ಮಳೆ ಎಫೆಕ್ಟ್: ಬೆಂಗಳೂರಿನ ಜನತೆಗೆ ರೋಗ ಭೀತಿ, ಎಚ್ಚರಿಕೆ ನೀಡಿದ ವೈದ್ಯರು!
ಸಿಲಿಕಾನ್ ಸಿಟಿ ಬೆಂಗಳೂರು ಮಳೆಯೂರು ಆಗಿ ಬದಲಾಗಿದೆ.. ಕಳೆದ ಎರಡು ದಿನದಿಂದ ಧೋ ಅಂತ ಮಳೆ ಸುರಿಯುತ್ತಿದ್ದು, ನಗರದ ಬಹುತೇಕ ರಸ್ತೆಗಳು ಮಳೆ ನೀರಿನಿಂದ ತುಂಬಿ ನದಿಯಂತಾಗಿದ್ದವು. ಅಲ್ಲದೇ ಮನೆಗಳಿಗೆ ನುಗ್ಗಿ ಭಾರೀ ಅವಾಂತರಗಳು ಸೃಷ್ಟಿಸಿತ್ತು. ಇದೀಗ ಮಳೆರಾಯ ಕೊಂಡ ಬಿಡುವು ಕೊಟ್ಟಿದ್ದು, ರಾಜಧಾನಿ ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಆದ್ರೆ, ಮಳೆ ಎಫೆಕ್ಟ್ ನಿಂದ ಜನರಿಗೆ ಖಾಯಿಲೆಗಳು ಒಕ್ಕರಿಸೂ ಆತಂಕ ಎದುರಾಗಿದೆ.
ಬೆಂಗಳೂರು, (ಅಕ್ಟೋಬರ್ 17): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆರಾಯನ ಆರ್ಭಟ ಶುರುವಾಗಿದೆ. ಬಿಟ್ಟು ಬಿಡದೆ ಶುರುಯುತ್ತಿರೋ ಮಳೆಯಿಂದ ರಾಜಧಾನಿಯ ವೆದರ್ ಫುಲ್ ಕೂಲ್ ಕೂಲ್ ಆಗಿದೆ. ಇದರ ಜೊತೆಗೆ ಮಳೆ ನೀರು ಎಲ್ಲಡೆ ನುಗ್ಗಿ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ.ಮತ್ತೊಂದೆಡೆ ರಾಜ ಕಾಲುವೆಯ ಕೊಚ್ಚೆ ನೀರು ಮನೆಗಳಿಗೆ ನುಗ್ಗಿರುವುದರಿಂದ ಸೊಳ್ಳೆಗಳ ಕಾಟ ಶುರುವಾಗಿದೆ. ಈ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಮತ್ತೆ ಏರಿಕೆಯ ಎಚ್ಚರಿಕೆಯನ್ನ ವೈದ್ಯರು ನೀಡಿದ್ದಾರೆ. ಹೀಗಾಗಿ ಮಳೆಯಿಂದ ಕೊಂಚ ಎಚ್ಚರ ವಹಿಸುವಂತೆ ರಜಧಾನಿಯ ಜನರಿಗೆ ಸಲಹೆ ನೀಡಿದ್ದಾರೆ.
ಇನ್ನು ಈಗಾಗಲೇ ಮೂರು ದಿನದಿಂದ ಶುರುಯುತ್ತಿರುವ ಮಳೆಯಿಂದ ನಗರದಲ್ಲಿ ಶೀತ, ಜ್ವರದ ಪ್ರಕರಣಗಳು ಕೂಡ ಹೆಚ್ಚಳಗೊಂಡಿದೆ. ಕುಡಿಯುವ ನೀರಿಗೆ ಕಲುಷಿತ ನೀರು ಮಿಕ್ಸ್ ಆಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ವೈರಲ್ ಫೀವರ್ ಹಾಗೂ ತಂಪಾದ ವಾತವರಣದಿಂದ ನಾನಾ ಆರೋಗ್ಯದ ಸಮಸ್ಯೆ ಕಂಡು ಬರುತ್ತಿವೆ. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಹೆಚ್ಚಲಿದೆ ವರುಣಾರ್ಭಟ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ವೈದ್ಯರ ಎಚ್ಚರಿಕೆಯಿಂದ ಸಿಲಿಕಾನ್ ಸಿಟಿ ಜನರಿಗೆ ಆತಂಕ ಶುರುವಾಗಿದೆ. ಒಂದು ಕಡೆ ಮಳೆಯಿಂದ ಜನರ ಜೀವನ ಬೀದಿಗೆ ಬಂದ್ರೆ ಮತ್ತೊಂದಡೆ ಮಳೆಯ ನಿರಂತರ ಎಫೆಕ್ಟ್ ಹಾಗೂ ಆರೋಗ್ಯದಲ್ಲಿ ಏರುಪೇರು ಶುರುವಾಗಿದೆ. ಮಳೆಯಿಂದ ಉಂಟಾದ ಜಲಾವೃತದಿಂದ ಕೊಳಚೆ ಚರಂಡಿ ನೀರಿನ ಹಾವಳಿಗೆ ಸೊಳ್ಳೆ ಕಾಟ ಶುರುವಾಗಿ ಕೆಮ್ಮು, ನೆಗಡಿ, ವೈರಲ್ ಫೀವರ್ ಜಾಸ್ತಿ ಆಗ್ತಿದೆ. ಹೀಗಾಗಿ ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಆದಷ್ಟು ಕಾಯಿಸಿದ ನೀರು ಕುಡಿಯುವ ಜತೆಗೆ ಹೊರಗಿನ ತಿಂಡಿ ತಿನಿಸುಗಳಿಂದ ದೂರ ಇರಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.