ಕೇಜ್ರಿವಾಲ್ ಮತ್ತು ಸೊರೇನ್ ಜೊತೆ ನಾಗೇಂದ್ರ ತನ್ನನ್ನು ಹೋಲಿಸಿಕೊಂಡಿದ್ದು ಹಾಸ್ಯಾಸ್ಪದ: ಜನಾರ್ಧನ ರೆಡ್ಡಿ
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2011ರಲ್ಲಿ ತನ್ನನ್ನು ಸಿಬಿಐ ಬಂಧಿಸಿದ ಹಾಗೆ ನಾಗೇಂದ್ರ ಅವರನ್ನೂ ಬಂಧಿಸಿ ಎರಡು ವರ್ಷ ಜೈಲಿನಲ್ಲಿಡಲಾಗಿತ್ತು. ಈಗ ಪುನಃ ಬಂಧನಕ್ಕೊಳಗಾದ ನಾಗೇಂದ್ರಗೆ ಕೇವಲ ಮೂರು ತಿಂಗಳಲ್ಲಿ ಜಾಮೀನು ಸಿಕ್ಕಿದೆ, ನಾಗೇಂದ್ರ ವಿವೇಚನೆಯಿಂದ ಮಾತಾಡಲಿ ಎಂದು ಜನಾರ್ಧನ ರೆಡ್ಡಿ ಹೇಳಿದರು.
ಬಳ್ಳಾರಿ: ಗಾಲಿ ಜನಾರ್ಧನ ರೆಡ್ಡಿ ಮತ್ತು ಬಿ ನಾಗೇಂದ್ರ ಇಬ್ಬರೂ ಬಳ್ಳಾರಿಯಲ್ಲಿದ್ದಾರೆ! ಪರಸ್ಪರ ದೋಷಾರೋಪಣೆ ನಿರೀಕ್ಷಿತವೇ. ನಾಗೇಂದ್ರರ ಹಾಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರೆಡ್ಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವಲ್ಲಿ ಗಮನವಿಟ್ಟಿದೆ, ಬಿಜೆಪಿಯೇತರ ಸರ್ಕಾರದ ಮುಖ್ಯಮಂತ್ರಿಗಳನ್ನು ಬಂಧಿಸಿದ ಹಾಗೆ ತನ್ನನ್ನು ಸಹ ಬಂಧಿಸಲಾಗಿತ್ತು ಎಂದು ನಾಗೇಂದ್ರ ಹೇಳಿದ್ದಾರೆ. ಅವರು ತಮ್ಮನ್ನು ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೊರೇನ್ ಜೊತೆ ಹೋಲಿಸಿಕೊಂಡಿದ್ದು ಹಾಸ್ಯಾಸ್ಪದ ಎಂದು ಜನಾರ್ಧನ ರೆಡ್ಡಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜನಾರ್ಧನ ರೆಡ್ಡಿ ವಿರುದ್ಧ ಕಾಮೆಂಟ್ ಮಾಡಲ್ಲವೆಂದು ಹೇಳಿ ದೊಡ್ಡತನ ಪ್ರದರ್ಶಿಸಿದ ಬಿ ಶ್ರೀರಾಮುಲು
Latest Videos

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್ನಲ್ಲಿ ಕಳೆದ ಕೊನೆಯ ಕ್ಷಣಗಳು

ಕೆಆರ್ಎಸ್ ಕ್ರೆಸ್ಟ್ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್

ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...

ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
