ಬೆಂಗಳೂರು ಅಭಿವೃದ್ಧಿಗೆ ಸುಂದರ ಹೆಸರು ನೀಡೋದು ಬಿಟ್ಟರೆ ಶಿವಕುಮಾರ್ ಏನೂ ಮಾಡಿಲ್ಲ: ಕುಮಾರಸ್ವಾಮಿ

ಬೆಂಗಳೂರು ಅಭಿವೃದ್ಧಿಗೆ ಸುಂದರ ಹೆಸರು ನೀಡೋದು ಬಿಟ್ಟರೆ ಶಿವಕುಮಾರ್ ಏನೂ ಮಾಡಿಲ್ಲ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 17, 2024 | 2:14 PM

ಸೋಮವಾರ ಸುರಿದ ಮಳೆಯಿಂದ ಸೃಷ್ಟಿಯಾದ ಅವಾಂತರಗಳು ಪುನರಾವರ್ತನೆಯಾಗದ ಹಾಗೆ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ಅನ್ನೋದನ್ನು ಶಿವಕುಮಾರ್ ಕಾರ್ಪೋರೇಟ್ ಸಂಸ್ಥೆಗಳಿಗೆ ವಿವರಿಸಿದರೆ ಅವು ಬೆಂಗಳೂರಿನಿಂದ ಪಲಾಯನ ಮಾಡುವುದನ್ನು ತಡೆಯಬಹುದು ಎಂದು ಹೇಳಿದ ಕುಮಾರಸ್ವಾಮಿ ಮಳೆಯಿಂದ ಬೀದಿಗೆ ಬಿದ್ದ ಕುಟುಂಬಗಳೊಂದಿಗೂ ಡಿಸಿಎಂ ಮಾತಾಡಬೇಕೆಂದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಿನ್ನೆಯ ತಮ್ಮ ಟ್ವೀಟ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿರುವುದಕ್ಕೆ ಉತ್ತರಿಸಿದರು. ಬೆಂಗಳೂರು ನಗರದ ಅಭಿವೃದ್ಧಿಯ ನೆಪದಲ್ಲಿ ಮನಸ್ಸಿಗೆ ಮುದ ನೀಡುವ ಹೆಸರುಗಳನ್ನು ನೀಡುವುದನ್ನು ಬಿಟ್ಟರೆ ಉಪ ಮುಖ್ಯಮಂತ್ರಿಯಿಂದ ಯಾವುದೇ ಕೆಲಸವಾಗಿಲ್ಲ, ರಾಜ್ಯದ ಹೆಸರಿಗೆ ಅಗೌರವ ತರುವ ಕೆಲಸವನ್ನು ವಿರೋಧ ಪಕ್ಷದ ನಾಯಕರು ಮಾಡುತ್ತಿಲ್ಲ, ತನ್ನ ನಿಷ್ಕ್ರಿಯತೆಯಿಂದ ರಾಜ್ಯ ಸರ್ಕಾರ ಆ ಕೆಲಸದಲ್ಲಿ ತೊಡಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿ ಟ್ವೀಟ್​ಗೆ ಉತ್ತರಿಸಲಾಗದೆ ವಿತಂಡವಾದಕ್ಕಿಳಿದ ಡಿಸಿಎಂ ಶಿವಕುಮಾರ್