Health Tips: ಮಗುವಿನ ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡರೆ, ತಕ್ಷಣ ಈ ರೀತಿ ಮಾಡಿ
ಚಿಕ್ಕ ಮಕ್ಕಳಿಗೆ ಹೊಸ ವಿಷಯ ಅಥವಾ ಹೊಸ ವಸ್ತುಗಳು ತುಂಬಾ ಕುತೂಹಲ ಹುಟ್ಟಿಸುತ್ತದೆ. ಹಾಗಾಗಿ ಕಂಡಿದ್ದನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ತಮ್ಮ ಕಣ್ಣುಗಳಿಗೆ ಇಷ್ಟವಾದದ್ದನ್ನು ತಿನ್ನುಬೇಕು ಎಂದು ಅವರು ಭಾವಿಸುತ್ತಾರೆ. ಅನೇಕ ಬಾರಿ ಮಗು ಸಣ್ಣ ಚೆಂಡುಗಳು, ನಾಣ್ಯಗಳು, ದಪ್ಪ ಕಡಲೆಕಾಳು ಹೀಗೆ ನಾನಾ ರೀತಿಯ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತದೆ. ಕೆಲವು ಬಾರಿ ಇಂತಹ ವಸ್ತುಗಳು ಅವರ ಗಂಟಲಿನಲ್ಲಿ ಸಿಲುಕಿಕೊಳ್ಳುತ್ತವೆ, ಅವುಗಳನ್ನು ತೆಗೆಯುವುದು ತುಂಬಾ ಕಷ್ಟವಾಗುತ್ತದೆ. ಜೊತೆಗೆ ಮಗುವೂ ಅದರಿಂದ ಭಯ ಪಡುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಗಂಭೀರ ಸಮಸ್ಯೆಗೆ ಎಡೆ ಮಾಡಿ ಕೊಡಬಹುದು. ಹಾಗಾಗಿ ಪೋಷಕರು ಈ ಬಗ್ಗೆ ಜಾಗರೂಕತೆ ವಹಿಸುವುದು ಅವಶ್ಯಕ. ಹಾಗಾದರೆ ಇಂತಹ ಸಂದರ್ಭ ಬಂದರೆ ಏನು ಮಾಡಬೇಕು? ಯಾವ ರೀತಿ ಪರಿಹರಿಸಿಕೊಳ್ಳಬೇಕು? ಇಲ್ಲಿದೆ ಮಾಹಿತಿ.
ಸಣ್ಣ ಮಗುವಿನ ದೇಹವು ತುಂಬಾ ನಾಜೂಕಾಗಿರುತ್ತದೆ. ಅದರಲ್ಲಿಯೂ ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂಬುದು ತಿಳಿದಿರುವುದಿಲ್ಲ. ಚಿಕ್ಕ ಮಕ್ಕಳಿಗೆ ಹೊಸ ವಿಷಯ ಅಥವಾ ಹೊಸ ವಸ್ತುಗಳು ತುಂಬಾ ಕುತೂಹಲ ಹುಟ್ಟಿಸುತ್ತದೆ. ಹಾಗಾಗಿ ಕಂಡಿದ್ದನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ತಮ್ಮ ಕಣ್ಣುಗಳಿಗೆ ಇಷ್ಟವಾದದ್ದನ್ನು ತಿನ್ನುಬೇಕು ಎಂದು ಅವರು ಭಾವಿಸುತ್ತಾರೆ. ಅನೇಕ ಬಾರಿ ಮಗು ಸಣ್ಣ ಚೆಂಡುಗಳು, ನಾಣ್ಯಗಳು, ದಪ್ಪ ಕಡಲೆಕಾಳು ಹೀಗೆ ನಾನಾ ರೀತಿಯ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತದೆ. ಕೆಲವು ಬಾರಿ ಇಂತಹ ವಸ್ತುಗಳು ಅವರ ಗಂಟಲಿನಲ್ಲಿ ಸಿಲುಕಿಕೊಳ್ಳುತ್ತವೆ, ಅವುಗಳನ್ನು ತೆಗೆಯುವುದು ತುಂಬಾ ಕಷ್ಟವಾಗುತ್ತದೆ. ಜೊತೆಗೆ ಮಗುವೂ ಅದರಿಂದ ಭಯ ಪಡುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಗಂಭೀರ ಸಮಸ್ಯೆಗೆ ಎಡೆ ಮಾಡಿ ಕೊಡಬಹುದು. ಹಾಗಾಗಿ ಪೋಷಕರು ಈ ಬಗ್ಗೆ ಜಾಗರೂಕತೆ ವಹಿಸುವುದು ಅವಶ್ಯಕ. ಹಾಗಾದರೆ ಇಂತಹ ಸಂದರ್ಭ ಬಂದರೆ ಏನು ಮಾಡಬೇಕು? ಯಾವ ರೀತಿ ಪರಿಹರಿಸಿಕೊಳ್ಳಬೇಕು? ಇಲ್ಲಿದೆ ಮಾಹಿತಿ.
ಮಗುವಿನ ಗಂಟಲಿನಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಾಗ ಅದು ಅಳಲು ಪ್ರಾರಂಭಿಸಿದರೆ, ಗಂಟಲಿನಲ್ಲಿ ಸಿಕ್ಕಿಬಿದ್ದ ವಸ್ತುವು ಉಸಿರಾಟದ ಪ್ರಕ್ರಿಯೆ ನಿಧಾನವಾಗುವಂತೆ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಪೋಷಕರಿಗೆ ಗಾಬರಿ ಆಗುವುದರಿಂದ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಹಾಗಾಗಿ ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಆದಷ್ಟು ಜಾಗರೂಕರಾಗಿರಬೇಕು. ಈ ಬಗ್ಗೆ ಡಾ. ತರುಣ್ ಆನಂದ್ ಹೇಳುವ ಪ್ರಕಾರ, ಮಗುವಿನ ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡರೆ ಪೋಷಕರು ಕೋಪಗೊಳ್ಳುವುದು ಅಥವಾ ಹೆದರುವುದನ್ನು ತಪ್ಪಿಸಬೇಕು. ಏಕೆಂದರೆ ಅದಾಗಲೇ ಮಗು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆದರಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಅಂತಹ ಪರಿಸ್ಥಿತಿಯಲ್ಲಿ, ನೀವು ಕೋಪಗೊಂಡರೆ ಅಥವಾ ಭಯಪಟ್ಟರೆ, ತೊಂದರೆ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಮನಸ್ಸನ್ನು ಶಾಂತವಾಗಿಟ್ಟುಕೊಂಡಾಗ ಮಾತ್ರ ಕೆಲಸ ಸರಳವಾಗಿ ಮುಗಿಯಲು ಸಾಧ್ಯವಾಗುತ್ತದೆ.
ಬೆರಳಿನಿಂದ ತೆಗೆಯಲು ಪ್ರಯತ್ನಿಸಿ: ಮಗುವಿನ ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡಿದ್ದರೆ, ಮೊದಲು ಮಗುವಿನ ಬಾಯಿಯನ್ನು ತೆರೆಯಲು ಪ್ರಯತ್ನಿಸಿ. ಏನಾದರೂ ಮೇಲಕ್ಕೆ ಗೋಚರಿಸಿಸುತ್ತಿದ್ದರೆ ಅದನ್ನು ಬೆರಳಿನಿಂದ ತೆಗೆಯಲು ಪ್ರಯತ್ನಿಸಿ. ಆದರೆ ನೆನಪಿರಲಿ ಭಯದಿಂದ ಆ ವಸ್ತುವನ್ನು ಕೆಳಕ್ಕೆ ತಳ್ಳಬಾರದು ಬದಲಾಗಿ ಅದನ್ನು ಹೊರಗೆ ಎಳೆಯಬೇಕು.
ಮಗುವನ್ನು ಶಾಂತವಾಗಿರಿಸಿಕೊಳ್ಳಿ: ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡರೆ, ಮಗುವನ್ನು ಶಾಂತಗೊಳಿಸಲು ಪ್ರಯತ್ನಿಸಿ. ಜೊತೆಗೆ ವೈದ್ಯರ ಪ್ರಕಾರ, ಮಗುವಿನ ಕುತ್ತಿಗೆಯಲ್ಲಿ ಏನಾದರೂ ಸಿಲುಕಿಕೊಂಡರೆ, ಮಗುವನ್ನು ಮಲಗಲು ಬಿಡಬಾರದು ಎಂಬುದು ನೆನೆಪಿನಲ್ಲಿರಲಿ.
ಬೆನ್ನಿನ ಮೇಲೆ ಲಘುವಾಗಿ ತಟ್ಟಿ: ಮಗುವಿನ ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡರೆ, ಅವನ ಬೆನ್ನಿನ ಮೇಲೆ 5 ಬಾರಿ ಲಘುವಾಗಿ ತಟ್ಟಿ. ಇದು ಮಗುವಿಗೆ ಕೆಮ್ಮು ಅಥವಾ ಸೀನಲು ಸಹಾಯ ಮಾಡುತ್ತದೆ. ಮಗು ಜೋರಾಗಿ ಕೆಮ್ಮಿದಾಗ ಅಥವಾ ಸೀನಿದಾಗ, ಅದು ಗಂಟಲಿನಲ್ಲಿ ಸಿಕ್ಕಿಬಿದ್ದ ವಸ್ತುವನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಮನೆಯಲ್ಲಿ ಸಾಧ್ಯವಾಗದಿದ್ದರೆ ತಡಮಾಡದೆ ವೈದ್ಯರ ಬಳಿ ಮಗುವನ್ನು ಕರೆದುಕೊಂಡು ಹೋಗಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ