ಕುಮಾರಸ್ವಾಮಿ ಟ್ವೀಟ್​ಗೆ ಉತ್ತರಿಸಲಾಗದೆ ವಿತಂಡವಾದಕ್ಕಿಳಿದ ಡಿಸಿಎಂ ಶಿವಕುಮಾರ್

ಕುಮಾರಸ್ವಾಮಿ ಟ್ವೀಟ್​ಗೆ ಉತ್ತರಿಸಲಾಗದೆ ವಿತಂಡವಾದಕ್ಕಿಳಿದ ಡಿಸಿಎಂ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 16, 2024 | 11:22 AM

ಎಷ್ಟೇ ಮಳೆಯಾದರೂ, ಎಂಥದ್ದೇ ಸ್ಥಿತಿ ಎದುರಾದರೂ ಎದುರಿಸಲು ಸರ್ಕಾರ ಮತ್ತು ಜನ ತಯಾರಿದ್ದಾರೆ ಶಿವಕುಮಾರ್ ಹೇಳುತ್ತಾರೆ. ಪರಿಸ್ಥಿತಿ ಕೈ ಮೀರಿದ ಮೇಲೆ ಎದುರಿಸಲು ಜನರ ಬೈಗುಳ ಬಿಟ್ಟರೆ ಮತ್ತೇನೂ ಇರಲ್ಲ. ಮಳೆಯಿಂದ ಉಂಟಾಗಬಹುದಾದ ಅನಾಹುತ ಎದುರಿಸಲು ಸರ್ಕಾರ ಬೇಸಿಗೆಯಲ್ಲೇ ತಯಾರಿ ಮಾಡಿಕೊಳ್ಳಬೇಕಿತ್ತು.

ಬೆಂಗಳೂರು: ವಿತಂಡ ವಾದ ಅಂದರೆ ಇದೇ ಇರಬೇಕು. ನಿನ್ನೆ ನಗರದಲ್ಲಿ ಸುರಿದ ಮಳೆಗೆ ಜನ ಅನುಭವಿಸಿದ ಪಾಡು ಕಂಡು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಉಸ್ತವಾರಿ ಸಚಿವ ಡಿಕೆ ಶಿವಕುಮಾರ್ ಟ್ವೀಟ್ ಗೆ ಸಮಾಧಾನವಾಗಿ ಉತ್ತರ ಕೊಡುವ ಬದಲು, ನಾವು ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ? ರಾಜ್ಯದ ಮತ್ತು ಬೆಂಗಳೂರಿನ ಮಾನವನ್ನು ಹರಾಜು ಹಾಕುವ ಕೆಲಸವನ್ನು ಕೇಂದ್ರ ಸಚಿವ ಮಾಡಿದ್ದಾರೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು ಮಳೆ: ಮಾನ್ಯತಾ ಟೆಕ್ ಪಾರ್ಕ್ ಮುಖ್ಯ ರಸ್ತೆ ಜಲಾವೃತಗೊಳ್ಳಲು ಕಾರಣ ಇದುವೇ ನೋಡಿ!