ಕೆರೆಯಂತಾದ ದಿಶಾ ಅಪಾರ್ಟ್ಮೆಂಟ್ ಬೇಸ್ಮೆಂಟ್, ಪಾಲಿಕೆಯನ್ನು ದೂರಿದ ನಿವಾಸಿಗಳು
ಅಪಾರ್ಟ್ಮೆಂಟ್ ನಿವಾಸಿಗಳು ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು ಒಳಗೆ ನುಗ್ಗದ ಹಾಗೆ ಮೇನ್ ಗೇಟ್ ಬಳಿ ಎಂ-ಸ್ಯಾಂಡ್ ಹಾಕಿಸಿಕೊಂಡು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಚರಂಡಿಯನ್ನು ಸ್ವಚ್ಛಗೊಳಿಸದ ಕಾರಣ ಮಳೆನೀರು ರಸ್ತೆಮೇಲೆ ಬಂದು ಅಪಾರ್ಟ್ಮೆಂಟ್ ನ ಬೇಸ್ಮೆಂಟ್ಗೆ ನುಗ್ಗುತ್ತಿದೆ ಎಂದು ಅವರು ಹೇಳುತ್ತಾರೆ.
ಬೆಂಗಳೂರು: ನಿನ್ನೆ ಸುರಿದ ಭೀಕರ ಮಳೆಗೆ ನಗರದ ಸ್ಥಿತಿ ಏನಾಗಿತ್ತು ಅನ್ನೋದನ್ನು ಹೇಳಿದ್ದೇವೆ. ನಗರದ ನಿವಾಸಿಗಳು ರಾತ್ರಿಪಟ್ಟ ಕಷ್ಟದ ಬಗ್ಗೆ ಬಹಳ ಜನಕ್ಕೆ ಗೊತ್ತಾಗಿರಲಾರದು. ವರ್ತೂರು ಹತ್ತಿರದ ದಿಶಾ ಅಪಾರ್ಟ್ಮೆಂಟ್ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವ ಸ್ಥಿತಿ ಉದ್ಭವವಾಗಿದೆ. ಯಾಕೆಂದರೆ ಇಲ್ಲಿನ ಬೇಸ್ಮೆಂಟ್ ಜಲಾವೃತಗೊಂಡು ಕೆರೆಯನ್ನು ಹೋಲುತ್ತಿದೆ. ಕಾಡುಬೀಸನಹಳ್ಳಿ ಮತ್ತು ವರ್ತೂರು ನಡುವಿನ ರಸ್ತೆಯಲ್ಲಿ ಮೊಣಕಾಲು ಮುಳುಗುವಷ್ಟು ನೀರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Bangalore Rain: ಬೆಂಗಳೂರು ಮಳೆ ದುರಂತ, ಮಾನವೀಯತೆ ಮರೆತ ಸೇಂಟ್ ಮಾರ್ಥಾಸ್ ಆಸ್ಪತ್ರೆ, ಇನ್ಫೋಸಿಸ್ ಉದ್ಯೋಗಿ ಬಲಿ
Latest Videos