ರೊಟ್ಟಿ ಮತ್ತು ಚಪಾತಿ ಪ್ರತಿ ಭಾರತೀಯ ಕುಟುಂಬದ ಪ್ರಧಾನ ಆಹಾರವಾಗಿದೆ. ನೇರವಾಗಿ ಜ್ವಾಲೆಯ ಮೇಲೆ ರೊಟ್ಟಿಗಳನ್ನು ಬೇಯಿಸಿ ತಿನ್ನುವುದನ್ನು ಅನೇಕ ಜನರು ಇಷ್ಟ ಪಡುತ್ತಾರೆ ಆದರೆ ಈ ರೀತಿ ಮಾಡುವುದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಹೌದು. ಇದು ಆಶ್ಚರ್ಯ ಎನಿಸಿದರೂ ಸತ್ಯ. ಕೆಲವರು ಮಾಂಸ ಆಹಾರಗಳನ್ನು ಕೂಡ ನೇರವಾಗಿ ಉರಿಯುವ ಜ್ವಾಲೆಯ ಮೇಲೆ ಹುರಿದು ಬೇಯಿಸುತ್ತಾರೆ. ಆದರೆ ಈ ರೀತಿ ಆಹಾರಗಳನ್ನು ಉರಿಯಲ್ಲಿ ನೇರವಾಗಿ ಇಟ್ಟು ಬೇಯಿಸುವುದು ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಈ ರೀತಿ ಬರುವ ಕ್ಯಾನ್ಸರ್ ಅನ್ನು ತಪ್ಪಿಸಲು ವೈದ್ಯರು ಕೆಲವು ಸಲಹೆಗಳನ್ನು ಕೂಡ ಸೂಚಿಸುತ್ತಾರೆ. ಈ ರೀತಿ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾದರೆ ಯಾವ ರೀತಿಯ ನಿಯಮಗಳನ್ನು ಅನುಸರಿಸಬೇಕು? ಇಲ್ಲಿದೆ ಮಾಹಿತಿ.
ಬ್ರೆಡ್, ರೊಟ್ಟಿ ಮತ್ತು ಚಪಾತಿ ಇತ್ಯಾದಿಗಳನ್ನು ಅನೇಕ ಜನರು ಹೆಚ್ಚಿನ ಉರಿಯಲ್ಲಿ ಬೇಯಿಸುತ್ತಾರೆ. ಇದರಿಂದ ಆಹಾರ ಚೆನ್ನಾಗಿ ಬೇಯುವುದಲ್ಲದೆ ರುಚಿ ಹೆಚ್ಚಾಗುತ್ತದೆ ಎಂಬುದು ಜನರ ಭಾವನೆ. ತಜ್ಞರು ಹೇಳುವ ಪ್ರಕಾರ ಆಹಾರ ಬೇಯಿಸಲು ಈ ಕ್ರಮವನ್ನು ಅನುಸರಿಸುವುದಾದರೆ ಉರಿಯಲ್ಲಿ ನೇರವಾಗಿ ಇಟ್ಟ ಆಹಾರ ಕಪ್ಪು ಬಣ್ಣಕ್ಕೆ ತಿರುಗಬಾರದು ಎಂದು ಹೇಳುತ್ತಾರೆ. ಅಂದರೆ ಬೆಂಕಿಯ ಜ್ವಾಲೆಯನ್ನು ಕಡಿಮೆ ಮಾಡುವ ಮೂಲಕ ಆಹಾರವನ್ನು ಆಗಾಗ ತಿರುಗಿಸುವ ಮೂಲಕ, ಅವು ಹೆಚ್ಚು ಕಾಲ ಜ್ವಾಲೆಯಲ್ಲಿ ಇರದಂತೆ ನೋಡಿಕೊಳ್ಳಬೇಕು. ಇದರಿಂದ ಇದು ಕಪ್ಪಗಾಗುವುದನ್ನು ತಡೆಯಬಹುದು. ಈ ರೀತಿ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಅಥವಾ ಕಪ್ಪಾದ ಪ್ರದೇಶಗಳನ್ನು ತೆಗೆದು ಹಾಕಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ