ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಅಭ್ಯಾಸದಲ್ಲಿನ ಈ ಕೆಲವು ಬದಲಾವಣೆ ಬಹಳ ಮುಖ್ಯ

| Updated By: shruti hegde

Updated on: May 19, 2021 | 3:49 PM

ನಮ್ಮ ದೇಹದಲ್ಲಿ ವಿಟಮಿನ್ ಸಿ ಅಂಶ ಉತ್ಪತ್ತಿಯಾಗುವುದಿಲ್ಲ ಅಥವಾ ವಿಟಮಿನ್ ಸಿ ಅಂಶವನ್ನು ನಮ್ಮ ದೇಹ ಶೇಕರಣೆ ಮಾಡಿಟ್ಟುಕೊಳ್ಳುವುದಿಲ್ಲ ಹೀಗಾಗಿ ಪ್ರತಿ ದಿನ ಸಿಟ್ರಸ್ ಹಣ್ಣುಗಳಿಂದ ಮಾಡಿದ ಜ್ಯೂಸ್ ಕುಡಿಯುವುದು ಆರೋಗ್ಯಕರ ಅಭ್ಯಾಸ.

ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಅಭ್ಯಾಸದಲ್ಲಿನ ಈ ಕೆಲವು ಬದಲಾವಣೆ ಬಹಳ ಮುಖ್ಯ
ಪ್ರಾತಿನಿಧಿಕ ಚಿತ್ರ
Follow us on

ರೋಗನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸಿಕೊಳ್ಳುವುದು ಕೊರೊನಾ ಸೋಂಕಿನ ಎರಡನೇ ಅಲೆಯ ಈ ಸಂದರ್ಭದಲ್ಲಿ ಹೆಚ್ಚು ಸೂಕ್ತ ಎನಿಸಿಕೊಳ್ಳುತ್ತದೆ. ಕಾರಣ ಯಾವುದೇ ಕಾಯಿಲೆಗೆ ಒಳಗಾಗುವ ಮೊದಲು ನಾವು ಒಂದಿಷ್ಟು ಕಾಳಜಿಯನ್ನು ಅಥವಾ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದು ಉಪಯುಕ್ತ ಮತ್ತು ಅದು ನಮ್ಮ ಜವಾಬ್ದಾರಿ. ಹೀಗಾಗಿ ನಿತ್ಯವು ಸೇವಿಸುವ ಆಹಾರದ ಜತೆಗೆ ಒಂದಿಷ್ಟು ರೋಗನಿರೋಧಕ ಶಕ್ತಿ ನೀಡುವ ಪದಾರ್ಥಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಶೀತ, ಜ್ವರ ಮತ್ತು ಇತರ ಸೋಂಕುಗಳನ್ನು ತಡೆಗಟ್ಟುವ ಮಾರ್ಗಗಳನ್ನು ನೀವು ಹುಡುಕುತ್ತಿದ್ದರೆ, ನಿಮ್ಮ ಮೊದಲ ಹೆಜ್ಜೆ ನಿಮ್ಮ ಸ್ಥಳೀಯ ಕಿರಾಣಿ ಅಂಗಡಿಗೆ ಭೇಟಿ ನೀಡುವುದಾಗಿರಬೇಕು. ಕಾರಣ ನಿಮ್ಮ ಹತ್ತಿರದ ಅಂಗಡಿಯಲ್ಲಿಯೇ ಸಿಗುವ ಒಂದಷ್ಟು ಆರೋಗ್ಯಯುತ ಪದಾರ್ಥಗಳು ನಿಮಗೆ ಶಕ್ತಿಯುತ ರೋಗನಿರೋಧಕ ವರ್ಧಕಗಳಾಗಿವೆ.

1. ಸಿಟ್ರಸ್ ಹಣ್ಣುಗಳು
ಶೀತ ಕಡಿಮೆಯಾದ ನಂತರದಲ್ಲಿ ಹೆಚ್ಚಿನ ಜನರು ವಿಟಮಿನ್ ಸಿ ಹೆಚ್ಚಿಸಿಕೊಳ್ಳಲು ಮುಂದಾಗುತ್ತಾರೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಈ ಕಾರಣದಿಂದಾಗಿ ಇದು ಸೋಂಕುಗಳ ವಿರುದ್ಧ ಹೋರಾಡಲು ಪ್ರಮುಖ ಅಸ್ತ್ರವಾಗಿದೆ. ಬಹುತೇಕ ಎಲ್ಲಾ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಹೀಗಾಗಿ ಸಿಟ್ರಸ್ ಹಣ್ಣುಗಳನ್ನು ಹಿಂಡಿ ಜ್ಯೂಸ್ ಮಾಡಿ ಕುಡಿಯುವುದು ಬಹಳ ಮುಖ್ಯ.

ಜನಪ್ರಿಯ ಸಿಟ್ರಸ್ ಹಣ್ಣುಗಳು:
ದ್ರಾಕ್ಷಿಹಣ್ಣು
ಕಿತ್ತಳೆ
ನಿಂಬೆಹಣ್ಣು
ಮುಸುಂಬಿ

ನಮ್ಮ ದೇಹದಲ್ಲಿ ವಿಟಮಿನ್ ಸಿ ಅಂಶ ಉತ್ಪತ್ತಿಯಾಗುವುದಿಲ್ಲ ಅಥವಾ ವಿಟಮಿನ್ ಸಿ ಅಂಶವನ್ನು ನಮ್ಮ ದೇಹ ಶೇಕರಣೆ ಮಾಡಿಟ್ಟುಕೊಳ್ಳುವುದಿಲ್ಲ ಹೀಗಾಗಿ ಪ್ರತಿ ದಿನ ಸಿಟ್ರಸ್ ಹಣ್ಣುಗಳಿಂದ ಮಾಡಿದ ಜ್ಯೂಸ್ ಕುಡಿಯುವುದು ಆರೋಗ್ಯಕರ ಅಭ್ಯಾಸ. ವಯಸ್ಕರು ಈ ಕೆಳಗಿನ ಪ್ರಮಾಣದಲ್ಲಿ ಸಿಟ್ರಸ್ ಹಣ್ಣುಗಳ ರಸವನ್ನು ಸೇವಿಸಬಹುದು.

ಮಹಿಳೆಯರಿಗೆ 75 ಮಿಗ್ರಾಂ
ಪುರುಷರಿಗೆ 90 ಮಿಗ್ರಾಂ
ದಿನಕ್ಕೆ 2,000 ಮಿಲಿಗ್ರಾಂಗಿಂತ ಹೆಚ್ಚು ಸಿಟ್ರಸ್ ಹಣ್ಣುಗಳ ರಸವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

ಶೀತದಿಂದ ಬೇಗನೆ ಚೇತರಿಸಿಕೊಳ್ಳಲು ವಿಟಮಿನ್ ಸಿ ನಿಮಗೆ ಸಹಾಯ ಮಾಡಬಹುದಾದರೂ, ಹೊಸ ಕರೋನವೈರಸ್, SARS-CoV-2 ವಿರುದ್ಧ ಇದು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

2. ಕೆಂಪು ದಪ್ಪ ಮೆಣಸಿನ ಕಾಯಿ
ಸಿಟ್ರಸ್ ಹಣ್ಣುಗಳಲ್ಲಿ ಯಾವುದೇ ಹಣ್ಣು ಅಥವಾ ತರಕಾರಿಗಳಿಗಿಂತ ಹೆಚ್ಚು ವಿಟಮಿನ್ ಸಿ ಇದೆ ಎಂದು ನೀವು ಭಾವಿಸಿದ್ದರೆ ಮತ್ತೊಮ್ಮೆ ಯೋಚಿಸಿ. ಕೆಂಪು ದಪ್ಪ ಮೆಣಸಿನ ಕಾಯಿಯಲ್ಲಿ ಕಿತ್ತಳೆ (45 ಮಿಗ್ರಾಂ ) ಗಿಂತ ಸುಮಾರು 3 ಪಟ್ಟು ಹೆಚ್ಚು ವಿಟಮಿನ್ ಸಿ (127 ಮಿಗ್ರಾಂ ) ಇರುತ್ತದೆ. ಕ್ಯಾರೆಟ್​ಗಿಂತಲೂ ಹೆಚ್ಚು ಆರೋಗ್ಯಯುತವಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ, ವಿಟಮಿನ್ ಸಿ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಎ ಅನ್ನು ಪೂರೈಸುವ ಕ್ಯಾರೆಟ್ ಕಣ್ಣು ಮತ್ತು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

3. ಬ್ರೊಕೊಲಿ
ಬ್ರೊಕೊಲಿಯಲ್ಲಿ ಅಧಿಕವಾದ ಜೀವಸತ್ವಗಳು ಮತ್ತು ಖನಿಜಗಳು ಇದೆ. ವಿಟಮಿನ್ ಎ, ಸಿ ಮತ್ತು ಇ ಹಾಗೂ ಇನ್ನಿತರ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಇದನ್ನು ಹಸಿಯಾಗಿ ಕೂಡ ಆಹಾರದ ಜತೆ ಸೇವಿಸಬಹುದಾಗಿದೆ. ಬ್ರೊಕೊಲಿ ಶಕ್ತಿಯನ್ನು ಹಾಗೇ ಉಳಿಸಲು ಪ್ರಮುಖ ಅಂಶವೆಂದರೆ ಇದನ್ನು ಸಾಧ್ಯವಾದಷ್ಟು ಕಡಿಮೆ ಬೇಯಿಸುವುದು ಅಥವಾ ಹಸಿ ಸೇವಿಸಬಹುದು.

4. ಬೆಳ್ಳುಳ್ಳಿ
ಸಾಮಾನ್ಯವಾಗಿ ಮನೆಯಲ್ಲಿ ಎಲ್ಲಾ ರೀತಿಯ ಅಡುಗೆಗೆ ಬೆಳ್ಳುಳ್ಳಿ ಬಳಸುತ್ತಾರೆ. ಇದು ತಯಾರಿಸುವ ಆಹಾರಕ್ಕೆ ಹೆಚ್ಚು ರುಚಿ ನೀಡುತ್ತದೆ ಮತ್ತು ಆರೋಗ್ಯದ ದೃಷ್ಟಿಯಿಂದಲು ಒಳಿತು. ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5. ಶುಂಠಿ
ಅನಾರೋಗ್ಯಕ್ಕೆ ಒಳಗಾದ ನಂತರ ಅನೇಕರು ಮೊದಲು ಮನೆ ಮದ್ದಾಗಿ ಉಪಯೋಗಿಸುವುದು ಶುಂಠಿಯನ್ನು. ಶುಂಠಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗಂಟಲು ನೋವು, ಮೂಗು ಕಟ್ಟುವುದನ್ನು ನಿವಾರಣೆ ಮಾಡುತ್ತದೆ. ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಸಹ ಶುಂಠಿ ಹೊಂದಿದೆ.

ಇದನ್ನೂ ಓದಿ:

World AIDS Vaccine Day 2021: ಹೆಚ್​ಐವಿ ಏಡ್ಸ್​ಗೆ ತಿರುಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?