ಗರ್ಭಗೀತೆ: ಮಗು ಗರ್ಭದಲ್ಲಿದ್ದಾಗಲೇ ಕಲಿಕೆ ಆರಂಭಿಸಿ, ಉತ್ತಮ ಪ್ರಜೆಯಾಗಿಸಿ

| Updated By: ನಯನಾ ರಾಜೀವ್

Updated on: Jun 09, 2022 | 2:45 PM

Garbhageete:ಋತುಕಾಲ, ಪಶಸ್ತವಾದ ಭೂಮಿ ಹಾಗೂ ಉತ್ತಮವಾದ ಬೀಜಗಳನ್ನು ಕ್ರಮವರಿತು ಬಿತ್ತಿದರೆ ಸಕಾಲದಲ್ಲಿ ಮೊಳಕೆಯೊಡೆತಂದೆ ಸ್ತ್ರೀಯರ ಋತುಸಮಯ ಆರೋಗ್ಯವಂತ ಗರ್ಭಾಶಯ, ಸಾರಭೂತವಾದ ರಸಧಾತು ಹಾಗೂ ಆರೋಗ್ಯಪೂರ್ಣ ಶುಕ್ರಾರ್ತತ್ವಗಳು ಇವುಗಳು ಸಂಯೋಗದಿಂದ ಗರ್ಭೋತ್ಪತ್ತಿ ಉಂಟಾಗುತ್ತದೆ.

ಗರ್ಭಗೀತೆ: ಮಗು ಗರ್ಭದಲ್ಲಿದ್ದಾಗಲೇ ಕಲಿಕೆ ಆರಂಭಿಸಿ, ಉತ್ತಮ ಪ್ರಜೆಯಾಗಿಸಿ
Kamala Bharadwaj
Follow us on

ಋತುಕಾಲ, ಪಶಸ್ತವಾದ ಭೂಮಿ ಹಾಗೂ ಉತ್ತಮವಾದ ಬೀಜಗಳನ್ನು ಕ್ರಮವರಿತು ಬಿತ್ತಿದರೆ ಸಕಾಲದಲ್ಲಿ ಮೊಳಕೆಯೊಡೆತಂದೆ ಸ್ತ್ರೀಯರ ಋತುಸಮಯ ಆರೋಗ್ಯವಂತ ಗರ್ಭಾಶಯ, ಸಾರಭೂತವಾದ ರಸಧಾತು ಹಾಗೂ ಆರೋಗ್ಯಪೂರ್ಣ ಶುಕ್ರಾರ್ತತ್ವಗಳು ಇವುಗಳು ಸಂಯೋಗದಿಂದ ಗರ್ಭೋತ್ಪತ್ತಿ ಉಂಟಾಗುತ್ತದೆ.

ಮಗು ತಾಯಿಯ ಗರ್ಭದಲ್ಲಿರುವಾಗಲೇ  ಕಲಿಕೆಯನ್ನು ಆರಂಭಿಸಿ, ಉತ್ತಮ ಪ್ರಜೆಯಾಗಿಸಿ, ಹೌದು ಅಭಿಮನ್ಯು ಹಾಗೂ ಸುಖದೇವರ ಕತೆಯನ್ನು ಕೇಳಿಯೇ ಇರಬಹುದು. ಅಭಿಮನ್ಯುವಿಗೆ ಗರ್ಭದಲ್ಲಿರುವಾಗಲೇ ಯುದ್ಧ ಕೌಶಲ್ಯ ಹೇಳಿಕೊಟ್ಟಂತೆ ಹಾಗೆಯೇ ಮಗುವಿನ ನಿರೀಕ್ಷೆಯಲ್ಲಿರುವವರು ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಹೆಚ್ಚು ಗಮನವಹಿಸಬೇಕು. ಪ್ರತಿ ಕ್ಷಣವನ್ನು ಎಂಜಾಯ್ ಮಾಡಬೇಕು. ಹಾಗೆಯೇ ಮಗುವಿಗೆ ಗರ್ಭದಲ್ಲಿರುವಾಗಲೇ ನೀತಿ ಪಾಟವನ್ನೂ ಮಾಡಬೇಕು.

ಸಂಸ್ಕೃತಿ, ಧರ್ಮ, ಹಾಗೂ ನಿಮಗೆ ಇಷ್ಟವಾದ ಮುಖದಲ್ಲಿ ಸಂತೋಷ ಮೂಡುವಂತಹ ಪುಸ್ತಕಗಳನ್ನು ಹೆಚ್ಚು ಓದಬೇಕು. ಉತ್ತಮ ಸಂಗೀತವನ್ನು ಆಲಿಸಬೇಕು. ಮಗುವಿನ ನಿರೀಕ್ಷೆಯಲ್ಲಿರುವ ತಾಯಿ ಹೇಗಿರಬೇಕು ಎಂಬುದರ ಕುರಿತು ಯೋಗ ತಜ್ಞೆ ಕಮಲಾ ಭಾರಧ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

ಭ್ರೂಣಕ್ಕೆ ಹಾನಿಯುಂಟಾಗುವ ಔಷಧಗಳ ಸೇವನೆ ಬೇಡ
ಭ್ರೂಣದ ಸುತ್ತಲೂ ಗರ್ಭಜಲ ಉತ್ಪತ್ತಿಯಾಗಿ ಅದರ ಫಲವು ಭ್ರೂಣವನ್ನು ಆವರಿಸಿ ಭ್ರೂಣಕ್ಕೆ ಎಲ್ಲಾ ಬಗೆಯ ರಕ್ಷಣೆ ಒದಗಿಸುತ್ತದೆ. ಭ್ರೂಣದ ಆವಯವಗಳು ರೂಪುಗೊಳ್ಳುತ್ತಿರುವಾಗಲೇ ಅದಕ್ಕೆ ಹಾನಿಯುಂಟು ಮಾಡುವ ಔಷಧಿಗಳನ್ನು ಗರ್ಭಿಣಿಯರು ಸೇವಿಸಬಾರದು. ಅದನ್ನು ಸೇವಿಸಿದಲ್ಲಿ ಅಂಗವಿಕಲ ಮಗು ಜನಿಸಬಹುದು.

ಗರ್ಭ ಧರಿಸುವ ಮೊದಲು ಕಾಯಿಲೆಗಳಿಂದ ಮುಕ್ತರಾಗಿ
ಗರ್ಭಿಣಿಯರಿಗೆ ಏನೇ ತೊಂದರೆಯಿದ್ದರೂ ಗರ್ಭಧರಿಸುವ ಮೊದಲೇ ಮಾತ್ರೆಗಳಿಂದಲೋ ಅಥವಾ ನ್ಯಾಚ್ಯುರೋಪತಿ ಸಹಾಯ ಪಡೆದು ದೈಹಿಕ ಹಾಗೂ ಮಾನಸಿಕವಾಗಿ ಸದೃಢಳಾದ ಬಳಿಕ ಮಗು ಹುಟ್ಟಿದರೆ ಒಳ್ಳೆಯದು. ಆದರೆ ಅವರೇ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಾ ಮಾತ್ರೆ ತೆಗೆದುಕೊಳ್ಳುತ್ತಿರುವಾಗ ಮಗು ಹುಟ್ಟಿದರೆ ಮಗು ಆರೋಗ್ಯವಾಗಿರುವುದು ಕಷ್ಟ.

ಸ್ವ ಅನುಭವ
ತಮ್ಮದೇ ಅನುಭವವನ್ನು ಹಂಚಿಕೊಂಡ ಕಮಲಾ ಅವರು, ಮಗು ತನ್ನ ಹೊಟ್ಟೆಯಲ್ಲಿದ್ದಾಗ ಭಗವದ್ಗೀತೆ ಪ್ರವಚನವನ್ನು ಮಾಡುತ್ತಿದ್ದೆ, ಪ್ರವಚನವನ್ನು ಮಗು ಹುಟ್ಟುವ ಒಂದು ದಿನ ಬಾಕಿ ಇರುವಲ್ಲಿಯವರೆಗೂ ಮುಂದುವರೆಸಿದ್ದೆ.
700 ಶ್ಲೋಕ ಹಾಗೂ ಭಗವದ್ಗೀತೆಯ 18 ಅಧ್ಯಾಯಗಳನ್ನು ಮಕ್ಕಳಿಗೆ ಕಲಿಸುತ್ತಿದ್ದಿದ್ದು, ಮಗುವಿನ ಮೇಲೆ ಉತ್ತಮ ಪರಿಣಾಮವನ್ನು ಬೀರಿದೆ.

ತಾಯಿಯ ಹೊಟ್ಟೆಯಲ್ಲಿರುವ ಮಗುವು ಎಲ್ಲವನ್ನೂ ಅರಿಯಬಲ್ಲದು, ಇದು ಕಂಪ್ಯೂಟರ್​ನ ರ್ಯಾಮ್ ಇದ್ದಂತೆ , ಒಂದು ಒಂದು ಬಾರಿ ಮಾಹಿತಿಯನ್ನು ಶೇಖರಿಸಿಟ್ಟರೆ ಬೇಕಾದಾಗ ಅದರ ಪ್ರಯೋಜನ ಪಡೆಯಬಹುದು.
ಗರ್ಭಧಾರಣೆ ಬಳಿಕ ಮೊದಲ ಮೂರು ತಿಂಗಳು ತುಂಬಾ ಜಾಗ್ರತೆಯಿಂದಿರಬೇಕು, ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ತೆಗೆದುಕೊಳ್ಳಬಾರದು.

ಮೊದಲನೆಯ ತಿಂಗಳಿನಿಂದ ಭ್ರೂಣದ ಆವಯವಗಳು ಮೂಡಲು ಶುರುವಾಗಿ ಎರಡು ತಿಂಗಳಾಗುವಷ್ಟರಲ್ಲಿ ಹೃದಯ ಬಡಿತ ಆರಂಭವಾಗುತ್ತದೆ. ಹೀಗಾಗಿ ರೋಗವನ್ನು ತಡೆಯುವ ಶಕ್ತಿ ಇರುವ ಮಾತ್ರೆಗಳಿಗೆ ರೋಗವನ್ನು ತರುವ ಶಕ್ತಿಯೂ ಇದೆ ಎಂಬುದನ್ನು ಮರೆಯಬಾರದು.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ  ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ.  ಗರ್ಭಧಾರಣೆ, ಗರ್ಭಿಣಿಯರ ಆರೈಕೆ, ಗರ್ಭಿಣಿಯರು ಎಂತಹ ಆಹಾರ ಸೇವಿಸಬೇಕು, ನ್ಯಾಚ್ಯುರಲ್ ಬರ್ಥಿಂಗ್ ಕುರಿತ   ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:44 pm, Thu, 9 June 22