ಋತುಬಂಧವು ಮಹಿಳೆಯ ಜೀವನದ ಒಂದು ಭಾಗ. ಈ ಸಮಯದಲ್ಲಿ ಮಹಿಳೆಯರು ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು 40-50 ನೇ ವಯಸ್ಸಿನಲ್ಲಿ ಸಂಭವಿಸುತ್ತದೆ. ಇದು ನೈಸರ್ಗಿಕ ಪ್ರಕ್ರಿಯೆ ಆದರೆ ಋತುಬಂಧ ಸಮಯದಲ್ಲಿ ಮಹಿಳೆಯರು ಕೆಲವು ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಇದು ಮಹಿಳೆಯ ಸಂತಾನೋತ್ಪತ್ತಿ ಜೀವನದ ಅಂತ್ಯವನ್ನು ಸೂಚಿಸುತ್ತದೆ. ಅಂದರೆ ಮಹಿಳೆಯ ಜೀವನದಲ್ಲಿ ಇನ್ನು ಮುಂದೆ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದ ಸಮಯ ಮತ್ತು ಆಕೆಯ ಋತುಚಕ್ರವು ಕೊನೆಗೊಳ್ಳುವ ಸಮಯವಾಗಿದೆ.
@TheLancet ಎಂಬ ಟ್ವಟರ್ ಖಾತೆಯಲ್ಲಿ ಋತುಬಂಧಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ, ವೈದ್ಯಕೀಯ ಆರೈಕೆ ಮತ್ತು ಅಗತ್ಯವಿರುವ ದೈಹಿಕ ಹಾಗೂ ಮಾನಸಿಕ ಬೆಂಬಲದ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
A new approach to menopause that better prepares and supports women during midlife is needed – one with high-quality information, empathic clinical care, & workplace adjustments as required.
On #WorldMenopauseDay, explore the Lancet Series on menopause ▶️ https://t.co/4avyCzoMqy pic.twitter.com/poSBRtZpSq
— The Lancet (@TheLancet) October 18, 2024
ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಹೆಚ್ಚು ರಕ್ತಸ್ರಾವ ಮತ್ತು ಅನಿಯಮಿತ ಮುಟ್ಟು. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಪೀರಿಯಡ್ ಆಗುವ ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಗಳಿಂದ ಏರುಪೇರಾಗಿ ತಿಂಗಳಿಗೆ ಎರಡು ಸಲವೂ ಆಗಬಹುದು. ಕೆಲವರಲ್ಲಿ ಹೆಚ್ಚು ರಕ್ತಸ್ರಾವವಾದರೆ ಇನ್ನೂ ಕೆಲವರಲ್ಲಿ ರಕ್ತಸ್ರಾವದ ಕೊರತೆಯಾಗಬಹುದು.
ರಾತ್ರಿ ಮಲಗಿರುವಾಗ ಅತಿಯಾದ ಬೇವರಿನಿಂದಾಗಿ ಪದೇ ಪದೇ ಎಚ್ಚರವಾಗುವುದು. ದೇಹದಲ್ಲಿ ಶಾಖ ವಿಪರೀತವಾಗುವುದು ಋತುಬಂಧದ ಸಮಯದಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಋತುಬಂಧದ ಸಮಯದಲ್ಲಿ ಹಾರ್ಮೋನ್ ಏರಿಳಿತಗಳಿಂದ ಈ ರೀತಿಯ ಸಮಸ್ಯೆ ಕಾಡುತ್ತದೆ.
ನಿದ್ರಾಹೀನತೆ ಜೊತೆಗೆ ಮಾನಸಿಕ ಒತ್ತಡ ಋತುಬಂಧದ ಸಮಯದಲ್ಲಿ ಹಾರ್ಮೋನ್ ಏರಿಳಿತಗಳಿಂದ ಈ ರೀತಿಯ ಸಮಸ್ಯೆ ಕಾಡುತ್ತದೆ. ಪದೇ ಪದೇ ಎಚ್ಚರಗೊಳ್ಳುವುದು, ಮಾನಸಿಕ ಖಿನ್ನತೆಗೆ, ಕಾರಣಗಳೇ ಇಲ್ಲದೇ ಸುಮ್ಮ ಸುಮ್ಮನೇ ಯೋಚನೆ, ಬೇಸರ ಮುಂದಾದ ಲಕ್ಷಣಗಳು ಕಂಡುಬರುತ್ತದೆ.
ಋತುಬಂಧದ ಸಮಯದಲ್ಲಿ ದೇಹ ಸಂಪೂರ್ಣ ಶುಷ್ಕವಾಗವ ಲಕ್ಷಣ ಕಂಡುಬರಬಹುದು. ಜೊತೆಗೆ ನಿಮ್ಮ ಖಾಸಗಿ ಅಂಗವು ಸಹ ಶುಷ್ಕವಾಗಿರಲಿದೆ. ಈ ಸಂದಭದಲ್ಲಿ ದೇಹಕ್ಕೆ ಹರಳೆಣ್ಣೆ ಸ್ನಾನ ಒಳ್ಳೆಯದು. ದೇಹ ಒಣಗದಂತೆ ನೋಡಿಕೊಳ್ಳುವುದರಿಂದ ಒಣಚರ್ಮದಿಂದ ಮುಕ್ತಿ ಪಡೆಯಬಹುದು
@TheLancet ಎಂಬ ಟ್ವಟರ್ ಖಾತೆಯಲ್ಲಿ ನೀಡಿರುವ ಫೋಸ್ಟ್ ಪ್ರಕಾರ ಮಹಿಳೆಯರಲ್ಲಿ ಋತುಬಂಧದ ನಂತರದ ದಿನಗಳಲ್ಲಿ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ಹಾಗೂ ಜಾಗೃತೆ ವಹಿಸಬೇಕು.
ಇದನ್ನೂ ಓದಿ: ಋತುಬಂಧದ ಸಮಯದಲ್ಲಿ ಸ್ತನಗಳ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ
ಋತುಬಂಧವನ್ನು ಆಂಟಿ-ಮುಲರಿಯನ್ ಹಾರ್ಮೋನ್ (AMH) ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ಈಸ್ಟ್ರೊಜೆನ್ ಮಟ್ಟವನ್ನು ಪರಿಶೀಲಿಸಿ ಋತುಬಂಧದ ಬಗ್ಗೆ ಪರೀಕ್ಷೆ ಮಾಡಬಹುದು. ಋತುಬಂಧದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ. ಇದಲ್ಲದೇ ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ ಮಟ್ಟವು ಸತತವಾಗಿ 30 mIU/mL ಗಿಂತ ಹೆಚ್ಚಿದ್ದರೆ ಮತ್ತು ಒಂದು ವರ್ಷದಿಂದ ಮುಟ್ಟಾಗದೆ ಹೋದಲ್ಲಿ ಇದು ಋತುಬಂಧದ ಅವಧಿಯನ್ನು ಸೂಚಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ