ಹುಬ್ಬಳ್ಳಿ ಕೇಸ್ ವಾಪಸ್ ಬೆನ್ನಲ್ಲೇ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಆರೋಪಿಗಳ ಕೇಸ್ ವಾಪಸ್ಗೆ ಮನವಿ
ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಪ್ರಕರಣಗಳಲ್ಲಿ ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಭೆ ಪ್ರಕರಣ ಕೂಡ ಒಂದು. ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಬೆನ್ನಲ್ಲೇ ಇದೀಗ ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆಯುವಂತೆ ಮಾಜಿ ಸಚಿವ ರೋಷನ್ ಬೇಗ್ ಮನವಿ ಮಾಡಿದ್ದಾರೆ. ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಬಹುದು.
ಬೆಂಗಳೂರು, ಅಕ್ಟೋಬರ್ 17: ಸಿಎಂ ಸಿದ್ದರಾಮಯ್ಯ ಸರ್ಕಾರ ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಹಿಂಪಡೆದ ಬೆನ್ನಲ್ಲೇ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಗೂ ಮುಂದಾಗಿತ್ತು. ಸದ್ಯ ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಇದೀಗ ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಭೆ ಪ್ರಕರಣದ (KJ Halli, DJ Halli) ಆರೋಪಿಗಳ ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಲಾಗಿದೆ.
ಹೌದು. ಮಾಜಿ ಸಚಿವ ರೋಷನ್ ಬೇಗ್ ಅವರಿಂದ ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ಗೆ ಮನವಿ ಮಾಡಿದ್ದಾರೆ.
ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಿಷ್ಟು
ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರೋಷನ್ ಬೇಗ್, ಹುಬ್ಬಳ್ಳಿ ಕೇಸ್ಗಳನ್ನು ವಾಪಸ್ ಪಡೆಯಲು ಕ್ಯಾಬಿನೆಟ್ ನಿರ್ಧಾರ ಮಾಡಿದ್ದಾರೆ. ಇದಾದ ಬಳಿಕ ಬೆಂಗಳೂರಿನಲ್ಲಿ ಸಮಾಜದ ಜನರು ಬಂದು ನನಗೆ ಮನವಿ ಮಾಡಿದ್ದರು. ನಾನು ಸಮಾಜದ ನಾಯಕರ ಜೊತೆಗೆ ನಾಯಕರನ್ನು ಭೇಟಿ ಮಾಡಿದೆ. ಸುಮಾರು 35 ಜನರು ಜೈಲಿನಲ್ಲಿದ್ದಾರೆ. ಗೂಂಡಾ ಕಾಯ್ದೆಯಲ್ಲಿರುವನ್ನು ಬಂಧಿಸಿ ಬೇಡ ಅನ್ನಲ್ಲ. ಆದರೆ ಸಣ್ಣ ಸಣ್ಣ ಹುಡುಗರನ್ನು ಬಂಧಿಸಿದ್ದಾರೆ. ಹಾಗಾಗಿ ಹುಬ್ಬಳ್ಳಿ ರೀತಿಯಲ್ಲಿ ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್ ವಾಪಸ್: ರಾಷ್ಟ್ರಪತಿ, ಪ್ರಧಾನಿಗೆ ನಾರಾಯಣಸ್ವಾಮಿ ಪತ್ರ
ರಾಜಕೀಯ ವ್ಯಕ್ತಿಗಳ ಮೇಲಿನ ಕೇಸ್ ವಾಪಸ್ ಪಡೆದರೆ ಮಾತನಾಡಲ್ಲ. ಅಮಾಯಕರ ಮೇಲಿನ ಕೇಸ್ ವಾಪಸ್ ಪಡೆದರೆ ದೊಡ್ಡ ಚರ್ಚೆ ಮಾಡುತ್ತಾರೆ. ಬೇಡ ಇದೇಲ್ಲ, ನಾವು ಎಲ್ಲಿಗೆ ಹೋಗಬೇಕು. ನಾವು ಈ ದೇಶದವರು ಇಲ್ಲೇ ಇರುತ್ತೇವೆ. ನಮ್ಮನ್ನು ಸಮುದ್ರಲ್ಲಿ ಹಾಕುತ್ತೀರಾ? ಈ ರೀತಿಯ ನಡವಳಿಕೆ ಬೇಡ. ಯುಎಪಿಎ ಕೇಸ್ ದಾಖಲಿಸಿದ್ದರು ಅದನ್ನು ವಾಪಸ್ ಪಡೆಯಲು ದಾರಿಗಳಿದೆ. ದಾರಿ ಇಲ್ಲ ಅಂತಾ ಹತ್ತು ವರ್ಷ ಜೈಲಿನಲ್ಲಿ ಇರಬೇಕಾ? ಮಾನವ ಹಕ್ಕುಗಳ ಆಯೋಗ ಏನು ಮಾಡುತ್ತಿದೆ. ದೇಶದ್ರೋಹಿಗಳ ಮೇಲೆ ಕೇಸ್ ದಾಖಲಿಸಿ, ಬೆಂಕಿ ಹಚ್ಚುವವರನ್ನು ಬಂಧಿಸಿ. ಗುಂಪಿನಲ್ಲಿರುವ ಸಾಮಾನ್ಯ ಜನರನ್ನು ಬಿಟ್ಟು ಬಿಡಿ. ನಾನು ಮಾನವ ಹಕ್ಕುಗಳ ಆಯೋಗಕ್ಕೆ ಸಂಪರ್ಕ ಮಾಡುವ ಚಿಂತಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿರುವುದಕ್ಕೆ ಸ್ಪಷ್ಟ ಕಾರಣ ಕೊಟ್ಟ ಸಿಎಂ
ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಅಕ್ಷರಶಃ ಹೊತ್ತಿ ಉರಿದಿತ್ತು. ಸಮಾಜ ಘಾತುಕ ಶಕ್ತಿಗಳು ಅಟ್ಟಹಾಸ ಮೆರೆದಿದ್ದರು. ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದರು. ಅಷ್ಟೇ ಅಲ್ಲದೆ ಕೆಜಿ ಹಳ್ಳಿಯಲ್ಲಿ ಅಂದಿನ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮನೆಯನ್ನು ಬೆಂಕಿ ಇಟ್ಟು ಸುಡಲಾಗಿತ್ತು. ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.