ಹದಗೆಡುತ್ತಲೇ ಇದೆ ಮನೆಯ ವಾತಾವರಣ; ಸಿಟ್ಟಲ್ಲಿ ಕೂಗಾಡಿದ ಬಿಗ್ ಬಾಸ್
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರ ವರ್ತನೆ ಮಿತಿ ಮೀರುತ್ತಿದೆ. ಅವರು ಬೇಕಂತಲೇ ಎಲ್ಲರನ್ನೂ ಕೆರಳಿಸುತ್ತಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಈ ಮಧ್ಯೆ ಅವರು ಬಿಗ್ ಬಾಸ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಯಾರೊಬ್ಬರೂ ಇದನ್ನು ಸಹಿಸಿಲ್ಲ. ಇಡೀ ಮನೆ ಜಗದೀಶ್ ವಿರುದ್ಧ ಒಂದಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕಿತ್ತಾಟ ಜೋರಾಗಿದೆ. ಇದರಿಂದ ಇಡೀ ಮನೆಯ ವಾತಾವರಣ ಹದಗೆಡುತ್ತಿದೆ. ಪ್ರತಿ ವಿಚಾರಕ್ಕೆ ಜಗದೀಶ್ ಅವರು ಮೂಗು ತೂರಿಸುತ್ತಿದ್ದಾರೆ. ಇದು ಮನೆಯವರಿಗೆ ಇಷ್ಟ ಆಗುತ್ತಿಲ್ಲ. ಜಗದೀಶ್ ಹಾಗೂ ಮಂಜು ಏಕವಚನದಲ್ಲಿ ಕೂಗಾಡಿಕೊಂಡಿದ್ದಾರೆ. ಬಿಗ್ ಬಾಸ್ನ ಆದೇಶಕ್ಕೂ ಯಾರೂ ಕಿಮ್ಮತ್ತು ಕೊಟ್ಟಿಲ್ಲ. ಆ ಬಳಿಕ ಬಿಗ್ ಬಾಸ್ ‘ಸದ್ದು’ ಎಂದು ಕೂಗಿದ್ದಾರೆ. ಆ ಬಳಿಕ ಎಲ್ಲರೂ ಶಾಂತರಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.