ತೂಕ ಕಡಿಮೆ ಮಾಡಿಕೊಳ್ಳಲು 30- 60 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಈ ರೀತಿ ಮಾಡಿ

ಕೆಲವರಿಗೆ ತೂಕ ಕಡಿಮೆ ಮಾಡಿಕೊಳ್ಳಲು ಮನಸ್ಸಿದ್ದರೂ ಸಮಯದ ಅಭಾವ ಕಾಡುತ್ತಿದೆ. ದಿನದಲ್ಲಿ ಅರ್ಧ ಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಲು ಸಾಧ್ಯವಾಗುವುದಿಲ್ಲ. ಅಂತವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಏನು ಮಾಡಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಇಂತಹ ಪರಿಸ್ಥಿತಿ ನಿಮ್ಮ ಅನುಭವಕ್ಕೂ ಬಂದಿರಬಹುದು. ಅಂತಹ ಸಮಯದಲ್ಲಿ ನೀವು ವ್ಯಾಯಾಮ ಮಾಡುವ ಸಮಯವನ್ನು ಮೂರು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿಕೊಳ್ಳಬಹುದು. ಅಂದರೆ ಯಾವ ರೀತಿ ವಿಂಗಡಿಸುವುದು? ಇದರಿಂದ ತೂಕ ಕಡಿಮೆ ಆಗುತ್ತದೆಯೇ? ಈ ಎಲ್ಲಾ ಪ್ರಶ್ನೆಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ತೂಕ ಕಡಿಮೆ ಮಾಡಿಕೊಳ್ಳಲು 30- 60 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಈ ರೀತಿ ಮಾಡಿ
ಡಾ. ಸುಧೀರ್ ಕುಮಾರ್
Edited By:

Updated on: Nov 01, 2024 | 5:42 PM

ಇತ್ತೀಚಿನ ವರ್ಷಗಳಲ್ಲಿ ಜನರು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲವರಿಗೆ ತೂಕ ಕಡಿಮೆ ಮಾಡಿಕೊಳ್ಳಲು ಮನಸ್ಸಿದ್ದರೂ ಸಮಯದ ಅಭಾವ ಕಾಡುತ್ತಿದೆ. ದಿನದಲ್ಲಿ ಅರ್ಧ ಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಲು ಸಾಧ್ಯವಾಗುವುದಿಲ್ಲ. ಅಂತವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಏನು ಮಾಡಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಇಂತಹ ಪರಿಸ್ಥಿತಿ ನಿಮ್ಮ ಅನುಭವಕ್ಕೂ ಬಂದಿರಬಹುದು. ಅಂತಹ ಸಮಯದಲ್ಲಿ ನೀವು ವ್ಯಾಯಾಮ ಮಾಡುವ ಸಮಯವನ್ನು ಮೂರು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿಕೊಳ್ಳಬಹುದು. ಅಂದರೆ ಯಾವ ರೀತಿ ವಿಂಗಡಿಸುವುದು? ಇದರಿಂದ ತೂಕ ಕಡಿಮೆ ಆಗುತ್ತದೆಯೇ? ಈ ಎಲ್ಲಾ ಪ್ರಶ್ನೆಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ಹೈದರಾಬಾದ್ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಅವರು, ಒಂದು ಸಂಶೋಧನೆಯ ಆಧಾರದ ಮೇಲೆ ಟ್ವಿಟರ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಆ ಪ್ರಕಾರ, ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಒಂದೇ ಸೆಷನ್ನಲ್ಲಿ ಅಥವಾ ಒಂದೇ ಸಲ 30- 60 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ, ನೀವು ಅದನ್ನು ಮೂರು ಸಣ್ಣ (5-10 ನಿಮಿಷಗಳ) ಸೆಷನ್ಗಳಾಗಿ ಅಥವಾ ಸಣ್ಣ ವಿಭಾಗವಾಗಿ ವಿಂಗಡಿಸುವುದರಿಂದ ಒಂದೇ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ: ಸ್ನಾನ ಮಾಡುವ ಮೊದಲು ಹೊಕ್ಕುಳಿಗೆ ತುಪ್ಪ ಹಚ್ಚುವುದರಿಂದ ಈ 5 ಆರೋಗ್ಯ ಪ್ರಯೋಜನ ಸಿಗುತ್ತೆ

ಅಧ್ಯಯನ ಹೇಳುವುದೇನು?

ಒಂದು ಅಧ್ಯಯನದಲ್ಲಿ, 53 ಆರೋಗ್ಯವಂತರನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದು ಅದರಲ್ಲಿ,

ಗುಂಪು 1: ದಿನಕ್ಕೆ ಮೂರು ಬಾರಿ ತಲಾ 5- 10 ನಿಮಿಷಗಳ ಅಲ್ಪಾವಧಿಯ ವ್ಯಾಯಾಮ ಮಾಡುತ್ತಿದ್ದರು.

ಗುಂಪು 2: ವಾರಕ್ಕೆ 3- 5 ದಿನಗಳು, 30- 60 ನಿಮಿಷಗಳ ಕಾಲ ದೀರ್ಘ ಕಾಲ ವ್ಯಾಯಾಮ ಮಾಡುತ್ತಿದ್ದರು.

ಎರಡೂ ಗುಂಪುಗಳು ಕೂಡ ಮಧ್ಯಮ ವೇಗದ ಜಾಗಿಂಗ್ ಕೂಡ ಮಾಡಿದ್ದರು. 24 ವಾರಗಳ ಕೊನೆಯಲ್ಲಿ, ಎರಡೂ ಗುಂಪುಗಳ ದೇಹದ ತೂಕ, ಕಿಬ್ಬೊಟ್ಟೆಯ ಬೊಜ್ಜು, ಸೊಂಟದ ಸುತ್ತಳತೆಯಲ್ಲಿ ಒಂದೇ ರೀತಿಯ ಇಳಿಕೆಯನ್ನು ಗಮನಿಸಿದ್ದಾರೆ. ಹಾಗಾಗಿ ನಿಮಗೆ 30- 60 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ, ಸಮಯ ಸಿಗದಿದ್ದರೆ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಡಿ ಬದಲಾಗಿ ಸಮಯ ಹೊಂದಿಸಿಕೊಂಡು, ನಿಮ್ಮ ಅನುಕೂಲಕ್ಕೆ ತಕ್ಕಂತೆ, ಸಣ್ಣ ವಿಭಾಗಗಳನ್ನು ಮಾಡಿಕೊಂಡು ವ್ಯಾಯಾಮ ಮಾಡಿ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ