ಕೊವಿಡ್ ಸೋಂಕು ಉಸಿರಾಟದ ಮೇಲೆ ಪರಿಣಾಮ ಬೀರುವುದಲ್ಲದೇ ದೇಹದ ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ ಎಂಬುದು ತಿಳಿದು ಬಂದಿದೆ. ಅದರಲ್ಲಿಯೂ ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕೊವಿಡ್ನಿಂದ ಚೇತರಿಸಿಕೊಂಡ ನಂತರವೂ ಕೂಡಾ ನಿಮ್ಮ ಆರೋಗ್ಯದಲ್ಲಿ ಏರು-ಪೇರು ಉಂಟಾಗುತ್ತಿದೆ. ಅದರಲ್ಲಿಯೂ ಹೆಚ್ಚಾಗಿ ಜೀರ್ಣಕ್ರಿಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಅಂದಾದರೆ ಈ ಕುರಿತಂತೆ ನೀವು ಹೆಚ್ಚು ಗಮನವಹಿಸಲೇ ಬೇಕು.
ಮನುಷ್ಯನ ದೇಹದಲ್ಲಿ ಜೀರ್ಣಕ್ರಿಯೆ ಮುಖ್ಯವಾದುದು. ತಿಂದ ಪ್ರತಿಯೊಂದು ಆಹಾರವೂ ಕೂಡಾ ಜೀರ್ಣವಾಗಬೇಕು. ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ಇತರ ಸಮಸ್ಯೆಗಳು ಕಾಡುತ್ತದೆ. ಹೀಗಿರುವಾಗ ಮುಖ್ಯವಾಗಿ ಗಮನಹರಿಸಬೇಕಾದ ಒಂದಿಷ್ಟು ವಿಷಯಗಳ ಕುರಿತಾಗಿ ತಿಳಿಯೋಣ. ಕೊವಿಡ್ ಚೇತರಿಕೆಯ ಬಳಿಕ ಮಲಬದ್ಧತೆ, ಹಸಿವಿನ ಕೊರತೆ ಅಥವಾ ಹಸಿವು ಹೆಚ್ಚು, ಹೊಟ್ಟೆ ಉಬ್ಬುವುದು, ಕಿಬ್ಬೊಟ್ಟೆ ನೋವು, ಅತಿಸಾರ, ವಾಂತಿ, ಕರುಳಿನ ಉರಿಯೂತ ಸಮಸ್ಯೆಗಳು ಕಂಡು ಬರಬಹುದು. ಇದು ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದರಿಂದ ಕಂಡು ಬರುವ ಸಮಸ್ಯೆಗಳಾಗಿವೆ.
ಆಹಾರ ಪದ್ಧತಿ ಹೇಗಿರಬೇಕು?
*ನಿಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಿ
*ಅತಿಯಾಗಿ ತಿನ್ನುವುದನ್ನು ಬಿಟ್ಟುಬಿಡಿ
*ಕ್ರಿಯಾಶೀಲರಾಗಿರಿ
*ನಿಯಮಿತವಾಗಿ ವ್ಯಾಯಾಮ ಮಾಡಿ
*ಫೈಬರ್ ಸಂಯುಕ್ತಗಳಾಗಿರುವ ಪ್ರಿಬಯಾಟಿಕ್ ಆಹಾರವನ್ನು ಸೇವಿಸಿ
*ಪೌಷ್ಟಿಕಾಂಶಯುಕ್ತ ಹಣ್ಣುಗಳು- ತರಕಾರಿಗಳನ್ನು ಸೇವಿಸಿ
*ಪ್ರತಿದಿನ 2-3 ಲೀಟರ್ ನೀರು ಕುಡಿಯಿರಿ
*ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಪದಾರ್ಥವನ್ನು ಸೇವಿಸಿ
*ಹಾಲು, ಸಾಲ್, ಬೇಳೆಕಾಳುಗಳು, ದ್ವಿದಳ ಧಾನ್ಯಗಳು, ಸೋಯಾದಂತಹ ಪೌಷ್ಟಿಕ ಆಹಾರ ಸೇವಿಸಿ
*ಮಾಂಸಾಹಾರಿಗಳಾಗಿದ್ದರೆ ಕೋಳಿ, ಮೀನು, ಮೊಟ್ಟೆಯನ್ನು ಸೇವಿಸಿ
*ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗೆ ಕಾರಣವಾಗುವ ಉಪ್ಪು ಮತ್ತು ಸಕ್ಕರೆಯ ಸೇವನೆಯ ಕುರಿತಾಗಿ ಜಾಗರೂಕರಾಗಿರಿ
ಇದನ್ನೂ ಓದಿ:
Health Tips: ದಾಳಿಂಬೆ ಸಿಪ್ಪೆಯಲ್ಲಿದೆ ನಿಮಗೆ ಗೊತ್ತಿಲ್ಲದ ಪ್ರಯೋಜನಗಳು
Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?