ಸ್ನಾನ ಮಾಡುವ ಮೊದಲು ಹೊಕ್ಕುಳಿಗೆ ತುಪ್ಪ ಹಚ್ಚುವುದರಿಂದ ಈ 5 ಆರೋಗ್ಯ ಪ್ರಯೋಜನ ಸಿಗುತ್ತೆ

Benefits of applying ghee on the navel: ನಾಭಿಯನ್ನು ದೇಹದ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿದೆ. ಪ್ರತಿದಿನ ನಾಭಿಗೆ ದೇಸಿ ತುಪ್ಪವನ್ನು ಹಚ್ಚುವುದರಿಂದ ವ್ಯಕ್ತಿಯ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ಇದು ಸಂಶೋಧನೆಗಳಿಂದಲೂ ಬಹಿರಂಗವಾಗಿದೆ. ದೇಸಿ ತುಪ್ಪದಲ್ಲಿರುವ ವಿಟಮಿನ್- ಇ, ವಿಟಮಿನ್- ಎ, ವಿಟಮಿನ್- ಡಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗಾದರೆ ಪ್ರತಿನಿತ್ಯ ದೇಸಿ ತುಪ್ಪವನ್ನು ಹೊಕ್ಕುಳಿಗೆ ಹಚ್ಚುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ತಿಳಿದುಕೊಳ್ಳಿ.

ಸ್ನಾನ ಮಾಡುವ ಮೊದಲು ಹೊಕ್ಕುಳಿಗೆ ತುಪ್ಪ ಹಚ್ಚುವುದರಿಂದ ಈ 5 ಆರೋಗ್ಯ ಪ್ರಯೋಜನ ಸಿಗುತ್ತೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2024 | 2:08 PM

ಆಯುರ್ವೇದದ ಪ್ರಕಾರ, ನಾಭಿಯನ್ನು ದೇಹದ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿದೆ. ಪ್ರತಿದಿನ ನಾಭಿಗೆ ದೇಸಿ ತುಪ್ಪವನ್ನು ಹಚ್ಚುವುದರಿಂದ ವ್ಯಕ್ತಿಯ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ಇದು ಸಂಶೋಧನೆಗಳಿಂದಲೂ ಬಹಿರಂಗವಾಗಿದೆ. ದೇಸಿ ತುಪ್ಪದಲ್ಲಿರುವ ವಿಟಮಿನ್- ಇ, ವಿಟಮಿನ್- ಎ, ವಿಟಮಿನ್- ಡಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗಾದರೆ ಪ್ರತಿನಿತ್ಯ ದೇಸಿ ತುಪ್ಪವನ್ನು ಹೊಕ್ಕುಳಿಗೆ ಹಚ್ಚುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ತಿಳಿದುಕೊಳ್ಳಿ.

ಚರ್ಮವನ್ನು ಪೋಷಿಸುತ್ತದೆ: ಹೊಕ್ಕುಳಿಗೆ ತುಪ್ಪವನ್ನು ಹಚ್ಚುವುದರಿಂದ ಸಿಗುವ ದೊಡ್ಡ ಪ್ರಯೋಜನವೆಂದರೆ ಇದು ನಿಮ್ಮ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಚರ್ಮವು ಯಾವಾಗಲೂ ಹೊಳೆಯುತ್ತದೆ. ಹಾಗಾಗಿ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಬಯಸುತ್ತಿರುವವರು ಈ ಟ್ರಿಕ್ ಅನ್ನು ಪಾಲನೆ ಮಾಡಬಹುದು.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ಆಯುರ್ವೇದದ ಪ್ರಕಾರ, ನಾಭಿಯನ್ನು ಜೀರ್ಣಕ್ರಿಯೆಯ ಸ್ಥಳವೆಂದು ಪರಿಗಣಿಸಲಾಗಿದೆ. ಈ ಸ್ಥಳದಲ್ಲಿ ತುಪ್ಪವನ್ನು ಹಚ್ಚುವುದರಿಂದ ಜೀರ್ಣಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಹಾರ ಸರಿಯಾಗಿ ಜೀರ್ಣ ಆಗದಿದ್ದವರು ಈ ರೀತಿ ಮಾಡಿ ನೋಡಬಹುದು.

ಮಲಬದ್ಧತೆಯನ್ನು ನಿವಾರಿಸುತ್ತದೆ: ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರ ಪಡೆಯಲು ದೇಸಿ ತುಪ್ಪವನ್ನು ಬಳಸಬಹುದು. ಇದಕ್ಕಾಗಿ, ನಾಭಿಯಲ್ಲಿ 2- 3 ಹನಿ ತುಪ್ಪವನ್ನು ಹಾಕಿ ಮತ್ತು ಲಘುವಾಗಿ ಮಸಾಜ್ ಮಾಡಿ. ಹೊಕ್ಕುಳಿಗೆ ತುಪ್ಪ ಹಚ್ಚುವುದರಿಂದ ವ್ಯಕ್ತಿಯ ಜೀರ್ಣ ಶಕ್ತಿ ಹೆಚ್ಚುತ್ತದೆ ಜೊತೆಗೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಕೀಲು ನೋವನ್ನು ಕಡಿಮೆ ಮಾಡುತ್ತದೆ: ನಿಮ್ಮ ಕೀಲುಗಳಲ್ಲಿ ಪದೇ ಪದೇ ನೋವು ಬರುತ್ತಿದ್ದರೆ ಹೊಕ್ಕುಳಿಗೆ ತುಪ್ಪ ಹಚ್ಚುವ ಮೂಲಕ ನೀವು ಈ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ಪಡೆಯಬಹುದು. ಮೊದಲನೆಯದಾಗಿ, ನಾಭಿಯಲ್ಲಿ ಕೆಲವು ಹನಿ ತುಪ್ಪವನ್ನು ಹಾಕಿ ಬಳಿಕ ಅದನ್ನು ಹೊಕ್ಕುಳಿನ ಸುತ್ತಲೂ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ ಮತ್ತು ಊತಕ್ಕೂ ಪರಿಹಾರ ಸಿಗುತ್ತದೆ.

ವಾತ ದೋಷಕ್ಕೆ ಪರಿಹಾರ: ಆಯುರ್ವೇದದ ಪ್ರಕಾರ, ನಾಭಿಗೆ ತುಪ್ಪವನ್ನು ಹಚ್ಚುವುದರಿಂದ ವಾತ ದೋಷ ಹತೋಟಿಗೆ ಬರುತ್ತದೆ. ಬಳಿಕ ಇದು ಪೂರ್ತಿಯಾಗಿ ಕಡಿಮೆಯಾಗುತ್ತದೆ. ವ್ಯಕ್ತಿಯು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಇಲ್ಲದಾಗ ನಾನಾ ರೀತಿಯ ಅಸ್ವಸ್ಥತೆಗಳು ಕಂಡು ಬರಲು ಪ್ರಾರಂಭಿಸುತ್ತದೆ. ಆಗ ನೀವು ತುಪ್ಪ ಬಳಕೆ ಮಾಡುವುದರಿಂದ ಇದು ನಿಮ್ಮ ಆರೋಗ್ಯ ಸಮಸ್ಯೆಯನ್ನು ದೂರ ಮಾಡಿ ಪರಿಹಾರ ನೀಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ