋಲಿತ ಆಹಾರ ಸೇವನೆ ಮಾಡುವುದು ಒಳ್ಳೆಯದು. ಇದಕ್ಕಾಗಿಯೇ ಆಹಾರದಲ್ಲಿ ಚೀಸ್, ಮೊಸರು, ಹಾಲು ಮತ್ತು ಹಸಿರು ತರಕಾರಿಗಳನ್ನು ಸೇರಿಸುವುದು ಬಹಳ ಮುಖ್ಯ. ಟೈಫಾಯಿಡ್ ರೋಗಿಗಳಲ್ಲಿಯೂ ತೂಕ ನಷ್ಟವಾಗಬಹುದು. ಹಾಗಾಗಿ ಬಾಳೆಹಣ್ಣು ಮತ್ತು ಆಲೂಗಡ್ಡೆಯನ್ನು ತಿನ್ನಿ. ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಿರಿ. ಸಾಧ್ಯವಾದರೆ ದಿನಕ್ಕೆ 7- 8 ಲೋಟ ನೀರನ್ನು ಕುಡಿಯಿರಿ, ತಾಜಾ ಹಣ್ಣುಗಳಿಂದ ಮಾಡಿದ ರಸವನ್ನು ಸೇವಿಸಿ.

ಯಾರು ಅಪಾಯದಲ್ಲಿದ್ದಾರೆ?

ಡಾ. ಜುಗಲ್ ಕಿಶೋರ್ ಹೇಳುವ ಪ್ರಕಾರ ಈಗಾಗಲೇ ಹೊಟ್ಟೆಯ ಭಾಗದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಹೊಂದಿರುವ ಅಥವಾ ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ಹೇಳುತ್ತಾರೆ. ಈ ರೋಗದ ಯಾವುದೇ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳುವುದು ಹೇಗೆ?

  • ಕೈಗಳ ಶುಚಿತ್ವವನ್ನು ಕಾಪಾಡಿಕೊಳ್ಳಿ.
  • ಮನೆಯಲ್ಲಿಯೇ ಬೇಯಿಸಿದ ಆಹಾರವನ್ನು ಸೇವಿಸಿ.
  • ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆದು ತಿನ್ನಿರಿ.
  • ಬೀದಿ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ.
  • ಪಾತ್ರೆಗಳನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Wed, 1 May 24