ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ

ಅಯೋಧ್ಯೆಯ ರಾಮ ಮಂದಿರ ನೋಡಿ ‘ಅದ್ಭುತ’ ಎಂದು ಉದ್ಘರಿಸಿದ ಇಸ್ರೇಲ್ ರಾಯಭಾರಿ
|

Updated on: Oct 17, 2024 | 12:20 PM

ಭಾರತದಲ್ಲಿ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಪತ್ನಿಯೊಂದಿಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ದೇವಾಲಯವನ್ನು ಕಂಡು ಅದ್ಭುತ ಎಂದು ಉದ್ಘರಿಸಿದ್ದಾರೆ. ಇಲ್ಲಿನ ಯಾತ್ರಾರ್ಥಿಗಳು ಹಾಗೂ ಭಕ್ತರ ಭಕ್ತಿಗೆ ಮನಸೋತಿದ್ದೇನೆ ಎಂದರು. ರಾಯಭಾರಿ ಅಜರ್ ಅವರು ಜನರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಭಾರತದ ಸಂಸ್ಕೃತಿಯನ್ನು ಆಳವಾಗಿ ತಿಳಿದುಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.

ಅಯೋಧ್ಯೆಯ ಭಗವಾನ್ ರಾಮನ ಭವ್ಯ ಮಂದಿರಕ್ಕೆ ಭೇಟಿ ನೀಡಲು ನನಗೆ ಹೆಮ್ಮೆ ಎನಿಸುತ್ತದೆ, ಯಾತ್ರಿಕರು ಮತ್ತು ಭಕ್ತರ ಸಂಖ್ಯೆಯನ್ನು ನೋಡಿ ನಾನು ಆಶ್ಚರ್ಯಗೊಂಡಿದ್ದೇನೆ. ಇದಕ್ಕೂ ಮುನ್ನ, ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲಕ್ನೋದಲ್ಲಿನ ಅವರ ನಿವಾಸದಲ್ಲಿ ಭೇಟಿಯಾಗಿದ್ದರು.
ಸ್ರೇಲ್ ಮತ್ತು ಭಾರತದ ಜನರು ಪ್ರಾಚೀನ ಕಾಲದಿಂದಲೂ ಒಟ್ಟಿಗೆ ಇದ್ದಾರೆ. ಅವರ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳು ಪ್ರಾಚೀನವಾಗಿವೆ.

ನಮ್ಮ ಪರಂಪರೆಯ ಬಗ್ಗೆ ನಮಗೆ ಹೇಗೆ ಹೆಮ್ಮೆ ಇದೆಯೋ ಹಾಗೆಯೇ ನಿಮಗೂ ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಇದೆ. ಇದು ಬಹಳ ಮುಖ್ಯ ಏಕೆಂದರೆ ಸಮರ್ಪಣೆ ಮತ್ತು ಹೆಮ್ಮೆಯ ಭಾವನೆ ಮಾತ್ರ ನಿಮಗೆ ಶಕ್ತಿಯನ್ನು ನೀಡುತ್ತದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow us