ಕರ್ನಾಟಕದಲ್ಲಿ ಮತ್ತೆ ಹೆಚ್ಚಲಿದೆ ವರುಣಾರ್ಭಟ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

3 ದಿನದ ಹಿಂದೆ ಶುರುವಾದ ಮಳೆಗೆ ಬೆಂಗಳೂರು ನಡುಗಿ ಹೋಗಿದ್ದು, ಹಲವು ಏರಿಯಾಗಳು ಜಲಾವೃತಗೊಂಡಿದ್ದವು. ಮಳೆಯಿಂದಾಗಿ ನಾನಾ ಅವಾಂತರಗಳು ಸಂಭವಿಸಿದ್ದವು. ಆದರೆ ಇಂದು ಮಳೆರಾಯ ಕೊಂಚ ವಿರಾಮ ನೀಡಿದ್ದು, ಸಿಟಿ ಜನರು ಬಿಸಿಲು ಕಂಡು ಖುಷಿಯಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಮತ್ತೆ ವರುಣಾರ್ಭಟ ಹೆಚ್ಚು ಸಾಧ್ಯತೆ ಇದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಕರ್ನಾಟಕದಲ್ಲಿ ಮತ್ತೆ ಹೆಚ್ಚಲಿದೆ ವರುಣಾರ್ಭಟ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ
ಕರ್ನಾಟಕದಲ್ಲಿ ಮತ್ತೆ ಹೆಚ್ಚಲಿದೆ ವರುಣಾರ್ಭಟ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 17, 2024 | 4:05 PM

ಬೆಂಗಳೂರು, ಅಕ್ಟೋಬರ್​ 17: ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ (rain) ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ನಾನಾ ಅವಾಂತರಗಳು ಸಂಭವಿಸಿವೆ. ಇಷ್ಟು ದಿನ ಕಾಣಿಯಾಗಿದ್ದ ಸೂರ್ಯದೇವ ಇಂದು ಆಚೆ ಬಂದಿದ್ದಾನೆ. ಆದರೆ ಮಳೆ ಹೊಡೆತಕ್ಕೆ ಸಿಲುಕಿ ಅದರಿಂದ ಸಹಜ ಸ್ಥಿತಿಯತ್ತ ಮರಳುತ್ತಿರುವಾಗಲೇ ಬೆಂಗಳೂರಿಗೆ ಮತ್ತೆ ವರುಣನ ಎಚ್ಚರಿಕೆ ಕೊಟ್ಟಿದೆ. ಅಕ್ಟೋಬರ್ 21ರವರೆಗೆ ನಗರದಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ರಾಜ್ಯ ಹವಾಮಾನ ಇಲಾಖೆಯ ತಜ್ಞ ಸಿ.ಎಸ್.ಪಾಟೀಲ್, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಅ.21ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಹಾವೇರಿ, ಧಾರವಾಡ ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ 7 ಜಿಲ್ಲೆಗಳಲ್ಲಿ ಇಂದು ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಳೆ ಅವಾಂತರ: ತುಂತುರು ಅಲ್ಲಿ ನೀರ ಹಾಡು, ಹಗಲಿನಲಿ, ಇರುಳಿನಲಿ, ಬಿಬಿಎಂಪಿ ಮಲಗಿರಲಿ!

ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅ.19ರವರೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ಇಂದು ವ್ಯಾಪಕ ಮಳೆಯಾಗಿದೆ.

ಮಂಗಳೂರು, ಹಾವೇರಿ, ತುಮಕೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ದಾವಣಗೆರೆಯಲ್ಲಿ 9 ಸೆಂ.ಮೀ ಮಳೆಯಾಗಿದೆ. ನಿನ್ನೆಯಿದ್ದ ವಾಯುಭಾರ ಕುಸಿತ ಇಂದು ದುರ್ಬಲವಾಗಿದೆ. ಗಾಳಿಯ ಪರಿಚಲನೆ ಆಂಧ್ರದ ಕರಾವಳಿಯಲ್ಲಿ 5.8 ಕಿ.ಮೀ ಎತ್ತರದಲ್ಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Rains: ಬೆಂಗಳೂರಿಗೆ ಆರೆಂಜ್ ಅಲರ್ಟ್​, ಅಕ್ಟೋಬರ್ 23ರವರೆಗೂ ಮಳೆ

ಧಾರಾಕಾರ ಸುರಿದ ಮಳೆಗೆ ಬೆಂಗಳೂರಿನ ಮಾನ್ಯತಾ ಟೆಕ್​ಪಾರ್ಕ್​ನಲ್ಲಿ ಮಳೆ ನೀರು ಜಲಪಾತದಂತೆ ಧುಮ್ಮಿಕ್ಕಿದೆ. L&T ಕಂಪನಿ ನಡೆಸುತ್ತಿರುವ ಕಾಮಗಾರಿ ಜಾಗದಲ್ಲಿ, ಶೆಡ್, ಮರ ನೆಲಸಮ ಕಣ್ಣ ಮುಂದೆಯೇ ನೆಲಸಮವಾಗಿವೆ. ಹಿಂಗಾರು ಮಳೆಗೆ ನಾರ್ತ್ ವುಡ್ ವಿಲ್ಲಾ ಕೆರೆಯ ಅಂಗಳದಂತಾಗಿತ್ತು. ರಾಜಕಾಲುವೆಯ ನೀರು ವಿಲ್ಲಾಗಳಿಗೆ ನುಗ್ಗಿತ್ತು. ಕುಡಿಯೋದಕ್ಕೆ ನೀರಿಲ್ಲದೇ, ಕರೆಂಟ್ ಕೂಡ ಇಲ್ಲದೆ ಕೋಟಿ ಕುಳಗಳು ಪರದಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:04 pm, Thu, 17 October 24

ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಚನ್ನಪಟ್ಟಣದಿದ ಡಿಕೆ ಸುರೇಶ್, ಸುಳಿವು ನೀಡಿದ ಶಾಸಕ ತನ್ವೀರ್ ಸೇಠ್
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಚನ್ನಪಟ್ಟಣ; ಕುಮಾರಸ್ವಾಮಿ ನಮ್ಮ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ:ಬೊಮ್ಮಾಯಿ
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಮಳೆಗಾಲದಲ್ಲೂ ಇಷ್ಟು ಜೋರು ಮಳೆಯಾಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ಉತ್ತಮ ಮಳೆ, ತುಂಬಿದ ಕೆಆರ್​​ಎಸ್; ಮಂಡ್ಯ ರೈತನ ಸಂತೋಷಕ್ಕೆ ಪಾರವೇ ಇಲ್ಲ!
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ಕಾವೇರಿ ತೀರ್ಥೋದ್ಭವ: ಆ ದಿವ್ಯ ಕ್ಷಣ ಹೇಗಿತ್ತು ನೋಡಿ
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ರಣರೋಚಕ ಫೈನಲ್​ನಲ್ಲಿ ಗೆದ್ದು ಬೀಗಿದ ಸದರ್ನ್ ಸೂಪರ್ ಸ್ಟಾರ್ಸ್
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ಜಗದೀಶ್​ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ‘ಹೆಂಗಸಾಗೋಕೂ ಯೋಗ್ಯತೆ ಇಲ್ಲ’
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ