Afternoon Nap: ಊಟದ ನಂತರ ಸಣ್ಣ ನಿದ್ದೆ ಮಾಡುವುದು ಒಳ್ಳೆಯದೇ? ತಜ್ಞರು ಏನು ಹೇಳುತ್ತಾರೆ?

|

Updated on: Oct 19, 2024 | 3:18 PM

ಮಧ್ಯಾಹ್ನದ ಊಟದ ನಂತರ ಮಲಗುವ ಅಥವಾ ಸ್ವಲ್ಪ ಸಮಯದ ವರೆಗೆ ಕಿರು ನಿದ್ದೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಊಟದ ನಂತರ ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಮಗೆ ಏಕಕಾಲದಲ್ಲಿ ಮಂಪರು ಮತ್ತು ದಣಿವನ್ನು ಉಂಟುಮಾಡುತ್ತದೆ. ಆದರೆ ಹಗಲಿನಲ್ಲಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದೇ? ಮಧ್ಯಾಹ್ನದ ನಿದ್ರೆ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ? ನಿಮಗೂ ಈ ರೀತಿಯ ಪ್ರಶ್ನೆಗಳಿದ್ದರೆ ಅವುಗಳಿಗೆ ಇಲ್ಲಿದೆ ಉತ್ತರ.

Afternoon Nap: ಊಟದ ನಂತರ ಸಣ್ಣ ನಿದ್ದೆ ಮಾಡುವುದು ಒಳ್ಳೆಯದೇ? ತಜ್ಞರು ಏನು ಹೇಳುತ್ತಾರೆ?
Follow us on

ಸಾಮಾನ್ಯವಾಗಿ ಸಾಕಷ್ಟು ಜನ ಮಧ್ಯಾಹ್ನದ ಊಟದ ನಂತರ ಮಲಗುವ ಅಥವಾ ಸ್ವಲ್ಪ ಸಮಯದ ವರೆಗೆ ಕಿರು ನಿದ್ದೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಊಟದ ನಂತರ ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಮಗೆ ಏಕಕಾಲದಲ್ಲಿ ಮಂಪರು ಮತ್ತು ದಣಿವನ್ನು ಉಂಟುಮಾಡುತ್ತದೆ. ಆದರೆ ಹಗಲಿನಲ್ಲಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದೇ? ಮಧ್ಯಾಹ್ನದ ನಿದ್ರೆ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ? ನಿಮಗೂ ಈ ರೀತಿಯ ಪ್ರಶ್ನೆಗಳಿದ್ದರೆ ಅವುಗಳಿಗೆ ಇಲ್ಲಿದೆ ಉತ್ತರ.

ನಿಮ್ಮ ಆರೋಗ್ಯಕ್ಕೆ ಮಧ್ಯಾಹ್ನದ ನಿದ್ರೆ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದರ ಬಗ್ಗೆ ತಜ್ಞರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ವೈದ್ಯರು ಸಾಮಾನ್ಯವಾಗಿ 7 ರಿಂದ 8 ಗಂಟೆಗಳ ನಿದ್ರೆ ಒಳ್ಳೆಯದು ಎಂದು ಹೇಳುತ್ತಾರೆ. ಹೆಚ್ಚಿನ ಸಮಯದಲ್ಲಿ ನೀವು ಕೆಲಸ, ಕುಟುಂಬದ ಜವಾಬ್ದಾರಿಗಳು ಮತ್ತು ಇತರ ಕಾರಣಗಳಿಂದಾಗಿ ಬೆಳಿಗ್ಗೆ ಬೇಗನೆ ಎದ್ದೇಳಬೇಕಾಗುತ್ತದೆ. ಅಂತಹ ಸಮಯದಲ್ಲಿ ಮಧ್ಯಾಹ್ನ ಮಲಗಬೇಕು. ಹೆಚ್ಚುತ್ತಿರುವ ಕೆಲಸದ ಹೊರೆ, ಬಿಡುವಿಲ್ಲದ ಜೀವನಶೈಲಿ ಮತ್ತು ಒತ್ತಡದ ಸಂದರ್ಭಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ, ಮಧ್ಯಾಹ್ನದ ನಿದ್ರೆ ಉಲ್ಲಾಸ ನೀಡುತ್ತದೆ ಜೊತೆಗೆ ದಣಿವನ್ನು ಕಡಿಮೆ ಮಾಡುತ್ತದೆ. ಮಧ್ಯಾಹ್ನದ ನಿದ್ರೆಯು ದೇಹವನ್ನು ಮಾತ್ರವಲ್ಲದೆ ಮನಸ್ಸನ್ನೂ ವಿಶ್ರಾಂತಿಗೊಳಿಸುತ್ತದೆ. ದಿನಕ್ಕೆ ಸುಮಾರು 1 ಗಂಟೆ ಮಲಗುವುದು ಇಡೀ ದೇಹದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಅಲ್ಲದೆ, ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಅದಕ್ಕಿಂತ ಹೆಚ್ಚಿನ ನಿದ್ದೆ ಮಧ್ಯಾಹ್ನದ ಸಮಯದಲ್ಲಿ ಒಳ್ಳೆಯದಲ್ಲ.

ಇದನ್ನೂ ಓದಿ: ಡಿಜಿಟಲ್ ಡಿಟಾಕ್ಸ್ ಗೆ ಆಯುರ್ವೇದ ವಿಧಾನವೇ ಪರಿಹಾರ

ಆದರೆ, ಮಧ್ಯಾಹ್ನ ಅರ್ಧ ಗಂಟೆ ಅಥವಾ 1 ಗಂಟೆಗಿಂತ ಹೆಚ್ಚು ನಿದ್ರೆ ಮಾಡಬೇಡಿ. ಇದಕ್ಕಿಂತ ಹೆಚ್ಚು ಸಮಯ ಮಲಗುವುದು ನಿಮ್ಮ ದೇಹದ ಜೈವಿಕ ಗಡಿಯಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿ ನೈಸರ್ಗಿಕವಾಗಿ ಬರುವ ನಿದ್ರೆಗೆ ಇದು ಅಡ್ಡಿಯಾಗುತ್ತದೆ. ಆದ್ದರಿಂದ ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡುವವರು ಹಗಲಿನಲ್ಲಿ ಅರ್ಧ ಗಂಟೆಗಿಂತ ಹೆಚ್ಚು ನಿದ್ರೆ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ.

ಮಕ್ಕಳಿಗೆ ಮಧ್ಯಾಹ್ನದ ನಿದ್ರೆ ಒಳ್ಳೆಯದಲ್ಲ

ಶಾಲಾ ವಿದ್ಯಾರ್ಥಿಗಳು ಮನೆಗೆ ಬಂದ ಮೇಲೆ ಅಂದರೆ ಸಾಮಾನ್ಯವಾಗಿ 3 ಗಂಟೆಯ ನಂತರ ಶಾಲೆಯಿಂದ ಮನೆಗೆ ಬಂದರೆ. ಅವರನ್ನು ಆಡಲು ಬಿಡಿ. ಈ ರೀತಿ ಮಾಡಿದರೆ, ಮಕ್ಕಳು ರಾತ್ರಿ ಬೇಗನೆ ಮಲಗಲು ಒಗ್ಗಿಕೊಳ್ಳುತ್ತಾರೆ. ಮಧ್ಯಾಹ್ನ 3 ಗಂಟೆಯ ನಂತರ ಮಲಗುವುದರಿಂದ ರಾತ್ರಿಯಲ್ಲಿ ಮಕ್ಕಳ ನಿದ್ರೆಗೆ ಭಂಗವಾಗುತ್ತದೆ. ಹಾಗಾಗಿ ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಒಳ್ಳೆಯದಲ್ಲ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ