ನೀವು ಮಾಡುವ ಈ ತಪ್ಪುಗಳೇ ರಕ್ತದೊತ್ತಡ ಹೆಚ್ಚಾಗಲು ಕಾರಣ ?

ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳವು ನಾನಾ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ. ಈ ರೀತಿಯಾಗುವುದಕ್ಕೆ ಹಲವು ಕಾರಣಗಳಿರಬಹುದು. ಕ್ತದೊತ್ತಡ ಏರಿಕೆಯಾದಾಗ ನಾವು ಬಹಳ ಜಾಗ್ರತೆ ವಹಿಸಿ ಅದನ್ನು ನಿಯಂತ್ರಿಸಬೇಕಾಗುತ್ತದೆ. ಹಾಗಾದರೆ ಆ ರೀತಿ ಆಗುವುದಕ್ಕೆ ಕಾರಣವೇನು? ಸಾಮಾನ್ಯವಾಗಿ ರಕ್ತದೊತ್ತಡ ಹೆಚ್ಚಾದಾಗ ಏನು ಮಾಡಬೇಕು? ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

ನೀವು ಮಾಡುವ ಈ ತಪ್ಪುಗಳೇ ರಕ್ತದೊತ್ತಡ ಹೆಚ್ಚಾಗಲು ಕಾರಣ ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 15, 2025 | 3:42 PM

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡದ (High Blood Pressure) ಸಮಸ್ಯೆ ಹೆಚ್ಚಾಗುತ್ತಿದ್ದು, ಜೀವನಶೈಲಿ (Lifestyle) ಯಲ್ಲಿ ಮಾಡಿಕೊಂಡ ಬದಲಾವಣೆ ಮತ್ತು ಕೆಲವು ಕಾಯಿಲೆಗಳು ರಕ್ತದೊತ್ತಡದ ಹಠಾತ್ ಏರಿಕೆಗೆ ಕಾರಣವಾಗುತ್ತಿದೆ. ಅದರಲ್ಲಿಯೂ ರಕ್ತದೊತ್ತಡದಲ್ಲಿ ಹಠಾತ್ ಏರಿಕೆಯಾದಾಗ ನಾವು ಬಹಳ ಜಾಗ್ರತೆ ವಹಿಸಿ ಅದನ್ನು ನಿಯಂತ್ರಿಸಬೇಕಾಗುತ್ತದೆ. ಅದಕ್ಕೂ ಮೊದಲು ಬಹಳ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಈ ಆರೋಗ್ಯ (Health) ಸಮಸ್ಯೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಆಗ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ರಕ್ತದೊತ್ತಡ ಹೆಚ್ಚಾದಾಗ ಏನು ಮಾಡಬೇಕು? ಆ ರೀತಿ ಆಗುವುದಕ್ಕೆ ಕಾರಣವೇನು? ಈ ರೀತಿಯ ಸಂದರ್ಭಗಳಲ್ಲಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

ಬಿಪಿ ಇದ್ದಕ್ಕಿದ್ದಂತೆ ಹೆಚ್ಚಾಗಲು ಕಾರಣವೇನು?

ಸಾಮಾನ್ಯವಾಗಿ ರಕ್ತದೊತ್ತಡದ ಹೆಚ್ಚಳ ಮತ್ತು ಇಳಿಕೆ ಇವೆರಡೂ ಕೂಡ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ರಕ್ತದೊತ್ತಡ ಇದ್ದಕ್ಕಿದ್ದಂತೆ ಏರುತ್ತದೆ, ಈ ರೀತಿ ಹಠಾತ್ ಹೆಚ್ಚಳವಾಗುವುದಕ್ಕೆ ಹಲವಾರು ಕಾರಣಗಳಿವೆ. ಆಲ್ಕೋಹಾಲ್, ಕೊಲೆಸ್ಟ್ರಾಲ್, ಕೆಲವು ಔಷಧಿ ಮತ್ತು ನಾನಾ ರೀತಿಯ ಗಂಭೀರ ಕಾಯಿಲೆಗಳಿಂದ ರಕ್ತದೊತ್ತಡದಲ್ಲಿ ಹಠಾತ್ ಏರಿಕೆ ಉಂಟಾಗಬಹುದು. ಇನ್ನು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸದಿದ್ದರೆ, ಯಾವುದೋ ವಿಷಯದ ಬಗ್ಗೆ ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದರೆ ನಿಮ್ಮ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಅಲ್ಲದೆ ಈ ರೀತಿಯಾಗುವುದು ಹೃದಯಾಘಾತದ ಲಕ್ಷಣವೂ ಆಗಿರಬಹುದು. ಹಾಗಾಗಿ ಈ ಸಮಸ್ಯೆಗಳನ್ನು ತಕ್ಷಣವೇ ನಿಯಂತ್ರಿಸಲು ಪ್ರಯತ್ನಿಸುವುದು ಬಹಳ ಮುಖ್ಯ.

ಬಿಪಿ ಇದ್ದಕ್ಕಿದ್ದಂತೆ ಏಕೆ ಹೆಚ್ಚಾಗುತ್ತದೆ?

ಸಾಮಾನ್ಯವಾಗಿ, ನಮ್ಮ ಬಿಪಿ 120/80 ಇರಬೇಕು. ಅದು 140/90 ಕ್ಕಿಂತ ಹೆಚ್ಚಿದ್ದರೆ, ತೊಂದರೆ ಉಂಟಾಗಬಹುದು. ಬಿಪಿ ಇದ್ದಕ್ಕಿದ್ದಂತೆ ಏರುವುದಕ್ಕೆ, ಹಲವು ಕಾರಣಗಳಿರಬಹುದು. ಇದರಲ್ಲಿ ಪ್ರಮುಖ ಕಾರಣ ಒತ್ತಡ. ಇದಲ್ಲದೆ, ಕೊಲೆಸ್ಟ್ರಾಲ್ ಮತ್ತು ಕಳಪೆ ಜೀವನಶೈಲಿಯೂ ಇದಕ್ಕೆ ಕಾರಣವಾಗಬಹುದು. ಅತಿಯಾದ ಮದ್ಯಪಾನ, ಧೂಮಪಾನ ಮತ್ತು ಹೆಚ್ಚಿನ ಉಪ್ಪು ಸೇವನೆಯು ಕೂಡ ಬಿಪಿಯಲ್ಲಿ ಹಠಾತ್ ಏರಿಕೆಗೆ ಕಾರಣವಾಗಬಹುದು. ಅತಿಯಾದ ವ್ಯಾಯಾಮದಿಂದಲೂ ಕೂಡ ಈ ರೀತಿ ಸಮಸ್ಯೆ ಬರಬಹುದು. ಮೂತ್ರಪಿಂಡದ ಅಸ್ವಸ್ಥತೆಗಳು, ಥೈರಾಯ್ಡ್ ಸಮಸ್ಯೆಗಳು ಮತ್ತು ಸ್ಲೀಪ್ ಅಪ್ನಿಯಾದಂತಹ ಕಾಯಿಲೆಗಳು ಸಹ ಬಿಪಿಯಲ್ಲಿ ಹಠಾತ್ ಏರಿಕೆಗೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿಯೂ ಕೂಡ ಬಿಪಿ ಹಠಾತ್ ಏರಿಕೆಯಾಗಬಹುದು.

ಇದನ್ನೂ ಓದಿ
Milk Rice: ಹಾಲು ಅನ್ನ ಆರೋಗ್ಯಕ್ಕೆ ಅಮೃತವಿದ್ದಂತೆ
ಲಿಚಿ ಹಣ್ಣು ಚಿಕ್ಕದಾಗಿದ್ದರೂ ಪ್ರಯೋಜನ ಸಾಕಷ್ಟಿದೆ!
5 ಗಿಡಗಳಲ್ಲಿ ಆರೋಗ್ಯದ ಪಂಚ ಸೂತ್ರ, ಇಲ್ಲಿದೆ ನೋಡಿ
ತಮಿಳುನಾಡಿನಲ್ಲಿದೆ ಸಕ್ಕರೆ ಕಾಯಿಲೆ ವಾಸಿಮಾಡುವ ದೇವಸ್ಥಾನ!

ಇದನ್ನೂ ಓದಿ: ಹಾಲು, ಅನ್ನ ಎರಡನ್ನು ಮಿಶ್ರಣ ಮಾಡಿದರೆ ಆರೋಗ್ಯ ಭಾಗ್ಯ ಖಂಡಿತ

ರಕ್ತದೊತ್ತಡವನ್ನು ಯಾವಾಗ ಪರೀಕ್ಷಿಸಬೇಕು?

ನಿಮಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ, ತಲೆತಿರುಗುವಿಕೆ ಅಥವಾ ತಲೆ ಮತ್ತು ದವಡೆಯಲ್ಲಿ ನೋವು ಕಂಡುಬಂದರೆ, ತಕ್ಷಣ ನಿಮ್ಮ ರಕ್ತದೊತ್ತಡವನ್ನು ಪರಿಶೀಲಿಸಬೇಕು. ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೆ, ಈ ರೀತಿಯಾದ ತಕ್ಷಣ ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಒತ್ತಡ ಕಡಿಮೆ ಮಾಡಿಕೊಳ್ಳಿ, ಸ್ವಲ್ಪ ವಿಶ್ರಾಂತಿ ಪಡೆಯಿರಿ. ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ