
ಇತ್ತೀಚಿನ ದಿನಗಳಲ್ಲಿ ಮೊಣಕಾಲು ನೋವು ತುಂಬಾ ಸಾಮಾನ್ಯ ಸಮಸ್ಯೆಯಾಗಿದ್ದು, ಅದನ್ನು ನಿರ್ಲಕ್ಷಿಸುವುದು ಅಪಾಯಕಾರಿ. ದೀರ್ಘಕಾಲ ಕುಳಿತುಕೊಳ್ಳುವುದು, ಭಾರವಾದ ತೂಕವನ್ನು ಎತ್ತುವುದು, ತಪ್ಪಾದ ಭಂಗಿಯಲ್ಲಿ ನಡೆಯುವುದು ಅಥವಾ ಅತಿಯಾಗಿ ನಡೆಯುವುದು ಇವುಗಳು ಮೊಣಕಾಲು ನೋವು (Knee pain), ಬಿಗಿತ ಮತ್ತು ಊತಕ್ಕೆ ಕಾರಣವಾಗಬಹುದು. ಕಾಲಾನಂತರದಲ್ಲಿ, ಇದು ಮೊಣಕಾಲಿನ ಮೂಳೆ ಮತ್ತು ಕೀಲುಗಳ ದೌರ್ಬಲ್ಯ, ನಡೆಯಲು ತೊಂದರೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಅಡಚಣೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಬಾಬಾ ರಾಮದೇವ್ (Baba Ramdev) ಸೂಚಿಸಿದ ಕೆಲವು ಯೋಗಾಸನಗಳು ಮೊಣಕಾಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಯೋಗವು ಮೊಣಕಾಲುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ಕೀಲುಗಳನ್ನು ಬಲಪಡಿಸುತ್ತದೆ ಮತ್ತು ಮೊಣಕಾಲಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಯೋಗವು ಮೊಣಕಾಲಿನ ಸ್ನಾಯುಗಳು (muscle) ಮತ್ತು ಸ್ನಾಯುರಜ್ಜುಗಳನ್ನು (Tendon Muscle) ಫ್ಲೆಕ್ಸಿಬಲ್ ಆಗಿಸುತ್ತದೆ. ಇವುಗಳಿಗೆ ಗಾಯ ಮತ್ತು ನೋವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಮೊಣಕಾಲುಗಳಲ್ಲಿ ಬಿಗಿತ ಮತ್ತು ಊತವನ್ನು ಕಡಿಮೆ ಮಾಡುತ್ತದೆ, ನಡಿಗೆಯನ್ನು ಸುಲಭಗೊಳಿಸುತ್ತದೆ. ಆದ್ದರಿಂದ, ಬಾಬಾ ರಾಮದೇವ್ ಸೂಚಿಸಿದ ಯೋಗಾಸನಗಳು ಮೊಣಕಾಲು ನೋವನ್ನು ನಿವಾರಿಸಲು ಮತ್ತು ಕೀಲುಗಳನ್ನು ಬಲಪಡಿಸಲು ಪ್ರಯೋಜನಕಾರಿ ಎನಿಸುತ್ತದೆ.
ಇದನ್ನೂ ಓದಿ: ಫ್ಯಾಟಿ ಲಿವರ್ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಯೋಗ ಮತ್ತು ಪ್ರಾಣಾಯಾಮ
ವೀರಾಸನವು ಮೊಣಕಾಲು ಮತ್ತು ತೊಡೆಗಳ ಸ್ನಾಯುಗಳನ್ನು ಬಲಪಡಿಸುತ್ತದೆ. ಮೊಣಕಾಲಿನ ಕೀಲುಗಳಲ್ಲಿ ನಮ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ.
ಮಕರಾಸನವು ದೇಹವನ್ನು ಸಡಿಲಗೊಳಿಸುತ್ತದೆ ಮತ್ತು ಮೊಣಕಾಲುಗಳ ಸುತ್ತಲಿನ ಸ್ನಾಯುಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಮೊಣಕಾಲುಗಳಲ್ಲಿನ ಬಿಗಿತ ಮತ್ತು ನೋವಿನಿಂದ ಪರಿಹಾರವನ್ನು ನೀಡುತ್ತದೆ.
ತ್ರಿಕೋನಾಸನವು ಕಾಲು ಮತ್ತು ಮೊಣಕಾಲುಗಳ ಸ್ನಾಯುಗಳನ್ನು ಹಿಗ್ಗಿಸುತ್ತದೆ. ಈ ಆಸನವು ಮೊಣಕಾಲಿನ ಕೀಲುಗಳನ್ನು ಬಲಪಡಿಸುತ್ತದೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ.
ಮಲಾಸನವು ಮೊಣಕಾಲುಗಳು ಮತ್ತು ಸೊಂಟದ ಸ್ನಾಯುಗಳನ್ನು ಬಲಪಡಿಸುತ್ತದೆ. ನಿಯಮಿತ ಅಭ್ಯಾಸವು ಮೊಣಕಾಲು ನೋವನ್ನು ಕಡಿಮೆ ಮಾಡುತ್ತದೆ ಮತ್ತು ಕೀಲುಗಳನ್ನು ಬಲಪಡಿಸುತ್ತದೆ.
ಇದನ್ನೂ ಓದಿ: ಶ್ವಾಸಕೋಶಕ್ಕೆ ಜೀವ ತುಂಬಿ, ಉಸಿರಾಟದ ಶಕ್ತಿ ಹೆಚ್ಚಿಸುವ ಪ್ರಾಣಾಯಾಮ ಮತ್ತು ಯೋಗಾಸನ
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ