Kalonji Seeds: ಪುರುಷರಿಗೆ ಅಲರ್ಟ್​! ಕಾಲಾ ಜೀರಾ ಬೀಜ ತಿಂದರೆ ಪುರುಷರಿಗೆ ಡಬಲ್ ಸ್ಟ್ಯಾಮಿನಾ.. ಮತ್ತು ಇನ್ನೂ ಅನೇಕ ಪ್ರಯೋಜನಗಳಿವೆ

| Updated By: ಸಾಧು ಶ್ರೀನಾಥ್​

Updated on: Jul 20, 2022 | 6:06 AM

Men Health Tips: ಪುರುಷರಿಗಾಗಿ ಆರೋಗ್ಯ ಸಲಹೆಗಳು - ಕಲೋಂಜಿ ಬೀಜಗಳನ್ನು ಸೇವಿಸುವುದರಿಂದ ದೇಹದಲ್ಲಿನ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು ಮತ್ತು ರೋಗಗಳನ್ನು ಸಹ ಗುಣಪಡಿಸಬಹುದು. ಇದಲ್ಲದೆ, ಈ ಬೀಜಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕಾಲಾ ಜೀರಾ ಬೀಜ ತಿಂದರೆ ಪುರುಷರಿಗೆ ಡಬಲ್ ಸ್ಟ್ಯಾಮಿನಾ ಬರುವುದೂ ಸೇರಿದಂತೆ ಇನ್ನೂ ಅನೇಕ ಪ್ರಯೋಜನಗಳಿವೆ.

Kalonji Seeds: ಪುರುಷರಿಗೆ ಅಲರ್ಟ್​! ಕಾಲಾ ಜೀರಾ ಬೀಜ ತಿಂದರೆ ಪುರುಷರಿಗೆ ಡಬಲ್ ಸ್ಟ್ಯಾಮಿನಾ.. ಮತ್ತು ಇನ್ನೂ ಅನೇಕ ಪ್ರಯೋಜನಗಳಿವೆ
ಕಾಲಾ ಜೀರಾ ಬೀಜ ತಿಂದರೆ ಪುರುಷರಿಗೆ ಡಬಲ್ ಸ್ಟ್ಯಾಮಿನಾ.. ಮತ್ತು ಇನ್ನೂ ಅನೇಕ ಪ್ರಯೋಜನಗಳಿವೆ
Follow us on

ಕಾಲಾ ಜೀರಾ/ಕಲೋಂಜಿ/ಕಪ್ಪು ಜೀರಿಗೆ (Kalonji Seeds or Black Cumin)ಎಂದು ಕರೆಯಲ್ಪಡುವ ಕಲೋಂಜಿ (Kalonji) ಹೂವಿನ ಗಿಡಗಳು ಬಟರ್‌ಕಪ್ ಕುಟುಂಬಕ್ಕೆ ಸೇರಿದೆ. ಇದು ಬೀಜಗಳನ್ನು ಹೊಂದಿರುವ ಹಣ್ಣುಗಳನ್ನು ಸೃಷ್ಟಿಸುತ್ತದೆ. ಇದನ್ನು ಅನೇಕ ಆಹಾರಗಳಲ್ಲಿ ಸುವಾಸನೆಯ ಮಸಾಲೆಯಾಗಿ ಬಳಸಲಾಗುತ್ತದೆ. ಅದರ ಅಡುಗೆಯ ಬಳಕೆಯ ಜೊತೆಗೆ, ಕಲೋಂಜಿ ಔಷಧೀಯ (Medicinal Plant) ಗುಣಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಹಲವಾರು ವರ್ಷಗಳಿಂದ ಔಷಧೀಯ ಗುಣಗಳಿಗಾಗಿ ಬಳಕೆ ಮಾಡಲಾಗುತ್ತಿದೆ (Kalonji Seeds Benefits For Male).

ಇಂದಿನ ಆಧುನಿಕ ಯುಗದಲ್ಲಿ ಜೀವನಶೈಲಿ ಮತ್ತು ಸತ್ವರಹಿತ ಆಹಾರ ಪದ್ಧತಿಯಿಂದ ಅನೇಕ ಮಂದಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ಪುರುಷರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಅಂತಹ ಸಂದರ್ಭಗಳಲ್ಲಿ ಕಪ್ಪು ಕಲೋಂಜಿ ಬೀಜಗಳು ಪುರುಷರಿಗೆ ಅಮೃತವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕಲೋಂಜಿ ಬೀಜಗಳನ್ನು ಸೇವಿಸುವುದರಿಂದ ದೇಹದಲ್ಲಿನ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು

ಕಲೋಂಜಿ ಬೀಜಗಳನ್ನು ಸೇವಿಸುವುದರಿಂದ ದೇಹದಲ್ಲಿನ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು ಮತ್ತು ರೋಗಗಳನ್ನು ಸಹ ಗುಣಪಡಿಸಬಹುದು. ಇದಲ್ಲದೆ, ಈ ಬೀಜಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಕಲೋಂಜಿ ಬೀಜಗಳು ಪುರುಷರಲ್ಲಿ ದೇಹದ ಶಕ್ತಿಯನ್ನು ಹೆಚ್ಚಿಸಲು ತುಂಬಾ ಒಳ್ಳೆಯದು. ಇಂದಿನ ದಿನಗಳಲ್ಲಿ ಪುರುಷ ಬಂಜೆತನದ ಸಮಸ್ಯೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಲೋಂಜಿ ಬೀಜಗಳ ಸೇವನೆಯು ಬಂಜೆತನವನ್ನು ಹೋಗಲಾಡಿಸಲು ತುಂಬಾ ಉಪಯುಕ್ತವಾಗಿದೆ. ಕಲೋಂಜಿ ಸೇವನೆಯು ಪುರುಷರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂದು ಈಗ ತಿಳಿಯಿರಿ. ಪುರುಷರಿಗಾಗಿ ಕಲೋಂಜಿ ಪ್ರಯೋಜನಗಳು:

  1. ಬಂಜೆತನ ಸಮಸ್ಯೆಯನ್ನು ನಿವಾರಿಸುತ್ತದೆ: ಕಲೋಂಜಿ ಬೀಜಗಳನ್ನು ಸೇವಿಸುವುದರಿಂದ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಲೈಂಗಿಕ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಕಲೋಂಜಿ ಬೀಜಗಳನ್ನು ತೆಗೆದುಕೊಳ್ಳುವುದರಿಂದ ಬಂಜೆತನದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಇದನ್ನು ತಿಂದರೆ ಪುರುಷರಲ್ಲಿನ ಶಕ್ತಿಹೀನತೆ ದೂರವಾಗಿ ಲೈಂಗಿಕ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು.
  2. ಪ್ರಾಸ್ಟೇಟ್ ಕ್ಯಾನ್ಸರ್ ತಡೆಯುತ್ತದೆ: ಕಲೋಂಜಿ ಬೀಜಗಳನ್ನು ಸೇವಿಸುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಸಮಸ್ಯೆಯನ್ನು ತಡೆಯಬಹುದು. ಇದರಲ್ಲಿರುವ ಸಟಿವಾ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಕಲೋಂಜಿ ತೆಗೆದುಕೊಳ್ಳುವುದು ಒಳ್ಳೆಯದು.
  3. ತ್ರಾಣವನ್ನು ಹೆಚ್ಚಿಸಲು ನೆರವಾಗುತ್ತದೆ: ಪುರುಷರಲ್ಲಿ ದೈಹಿಕ ಶಕ್ತಿಯನ್ನು ಹೆಚ್ಚಿಸಲು ಕಲೋಂಜಿ ಬೀಜಗಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಕಲೋಂಜಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ತ್ರಾಣ ದ್ವಿಗುಣಗೊಳ್ಳುತ್ತದೆ. ಇವುಗಳನ್ನು ಸೇವಿಸುವುದರಿಂದ ದೌರ್ಬಲ್ಯದ ಸಮಸ್ಯೆಯೂ ದೂರವಾಗುತ್ತದೆ. ಇದಲ್ಲದೆ, ರಕ್ತಹೀನತೆ ದೇಹದಿಂದ ಹೊರಹಾಕಲ್ಪಡುತ್ತದೆ.
  4. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ: ಕೂದಲು ಉದುರುವಿಕೆಗೆ ಕಲೋಂಜಿ ಬೀಜಗಳನ್ನು ಶಿಫಾರಸು ಮಾಡಲಾಗುತ್ತದೆ. ದಿನವೂ ಕೂದಲಿಗೆ ಕಲೋಂಜಿ ಎಣ್ಣೆಯನ್ನು ಬಳಸುವುದು ಒಳ್ಳೆಯದು. ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಇದರಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಕೂದಲು ಉದುರುವುದನ್ನು ತಡೆಯುತ್ತದೆ. ಕೂದಲನ್ನು ದಪ್ಪ ಮತ್ತು ಬಲವಾಗಿ ಮಾಡುತ್ತದೆ.
    To read in Telugu click here