Amla Juice
ನೆಲ್ಲಿಕಾಯಿಯು ಉತ್ತಮ ಆಹಾರವಾಗಿದ್ದು, ದೇಹಕ್ಕೆ ಇದರಿಂದ ಹಲವು ರೀತಿಯ ಪ್ರಯೋಜನಗಳಿವೆ. ಇದು ಕೇವಲ ಆರೋಗ್ಯ ಮಾತ್ರವಲ್ಲದೆ, ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೆಲ್ಲಿಕಾಯಿಯನ್ನು ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಿಕೊಳ್ಳಬಹುದು. ಇದರಿಂದ ಕೂದಲಿನ ಹಲವಾರು ಸಮಸ್ಯೆಗಳು, ತಲೆಹೊಟ್ಟು, ಕೂದಲು ಉದುರುವಿಕೆ ಇತ್ಯಾದಿ ಕಡಿಮೆ ಮಾಡಬಹುದಾಗಿದೆ.
ತಲೆ ಕೂದಲು (hair care) ಬೇಗನೆ ಬೆಳ್ಳಗಾಗುತ್ತಿದ್ದರೆ ಕೂದಲಿಗೆ ನೆಲ್ಲಿಕಾಯಿ ರಸವನ್ನು ಬಳಸಬೇಕು. ಸ್ನಾನಕ್ಕೆ ಒಂದು ಗಂಟೆ ಮೊದಲು ನೆಲ್ಲಿಕಾಯಿ ರಸವನ್ನು (amla juice) ಕೂದಲಿಗೆ ಹಚ್ಚಬೇಕು. ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ಕೂದಲಿಗೆ ಎಣ್ಣೆಯನ್ನು (oil on hair) ಹಚ್ಚಿದಂತೆ, ಒಂದು ಬಟ್ಟಲಿನಲ್ಲಿ ನೆಲ್ಲಿಕಾಯಿಯನ್ನು ರಸವನ್ನು ತೆಗೆದಿಟ್ಟುಕೊಳ್ಳಿ.
ನಂತರ ಹತ್ತಿಯ ಸಹಾಯದಿಂದ ನೆಲ್ಲಿಕಾಯಿಯ ರಸವನ್ನು (benefits of amla juice). ಕೂದಲಿನ ಬುಡಕ್ಕೆ ಹಚ್ಚಿ. ಪೂರ್ತಿ ಕೂದಲಿಗೆ ನೆಲಿಕಾಯಿ ರಸವನ್ನು ಹಚ್ಚಿದ ನಂತರ ಅರ್ಧ ಗಂಟೆ ಬಿಟ್ಟು ಕೂದಲನ್ನು ಶಾಂಪೂವಿನಿಂದ ತೊಳೆಯಿರಿ.
- ಗೋರಂಟಿ ಜತೆ ನೆಲ್ಲಿಕಾಯಿ ರಸ ಸೇರಿಸಿ: ನೀವು ಕೂದಲಿಗೆ ಗೋರಂಟಿ ಹಚ್ಚಿದರೆ, ಅದಕ್ಕೂ ನೆಲ್ಲಿಕಾಯಿ ರಸವನ್ನು ಸೇರಿಸಬಹುದು. ಮೆಹಂದಿಗೆ ನೆಲ್ಲಿಕಾಯಿ ರಸವನ್ನು ಸೇರಿಸಿ, ರಾತ್ರಿಯಿಡೀ ಹಾಗೆ ಬಿಡಿ. ಬೆಳಗಾಗುವಷ್ಟರಲ್ಲಿ ಮೆಹಂದಿ ಬಣ್ಣ ಕಪ್ಪಗಾಗುತ್ತದೆ . ಇದನ್ನು ಕೂದಲಿಗೆ ಹಚ್ಚಿದರೆ ತಲೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಯಾವುದೇ ರಾಸಾಯ್ನಿಕ್ ಕಲರ್ ಬಳಸುವ ಅಗತ್ಯವಿರುವುದಿಲ್ಲ.
- ಉರಿಯೂತ ಶಮನಕಾರಿ ಗುಣಗಳಿವೆ: ಆಯುರ್ವೇದದಲ್ಲಿ ಕೂದಲಿನ ಬೆಳವಣಿಗೆಗೆ ಇದನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದ ಕೂದಲಿನ ಸ್ವಚ್ಛತೆಯು ಹೆಚ್ಚಾಗುವುದು. ನೆಲ್ಲಿಕಾಯಿಯು ಕೂದಲಿನ ಟಾನಿಕ್ ನಂತೆ ಕೆಲಸ ಮಾಡುವ ಪರಿಣಾಮವಾಗಿ ಇದು ಕೂದಲನ್ನು ಬಲಪಡಿಸುವುದು ಮತ್ತು ಕೂದಲಿನ ವರ್ಣದ್ರವ್ಯವನ್ನು ಪುನರ್ಶ್ಚೇತನಗೊಳಿಸಿ ಕೂದಲು ಬಿಳಿಯಾಗುವ ಸಮಸ್ಯೆಯನ್ನು ತಡೆಯುವುದು.
- ಕೂದಲು ಉದುರುವಿಕೆ ತಡೆಯಬಹುದು: ಕೂದಲಿಗೆ ನೆಲ್ಲಿಕಾಯಿಯಿಂದ ಸಿಗುವ ಲಾಭಗಳು ಕೂದಲು ಉದುರುವಿಕೆ ತಡೆಯುವುದು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಕೂದಲನ್ನು ತುಂಬಾ ಬಲ ಹಾಗೂ ಆರೋಗ್ಯಯುತವಾಗಿಸುವುದು. ತಲೆಹೊಟ್ಟು ನಿವಾರಿಸುವುದು. ಕೂದಲಿಗೆ ಕಂಡೀಷನ್ ಮಾಡುವುದು. ಕೂದಲಿಗೆ ಕಾಂತಿ ನೀಡುವುದು. ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುವುದು. ಕೂದಲಿಗೆ ಆಗುವ ಹಾನಿ ತಡೆಯುವುದು.
- ಕೂದಲ ಆರೈಕೆಯಲ್ಲಿ ನೆಲ್ಲಿಕಾಯಿ ಬಳಕೆ ಹೇಗೆ?: ಬೇಕಾಗುವ ಸಾಮಗ್ರಿಗಳು 2 ಚಮಚ ನೆಲ್ಲಿಕಾಯಿ ಹುಡಿ 2 ಚಮಚ ಮೊಸರು, ಬಿಸಿ ನೀರು(ಅಗತ್ಯಕ್ಕೆ ತಕ್ಕಷ್ಟು) ಬಳಸುವ ವಿಧಾನ ಒಂದು ಪಿಂಗಾಣಿಯಲ್ಲಿ ನೆಲ್ಲಿಕಾಯಿ ಹುಡಿ ತೆಗೆದುಕೊಳ್ಳಿ. ಇದಕ್ಕೆ ಬಿಸಿ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಮೊಸರು ಹಾಕಿಕೊಳ್ಳಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಕಾಲ ಹಾಗೆ ಇದನ್ನು ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರನ್ನು ಬಳಸಿಕೊಂಡು ಕೂದಲು ತೊಳೆಯಿರಿ.
ಬೇಕಾಗುವ ಸಾಮಗ್ರಿಗಳು ಕಪ್ ನೆಲ್ಲಿಕಾಯಿ ಹುಡಿ ಎರಡು ಮೊಟ್ಟೆ ವಿಧಾನ ಮೊಟ್ಟೆಯನ್ನು ಒಡೆದು ಪಿಂಗಾಣಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಂಡು ನೊರೆ ಬರುವಂತೆ ಮಾಡಿ. ಇದಕ್ಕೆ ನೆಲ್ಲಿಕಾಯಿ ಹುಡಿ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಕೂದಲಿಗೆ ಹಚ್ಚಿಕೊಳ್ಳಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ