Disconnect to reconnect: ಡಿಜಿಟಲ್ ಡಿಟಾಕ್ಸ್ ಗೆ ಆಯುರ್ವೇದ ವಿಧಾನವೇ ಪರಿಹಾರ

ಡಿಜಿಟಲ್ ಡಿಟಾಕ್ಸ್ ಗೆ ಆಯುರ್ವೇದ ವಿಧಾನವೇ ಪರಿಹಾರ ನೀಡುತ್ತದೆ. ಡಿಜಿಟಲ್ ಡಿಟಾಕ್ಸ್ ಎನ್ನುವುದು ವ್ಯಕ್ತಿಯು ಸ್ವಯಂಪ್ರೇರಣೆಯಿಂದ ಸ್ಮಾರ್ಟ್‌ಫೋನ್‌ಗಳು , ಕಂಪ್ಯೂಟರ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಜಿಟಲ್ ಸಾಧನಗಳನ್ನು ಬಳಸುವುದನ್ನು ತಡೆಯುವ ಅವಧಿಯಾಗಿದೆ. ಜೊತೆಗೆ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಈ ಮಾರ್ಗ ಬಹಳ ಉತ್ತಮ ಎಂದು ತಜ್ಞರು ಹೇಳುತ್ತಿದ್ದಾರೆ. ಡಿಜಿಟಲ್ ಡಿಟಾಕ್ಸ್ ನಮ್ಮೊಂದಿಗೆ ಮತ್ತು ನಮ್ಮ ಸುತ್ತಮುತ್ತಲಿನವರೊಂದಿಗೆ ಮರುಸಂಪರ್ಕಿಸಲು ನಮಗೆ ಸಹಾಯ ಮಾಡುತ್ತದೆ. ಈ ವಿರಾಮ ಮಾನಸಿಕ ಆಯಾಸವನ್ನು ಕಡಿಮೆ ಮಾಡುವುದಲ್ಲದೆ ಯೋಗಕ್ಷೇಮ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

Disconnect to reconnect: ಡಿಜಿಟಲ್ ಡಿಟಾಕ್ಸ್ ಗೆ ಆಯುರ್ವೇದ ವಿಧಾನವೇ ಪರಿಹಾರ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 19, 2024 | 11:42 AM

ನಿರಂತರವಾಗಿ ಡಿಜಿಟಲ್ ಸಂಪರ್ಕದಲ್ಲಿರುವ ಈ ಯುಗದಲ್ಲಿ, ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ತಂತ್ರಜ್ಞಾನದಿಂದ ವಿರಾಮ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ. ಏಕಕಾಲದಲ್ಲಿ ನಮ್ಮನ್ನು ಹಲವಾರು ದಿಕ್ಕಿಗೆ ಎಳೆಯುವ ಈ ಜಗತ್ತಿನಲ್ಲಿ ನಾವು ವಾಸ ಮಾಡುತ್ತಿದ್ದೇವೆ. ತಂತ್ರಜ್ಞಾನ ನಮಗೆ ಅನುಕೂಲ ತರುತ್ತದೆಯಾದರೂ, ಅದರ ನಿರಂತರ ಬಳಕೆಯು ಒತ್ತಡ, ಆತಂಕಕ್ಕೆ ಕಾರಣವಾಗುತ್ತದೆ. ಹಾಗಾಗಿ ಡಿಜಿಟಲ್ ಡಿಟಾಕ್ಸ್ ಗೆ ಆಯುರ್ವೇದ ವಿಧಾನವೇ ಪರಿಹಾರ ನೀಡುತ್ತದೆ. ಡಿಜಿಟಲ್ ಡಿಟಾಕ್ಸ್ ಎನ್ನುವುದು ವ್ಯಕ್ತಿಯು ಸ್ವಯಂಪ್ರೇರಣೆಯಿಂದ ಸ್ಮಾರ್ಟ್‌ಫೋನ್‌ಗಳು , ಕಂಪ್ಯೂಟರ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಜಿಟಲ್ ಸಾಧನಗಳನ್ನು ಬಳಸುವುದನ್ನು ತಡೆಯುವ ಅವಧಿಯಾಗಿದೆ. ಜೊತೆಗೆ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಈ ಮಾರ್ಗ ಬಹಳ ಉತ್ತಮ ಎಂದು ತಜ್ಞರು ಹೇಳುತ್ತಿದ್ದಾರೆ. ಡಿಜಿಟಲ್ ಡಿಟಾಕ್ಸ್ ನಮ್ಮೊಂದಿಗೆ ಮತ್ತು ನಮ್ಮ ಸುತ್ತಮುತ್ತಲಿನವರೊಂದಿಗೆ ಮರುಸಂಪರ್ಕಿಸಲು ನಮಗೆ ಸಹಾಯ ಮಾಡುತ್ತದೆ. ಈ ವಿರಾಮ ಮಾನಸಿಕ ಆಯಾಸವನ್ನು ಕಡಿಮೆ ಮಾಡುವುದಲ್ಲದೆ ಯೋಗಕ್ಷೇಮ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ಉತ್ತಮ ಆರೋಗ್ಯದ ಕೀಲಿಕೈ ಯಾವುದು ಗೊತ್ತಾ?

ಡಾ. ಧರ್ಮೇಶ್ ಶಾ ಅವರು ಆಯುರ್ವೇದ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ಡಿಕೋಡ್ ಮಾಡುವ ಮೂಲಕ ಡಿಜಿಟಲ್ ಡಿಟಾಕ್ಸ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಆಯುರ್ವೇದದ ಪ್ರಕಾರ, ಉತ್ತಮ ಆರೋಗ್ಯದ ಕೀಲಿಕೈ ಮಿತ ಮತ್ತು ಸಮತೋಲನದಲ್ಲಿದೆ, ಈ ಪರಿಕಲ್ಪನೆಯನ್ನು ನಿಧಾನ ಪರಿವರ್ತನಾ ಎಂದು ಕರೆಯಲಾಗುತ್ತದೆ. ನಾವು ನಿರಂತರವಾಗಿ ಡಿಜಿಟಲ್ ಸಾಧನಗಳನ್ನು ಬಳಸುವುದರಿಂದ ಮನಸ್ಸು ಚಡಪಡಿಸುತ್ತದೆ, ನಿದ್ರಾಹೀನತೆ ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ಆಯುರ್ವೇದ ತತ್ವಗಳಿಗೆ ಅನುಗುಣವಾಗಿ ಮಾಡಿದ ಡಿಜಿಟಲ್ ಡಿಟಾಕ್ಸ್, ಮಾನಸಿಕ ಸ್ಪಷ್ಟತೆ ಮತ್ತು ಸಕಾರಾತ್ಮಕತೆ ಹೆಚ್ಚಿಸುವ ಮೂಲಕ ಮನಸ್ಸು ಮತ್ತು ದೇಹವನ್ನು ಸಮತೋಲನಗೊಳಿಸಲು ಒತ್ತು ನೀಡುತ್ತದೆ. ತಾಜಾ ಹಣ್ಣು, ತರಕಾರಿ, ಬೀಜಗಳು ಮತ್ತು ಡೈರಿಗಳಂತಹ ಸಾತ್ವಿಕ ಆಹಾರಗಳಿಂದ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ದೇಹಕ್ಕೆ ಚೈತನ್ಯವನ್ನು ನೀಡುತ್ತದೆ. ಡಿಜಿಟಲ್ ಡಿಟಾಕ್ಸ್ ಸಮಯದಲ್ಲಿ ಕೆಫೀನ್, ಆಲ್ಕೋಹಾಲ್ ಮತ್ತು ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸುವುದು ಬಹಳ ಮುಖ್ಯವಾಗಿದೆ.

ಆಯುರ್ವೇದ ಚಿಕಿತ್ಸೆಗಳಿಂದ ಪರಿಹಾರ;

ಆಯುರ್ವೇದವು ಯೋಗ, ಪ್ರಾಣಾಯಾಮ (ಉಸಿರಾಟದ ವ್ಯಾಯಾಮಗಳು) ಮತ್ತು ಧ್ಯಾನದಂತಹ ಅಭ್ಯಾಸಗಳನ್ನು ಸಹ ಒಳಗೊಂಡಿದೆ, ಇದು ನಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಕಾರಿಯಾಗಿದೆ. ಈ ಅಭ್ಯಾಸಗಳು ಆತಂಕವನ್ನು ಕಡಿಮೆ ಮಾಡುತ್ತದೆ. ಡಿಜಿಟಲ್ ಡಿಟಾಕ್ಸ್ ಗೆ ಪಂಚಕರ್ಮದಂತಹ ಆಯುರ್ವೇದ ಚಿಕಿತ್ಸೆಗಳು ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಈ ಚಿಕಿತ್ಸೆಯು ಅಬ್ಯಾಂಗ (ಗಿಡಮೂಲಿಕೆ ತೈಲ ಮಸಾಜ್) ಮತ್ತು ಶಿರೋಧಾರ (ಹಣೆಗೆ ಎಣ್ಣೆಯಮಸಾಜ್) ನಂತಹ ತೈಲ ಮಸಾಜ್ ಗಳನ್ನು ಒಳಗೊಂಡಿರುತ್ತದೆ, ಇದು ನರಮಂಡಲವನ್ನು ಶಾಂತಗೊಳಿಸಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇತರ ಚಿಕಿತ್ಸೆಗಳಲ್ಲಿ ಕರ್ಣ ಪುರಾಣ (ಕಿವಿಗಳಿಗೆ ಔಷಧಿಯುಕ್ತ ಎಣ್ಣೆಯನ್ನು ತುಂಬುವುದು), ಅಕ್ಷಿ ತರ್ಪಣ (ಗಿಡಮೂಲಿಕೆಗಳಿಂದ ಕಣ್ಣಿನ ಚಿಕಿತ್ಸೆ) ಮತ್ತು ನಾಸ್ಯ (ಮೂಗಿನ ಹನಿಗಳು) ಸೇರಿವೆ, ಈ ಪ್ರತಿಯೊಂದು ವಿಧಾನಗಳು ಅತಿಯಾದ ಡಿಜಿಟಲ್ ಬಳಕೆಯಿಂದ ಮಾನಸಿಕ ಮತ್ತು ದೈಹಿಕವಾಗಿ ಬೇಸತ್ತಿರುವವರಿಗೆ ಉಪಯೋಗವಾಗುತ್ತದೆ.

ಮನೋವೈಜ್ಞಾನಿಕ ಪ್ರಯೋಜನಗಳು;

ಸ್ವಲ್ಪ ಸಮಯದವರೆಗೆ ಡಿಜಿಟಲ್ ಜಗತ್ತಿನಿಂದ ದೂರವಿರುವುದು ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಪರದೆಯ ಸಮಯವನ್ನು ಕಡಿಮೆ ಮಾಡುವುದರಿಂದ ನಿರಂತರವಾಗಿ ಉಂಟಾಗುತ್ತಿದ್ದ ಆತಂಕ, ಖಿನ್ನತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಸಂಶೋಧನೆ ತಿಳಿಸುತ್ತದೆ. ಇದಲ್ಲದೆ, ಡಿಜಿಟಲ್ ಎಂಬ ಗೊಂದಲದ ಜಗತ್ತಿನಲ್ಲಿ ಸಮಯ ಕಳೆಯುವುದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ಡಿಟಾಕ್ಸ್ ಸಮಯದಲ್ಲಿ ಆಯುರ್ವೇದದ ಮತ್ತೊಂದು ತತ್ವವೆಂದರೆ ಪ್ರಕೃತಿಯ ಜೊತೆಗೆ ಬೆರೆಯುವುದಾಗಿದೆ.ಅಂದರೆ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು, ಪಕ್ಷಿಗಳ ಮಾತುಗಳನ್ನು ಕೇಳುವುದು ಅಥವಾ ನೈಸರ್ಗಿಕ ಪರಿಸರದಲ್ಲಿ ಧ್ಯಾನ ಮಾಡುವುದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕವಾಗಿ ನಿಮ್ಮನ್ನು ಗಟ್ಟಿಗೊಳಿಸುತ್ತದೆ.

ಇದನ್ನೂ ಓದಿ: ಎಡಗೈ ಹೆಚ್ಚಾಗಿ ಬಳಸುವವರಿಗೆ ರೋಗಗಳ ಅಪಾಯ ಹೆಚ್ಚು; ಸಂಶೋಧನೆಯಿಂದ ಬಹಿರಂಗ

ಡಿಜಿಟಲ್ ಡಿಟಾಕ್ಸ್ಗೆ ಪ್ರಾಯೋಗಿಕ ಸಲಹೆಗಳು:

*ಡಿಜಿಟಲ್ ಬಳಕೆಗೆ ನಿರ್ದಿಷ್ಟ ಸಮಯಗಳನ್ನು ನಿಗದಿಪಡಿಸಿ, ಉದಾಹರಣೆಗೆ ಕೆಲವು ಗಂಟೆಗಳು ಮಾತ್ರ ಇಮೇಲ್ ಗಳನ್ನು ಪರಿಶೀಲಿಸುವುದು.

*ಮನಸ್ಸಿನ ಚಡಪಡಿಕೆಗೆ ಕಾರಣವಾಗುವ ವಿಷಯಗಳನ್ನು ಯೋಚಿಸುವುದನ್ನು ತಪ್ಪಿಸಲು ಸಾತ್ವಿಕ ಆಹಾರಗಳನ್ನು ಸೇವಿಸಿ.

*ಯೋಗ, ಪ್ರಾಣಾಯಾಮ ಅಥವಾ ಧ್ಯಾನದಂತಹ ದಿನನಿತ್ಯ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.

*ಪ್ರಕೃತಿಯಲ್ಲಿ ಸಮಯ ಕಳೆಯಿರಿ, ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

*ನಿಮ್ಮ ಡಿಜಿಟಲ್ ಡಿಟಾಕ್ಸ್ ಪ್ರಯಾಣವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಕುಟುಂಬ ಅಥವಾ ಸ್ನೇಹಿತರನ್ನು ತೊಡಗಿಸಿಕೊಳ್ಳಿ.

ಒಟ್ಟಾರೆಯಾಗಿ ಹೇಳುವುದಾದರೆ, ಡಿಜಿಟಲ್ ಡಿಟಾಕ್ಸ್ಗೆ, ಆಯುರ್ವೇದ ವಿಧಾನವು ಆಧುನಿಕ ಡಿಜಿಟಲ್ ಜೀವನದ ಹಾನಿಕಾರಕ ಪರಿಣಾಮಗಳನ್ನು ಎದುರಿಸಲು ಸಮಗ್ರ ವಿಧಾನವಾಗಿದೆ. ಇದರಿಂದ ವ್ಯಕ್ತಿಗಳು ತಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಮತ್ತೆ ಪಡೆದುಕೊಳ್ಳಬಹುದು. ಆಯುರ್ವೇದದ ತತ್ವಗಳನ್ನು ಅಳವಡಿಸಿಕೊಳ್ಳುವುದು ನಮ್ಮೊಂದಿಗೆ ಮತ್ತು ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ಮರುಸಂಪರ್ಕಿಸಲು, ಒತ್ತಡವನ್ನು ಕಡಿಮೆ ಮಾಡಲು, ಮಾನಸಿಕ ಆರೋಗ್ಯವನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್