ವಾರಾಂತ್ಯ ಬಂದ ಕೂಡಲೇ ನೀವು ನಿಮ್ಮ ಗೆಳೆಯರೊಂದಿಗೆ ಬಿಯರ್ (Beer) ಸೇವನೆಗೆ ಮುಂದಾಗುತ್ತೀರಾ? ಬಿಯರ್ ಒಳ್ಳೆಯದಲ್ಲ ಎಂದು ಯಾರಾದರೂ ನಿಮಗೆ ಬುದ್ದಿ ಹೇಳಲು ಬಂದಾಗ ಬಿಯರ್ ಕಿಡ್ನಿಗೆ ಒಳ್ಳೇದು ಗೊತ್ತಾ ಎಂದು ನೀವು ವಾದಿಸಿದ್ದೀರಾ? ಹಾಗಾದರೆ ನೀವು ಈ ಸ್ಟೋರಿಯನ್ನು ಓದಲೇಬೇಕು! ಮೂರರಲ್ಲಿ ಒಂದು ಭಾರತೀಯರು ಬಿಯರ್ ಮೂತ್ರಪಿಂಡದ ಕಲ್ಲುಗಳನ್ನು (Kidney Stone) ಹೋಗಿಸುತ್ತದೆ ಎಂದು ನಂಬುತ್ತಾರೆ. ಹಾಗಾದ್ರೆ ವೈಜ್ಞಾನಿಕವಾಗಿ (Scientific Reason) ಇದು ನಿಜವೇ? ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇತ್ತೀಚಿನ ವರ್ಷಗಳಲ್ಲಿ ಮೂತ್ರಪಿಂಡದ ಕಲ್ಲುಗಳ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ, ಇದು ನೋವಿನ ಜೊತೆಗೆ ಮೂತ್ರದ ಹರಿವನ್ನು ನಿರ್ಬಂಧಿಸುತ್ತದೆ ಮತ್ತು ಮೂತ್ರಪಿಂಡವು ಊದಿಕೊಳ್ಳುವಂತೆ ಮಾಡುತ್ತದೆ. ಮೂತ್ರಪಿಂಡದ ಕ್ಯಾಲ್ಕುಲಿ ಎಂದೂ ಕರೆಯಲ್ಪಡುವ ಈ ಕಲ್ಲುಗಳು ಖನಿಜಗಳು ಮತ್ತು ಲವಣಗಳಿಂದ ಕೂಡಿರುತ್ತದೆ. ಅದು ನಿಮ್ಮ ಮೂತ್ರಪಿಂಡದೊಳಗೆ ರೂಪುಗೊಳ್ಳುತ್ತದೆ ಜೊತೆಗೆ ನಿಮಗೆ ಬರಿ ನೋವನ್ನು ಉಂಟು ಮಾಡುತ್ತದೆ. ವೈದ್ಯರ ಪ್ರಕಾರ, ಮೂತ್ರಪಿಂಡದ ಕಲ್ಲುಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇರುವುದೇ ಪ್ರಕರಣಗಳು ಹೆಚ್ಚಾಗಲು ಕಾರಣ.
ಪ್ಯಾನ್-ಇಂಡಿಯಾ ಸಮೀಕ್ಷೆಯ ಪ್ರಕಾರ, ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಶೇಕಡಾ 50 ಕ್ಕಿಂತ ಹೆಚ್ಚು ಜನರು ತಮ್ಮ ಚಿಕಿತ್ಸೆಯನ್ನು ಆರು ತಿಂಗಳಿಂದ ಎರಡು ವರ್ಷಗಳವರೆಗೆ ಮುಂದೂಡುತ್ತಾರೆ ಏಕೆಂದರೆ ಅವರು ಬಿಯರ್ ಕುಡಿದು ಮೂತ್ರಪಿಂಡದ ಕಲ್ಲುಗಳನ್ನು ಹೋಗಿಸುವ ವಿಧಾನವನ್ನು ಪ್ರಯತ್ನಿಸಲು ಬಯಸುತ್ತಾರೆ.
ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಗುಣಪಡಿಸಬಹುದು ಎಂದು ದೃಢೀಕರಿಸುವ ಯಾವುದೇ ವೈಜ್ಞಾನಿಕ ಮಾಹಿತಿಯಿಲ್ಲ ಎಂದು ವೈದ್ಯರು ಹೇಳುತ್ತಾರೆ. ಬಿಯರ್ ಮೂತ್ರವರ್ಧಕವಾಗಿದೆ, ಮತ್ತು ಇದು ಹೆಚ್ಚು ಮೂತ್ರವನ್ನು ರವಾನಿಸಲು ಸಹಾಯ ಮಾಡುತ್ತದೆ ಇದರಿಂದ ಸಣ್ಣ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಆದರೆ 5 ಮಿ.ಮೀ ಗಿಂತ ಹೆಚ್ಚು ಗಾತ್ರದ ಕಲ್ಲುಗಳನ್ನು ಈ ರೀತಿಯಲ್ಲಿ ದೇಹದಿಂದ ಹೊರಹಾಕಲಾಗುವುದಿಲ್ಲ ಏಕೆಂದರೆ ನಿರ್ಗಮನ ಮಾರ್ಗವು ಕೇವಲ 3 ಮಿ.ಮೀ. ನೀವು ನೋವಿನಿಂದ ಬಳಲುತ್ತಿರುವಾಗ ಬಿಯರ್ ಕುಡಿಯುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ ಏಕೆಂದರೆ ಬಿಯರ್ ನೀವು ಹೊರಹಾಕಲು ಸಾಧ್ಯವಾಗದ ಹೆಚ್ಚಿನ ಮೂತ್ರವನ್ನು ಉತ್ಪಾದಿಸುತ್ತದೆ, ಹೀಗಾಗಿ ನೀವು ತುಂಬಾ ನೋವಿನಿಂದ ಬಳಲುತ್ತೀರಿ. ಅಲ್ಲದೆ, ದೀರ್ಘಕಾಲದ ಮತ್ತು ನಿಯಮಿತವಾದ ಬಿಯರ್ ಸೇವನೆಯು ಹೆಚ್ಚಿನ ಆಕ್ಸಲೇಟ್ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ವೈದ್ಯರ ಪ್ರಕಾರ, ಹೆಚ್ಚಿನ ಸಣ್ಣ ಮೂತ್ರಪಿಂಡದ ಕಲ್ಲುಗಳಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ. ಸಾಕಷ್ಟು ನೀರು ಕುಡಿಯುವ ಮೂಲಕ ಮೂತ್ರದ ಜೊತೆಗೆ ಸಣ್ಣ ಕಲ್ಲುಗಳು ಹೊರಬರುತ್ತವೆ.
ವೈದ್ಯರು ದಿನಕ್ಕೆ ಕನಿಷ್ಠ 3-4 ಲೀಟರ್ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ, ಇದು ನ್ಯೂಮ್ಮ ಮೂತ್ರಪಿಂಡದಲ್ಲಿ ಕಲ್ಲುಗಳು ನಿರ್ಮಾಣವಾಗುವುದನ್ನು ತಡೆಯುತ್ತದೆ.
ಸಣ್ಣ ಪ್ರಮಾಣದ ನೋವುಗಳಿಗೆ, ಐಬುಪ್ರೊಫೇನ್‌ನಂತಹ ನೋವು ನಿವಾರಕಗಳನ್ನು ತೆಗೆದುಕೊಳ್ಳಬಹುದು. ಆದರೆ ನೀವು ಯಾವಾಗಲೂ ವೈದ್ಯರ ಸಲಹೆ ಕೇಳುವುದು ಉತ್ತಮ.
ನಿಮ್ಮ ಮೂತ್ರನಾಳದಲ್ಲಿನ ಸ್ನಾಯುಗಳನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುವ ಆಲ್ಫಾ-ಬ್ಲಾಕರ್‌ಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ, ಇದು ಮೂತ್ರಪಿಂಡದ ಕಲ್ಲುಗಳನ್ನು ತ್ವರಿತವಾಗಿ ಮತ್ತು ಕಡಿಮೆ ನೋವಿನೊಂದಿಗೆ ಮೂತ್ರದ ಜೊತೆಗೆ ಹಾದುಹೋಗಲು ಸಹಾಯ ಮಾಡುತ್ತದೆ.
ಇದನ್ನು ಓದಿ: ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣಕ್ಕೆ ಆಹ್ವಾನ; ವಿಶ್ವ ಆರೋಗ್ಯ ಸಂಘಟನೆ ವರದಿ
ಇದು ಶಸ್ತ್ರ ಚಿಕಿತ್ಸೆಯಲ್ಲ ಆದರೆ ಇದರಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು ಧ್ವನಿ ತರಂಗಗಳನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಗಾಗಿ ನೀವು ಒಂದು ದಿನ ಅಥವಾ ಎರಡು ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.
ಅಲ್ಲದೆ, ಬೀಟ್ರೂಟ್ಗಳು, ಪಾಲಕ ಮತ್ತು ಬಾದಾಮಿಗಳಂತಹ ಆಕ್ಸಲೇಟ್-ಭರಿತ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಿ ಮತ್ತು ನಿಮ್ಮ ಸೋಡಿಯಂ ಸೇವನೆಯೊಂದಿಗೆ ಜಾಗರೂಕರಾಗಿರಿ. ಸೋಡಿಯಂ, ವೈದ್ಯರ ಪ್ರಕಾರ, ಮೂತ್ರದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಲ್ಲಿನ ರಚನೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.