ಹಣ್ಣುಗಳು ಅಥವಾ ತರಕಾರಿಗಳನ್ನು ಸೇವಿಸುವಲ್ಲಿ ನಮ್ಮಲ್ಲಿ ಹೆಚ್ಚಿನವರು ಒಂದೇ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ. ಹಣ್ಣುಗಳ ಬೆಲೆ, ಆದ್ಯತೆ ಜತೆಗೆ ರುಚಿಯ ಆಧಾರದ ಮೇಲೆ ಒಂದೇ ಜಾತಿಯ ಹಣ್ಣು ಸೇವನೆಯಲ್ಲಿ ಹೊಂದಿಕೊಂಡಿರುತ್ತಾರೆ. ಆದರೆ, ವಿವಿಧ ಬಣ್ಣದಿಂದ ಕೂಡಿರುವ ವರ್ಣರಂಜಿತ ಹಣ್ಣುಗಳು ಅಥವಾ ತರಕಾರಿಗಳ ಸೇವನೆಯು ಆರೋಗ್ಯವನ್ನು ಸುಧಾರಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನಮ್ಮ ದೇಹದ ಆರೋಗ್ಯಕ್ಕೆ ವಿವಿಧ ಬಗೆಯ ಆಹಾರ ಬೇಕು. ಇದನ್ನು ಪಡೆಯಲು ಒಂದು ಉತ್ತಮ ಮಾರ್ಗವೆಂದರೆ ಎಲ್ಲಾ ಬಗೆಯ ಬಣ್ಣಗಳ ಹಣ್ಣುಗಳು ಅಥವಾ ತರಕಾರಿಗಳನ್ನು ಸೇವಿಸುವುದು ಎಂದು ಸಂಶೋಧಕರು ತಿಳಿಸಿದ್ದಾರೆ.
ವಿವಿಧ ಬಗೆಯ ಹಣ್ಣುಗಳನ್ನು ಅಥವಾ ತರಕಾರಿಗಳನ್ನು ಸೇವಿಸಿದಾಗ ಪೋಷಕಾಂಶಗಳು ಮತ್ತು ಫೈಟೊನ್ಯೂಟ್ರಿಯಂಟ್ಗಳು ನಮ್ಮ ದೇಹಕ್ಕೆ ಸಿಗುತ್ತವೆ. ಫೈಟೋನ್ಯೂಟ್ರಿಯಂಟ್ ಸಸ್ಯಗಳಿಂದ ಉತ್ಪತ್ತಿಯಾಗುವ ಸಣ್ಣ ರಾಸಾಯನಿಕ ಸಂಯುಕ್ತಗಳಾಗಿವೆ. ನಮ್ಮ ದೇಹದಲ್ಲಿ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಜತೆಗೆ ನಿಮ್ಮ ದೇಹದಲ್ಲಿನ ವಿಷವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಆದರೆ ನಿಮ್ಮ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ನಿರ್ಲಕ್ಷ್ಯಿಸಬಾರದು. ನಿಮ್ಮ ಮೆದುಳು ಮತ್ತು ಹೃದಯದ ಆರೋಗ್ಯದ ಮೇಲೆ ಹಣ್ಣು ಮತ್ತು ತರಕಾರಿಗಳಿಂದ ಸಿಗುವ ಪೋಷಕಾಂಶಗಳು ಒಳ್ಳೆಯ ಪರಿಣಾಮ ಬೀರುತ್ತವೆ ಎಂದು ಅಮೆರಿಕ ಒರೆಗಾನ್ನಲ್ಲಿರುವ ವೆಸ್ಟರ್ನ್ ಸ್ಟೇಟ್ಸ್ ವಿಶ್ವವಿದ್ಯಾಲಯದ ಪೌಷ್ಟಿಕ ತಜ್ಞ, ವೈದ್ಯ ಡಿಯಾನ್ ಮಿನಿಚ್ ಹೇಳಿದ್ದಾರೆ.
ಏಕೆಂದರೆ ವಿವಿಧ ಜಾತಿಯ ಅಥವಾ ಬಣ್ಣದಿಂದ ಕೂಡಿದ ಹಣ್ಣು, ತರಕಾರಿಗಳಲ್ಲಿ ಫೈರೋನ್ಯೂಟ್ರಿಯೆಂಟ್ಸ್ ಎಂದು ಕರೆಯಲ್ಪಡುವ ನೈಸರ್ಗಿಕ ಸಂಯುಕ್ತಗಳಿವೆ. ಇದರಲ್ಲಿ ಕ್ಯಾರೊಟಿನಾಯ್ಡ್ಗಳು ಮತ್ತು ಫ್ಲೇವನಾಯ್ಡ್ಗಳು ಸೇರಿವೆ. ಇದು ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತವೆ.
ನೀಲಿ ಬಣ್ಣದಿಂದ ಕೂಡಿದ ನೇರಳೆ ಮತ್ತು ಬೆರ್ರಿ ಹಣ್ಣುಗಳು, ಆಂಥೋಸಯಾನಿನ್ ಎಂಬ ಎಂಬ ಅಂಶವನ್ನು ಹೊಂದಿದ್ದು, ಇದು ಹೃದ್ರೋಗ, ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಹಳದಿ ಬಣ್ಣದಿಂದ ಕೂಡಿದ ಹಣ್ಣುಗಳು, ಅದರಲ್ಲಿರುವ ಫ್ಲೇವೊನ್ಸ್ ಹೃದಯದ ಖಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.
ಕೆಲವು ಅಧ್ಯಯನಗಳ ಪ್ರಕಾರ, ಫ್ಲೇವೊನೈಡ್ಗಳು ಮೆದುಳಿನ ಆರೋಗ್ಯವನ್ನು ಸುಧಾರಿಸಬಹುದು. ಇದು ಮೆದುಳಿನಲ್ಲಿ ಆಲ್ಜೈಮರ್ ಖಾಯಿಲೆಗೆ ಸಂಬಂಧಿಸಿದ ನ್ಯುರೋಟಾಕ್ಸಿಟಿಯನ್ನು ತಡೆಯಬಹುದು ಎಂಬುದು ತಿಳಿದು ಬಂದಿದೆ. ಹೆಚ್ಚು ಫ್ಲೇವೊನೈಡ್ ಭರಿತ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ವಿವಿಧ ಬಣ್ಣಗಳಿಂದ ಕೂಡಿದ ಆಹಾರವನ್ನು ಸೇವಿಸುವುದು ಸಹ ಕಷ್ಟವೆನಿಸಬಹುದು. ಏಕೆಂದರೆ ಕೆಲವರು ಬಾರಿ ಗಂಟಲು ಕಟ್ಟುವ ಸಮಸ್ಯೆ ಉಂಟಾಗುತ್ತವೆ. ಆದರೆ ಪ್ರೋಟೀನ್ಗಳಂತಹ ಅಗತ್ಯವಿರುವ ಎಲ್ಲಾ ಮ್ಯಾಕ್ರೋನ್ಯೂಟ್ರಿಯಂಟ್ಗಳನ್ನು ಪಡೆಯಲು ನಾವು ಒಂದಕ್ಕೇ ಹೊಂದಿಕೊಂಡಿರಬಾರದು. ಎಲ್ಲಾ ಬಗೆಯ ಆಹಾರವನ್ನು ಸೇವಿಸಬೇಕು ಎಂದು ಹಾರ್ಟ್ ಫೌಂಡೇಶನ್ ಹಿರಿಯ ಆಹಾರ ತಜ್ಞ ವಿಕ್ಟೋರಿಯಾ ಟೇಲರ್ ಹೇಳುತ್ತಾರೆ. ಈ ಕುರಿತಂತೆ ಪ್ಯೂಚರ್ ವರದಿಯಲ್ಲಿ ಉಲ್ಲೇಖಿಸಿದೆ.
ನೀವು ಒಂದೇ ಜಾತಿಯ ಹಣ್ಣನ್ನು ತಿನ್ನುತ್ತಿದ್ದರೆ ತೃಪ್ತಿ ಪಡೆಯುತ್ತೀರಿ, ಆದರೆ ವಿಭಿನ್ನ ಜಾತಿಯ ಹಣ್ಣುಗಳನ್ನು ಅಥವಾ ತರಕಾರಿಗಳನ್ನು ಸೇವಿಸುತ್ತಿದ್ದರೆ ಹೆಚ್ಚು ಸಮಯ ತಿನ್ನಲು ಬಯಸುತ್ತೀರಿ. ತಿಳಿಯಬೇಕಾದ ಅಂಶವೆಂದರೆ, ನಿಮ್ಮ ಆರೋಗ್ಯಕ್ಕೆ ಎಲ್ಲವೂ ಸರಿಹೊಂದುವುದಿಲ್ಲ. ವಿವಿಧ ಬಗೆಯ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದಲೂ ಅನಾರೋಗ್ಯ ಉಂಟಾಗಬಹುದು ಎಂದು ಎಂದು ಸ್ವಾನ್ಸೀ ವಿಶ್ವವಿದ್ಯಾಯಲದ ಪಿಹೆಚ್ಡಿ ವಿದ್ಯಾರ್ಥಿ ರೋಚೆಲ್ ಎಂಬ್ಲಿಂಗ್ ಹೇಳಿದ್ದಾರೆ.
ಬಣ್ಣವನ್ನು ಹೊರತು ಪಡಿಸಿದರೆ ರುಚಿಗೆ ಗಮನಕೊಟ್ಟು ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮಾರ್ಗವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕಹಿ ರುಚಿಯನ್ನು ಹೊಂದಿರುವಂತಹ ಆಹಾರ ವ್ಯವಸ್ಥೆ ಅಂದರೆ ಹಾಗಲಕಾಯಿಯಂತಹ ತರಕಾರಿಗಳನ್ನು ಸೇವಿಸುವುದು. ಅವುಗಳಲ್ಲಿ ಫೈಬರ್ ಅಂಶ ಇರುವುದರಿಂದ ಇದು ದೇಹದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ತರಕಾರಿಗಳಾದ ಎಲೆಕೋಸುವಿನಲ್ಲಿ ಉತ್ಕರ್ಷಣ ನಿರೋಧಕಗಳಾದ ಫ್ಲೇವೊನೈಡ್ಗಳು, ಕ್ಯಾರೊಟಿನಾಯ್ಡ್ಗಳು ಮತ್ತು ಬಯೋಆಕ್ಟೀವ್, ಫೈಟೊಕೆಮಿಕಲ್ ಅಂಶವಿರುತ್ತದೆ. ಇದು ನಿಮ್ಮ ಆಹಾರದಲ್ಲಿ ಸೇರಿಕೊಳ್ಳುವುದರಿಂದ ಆರೋಗ್ಯ ಸುದಾರಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ:
Health Tips: ಬಾಳೆ ಎಲೆಯ ಮೇಲೆ ಊಟ ಮಾಡುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ
Health Tips: ಅಧಿಕ ರಕ್ತದೊತ್ತಡ ಸಮಸ್ಯೆ ನಿಂಯತ್ರಿಸಲು ಈ ಕೆಲವು ವಿಷಯಗಳು ಗಮನದಲ್ಲಿರಲಿ
(Know about Eating Colourful food is good for your health check in kannada)