Health Tips: ಶುಂಠಿ ಚಹಾ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?

| Updated By: shruti hegde

Updated on: Sep 24, 2021 | 9:20 AM

ಶುಂಠಿ ಚಹಾ ತಯಾರಿಸಿ ಸುಲಭದಲ್ಲಿ ಅರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಮಳೆಗಾಲದಲ್ಲಿ ಮಾಮೂಲಿಯಾದ ಶೀತ, ನೆಗಡಿ, ಕೆಮ್ಮಿಗೆ ಸುಲಭದಲ್ಲಿ ಪರಿಹಾರ ಕಂಡುಕೊಳ್ಳಬಹುದು.

Health Tips: ಶುಂಠಿ ಚಹಾ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಶುಂಠಿ ಚಹಾ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಇದು ದೇಹದ ತೂಕ ನಷ್ಟಕ್ಕೆ ತುಂಬಾ ಪ್ರಯೋಜಕಾರಿ. ದಿನವಿಡೀ ನಿಮ್ಮ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವಂತೆ ನೋಡಿಕೊಳ್ಳುತ್ತದೆ. ಶುಂಠಿ ಚಹಾ ಸವಿಯಲು ರುಚಿ ಜತೆಗೆ ಆರೋಗ್ಯಕ್ಕೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಮನೆಯಲ್ಲಿ ಬಳಸುವ ಕೆಲವು ಮಸಾಲೆ ಪದಾರ್ಥಗಳು ನಿಮ್ಮ ಆರೊಗ್ಯ ಸುಧಾರಣೆಗೆ ಸಹಾಯಕವಾಗಿದೆ. ಹಾಗಿರುವಾಗ ಶುಂಠಿ ಚಹಾ ತಯಾರಿಸಿ ಸುಲಭದಲ್ಲಿ ಅರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಮಳೆಗಾಲದಲ್ಲಿ ಮಾಮೂಲಿಯಾದ ಶೀತ, ನೆಗಡಿ, ಕೆಮ್ಮಿಗೆ ಸುಲಭದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಬಿಸಿ ಬಿಸಿಯಿರುವಾಗಲೇ ಶುಂಠಿ ಚಹಾ ಸವಿದು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿದೆ. ಕೆಮ್ಮು, ಶೀತದಂತಹ ಸಮಸ್ಯೆ ಹೊಂದಿದ್ದರೆ ಶುಂಠಿಯನ್ನು ಸೇವಿಸಿ.

ಶುಂಠಿ ವಿಟಮಿನ್ ಕೆ ಅಂಶದ ಉತ್ತಮ ಮೂಲವಾಗಿದೆ. ಇದು ಪಾರ್ಶ್ವವಾಯು ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜತೆಗೆ ವೈರಸ್ ವಿರೋಧಿ ಗುಣಗಳನ್ನು ಹೊಂದಿರುತ್ತದೆ.

ಶುಂಠಿ ಸೇವನೆಯು ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಜತೆಗೆ ವಾಕರಿಕೆ ಅಥವಾ ವಾಂತಿಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗಲು ನೆರವಾಗುತ್ತದೆ. ಹಾಗಾಗಿ ವಾರಕ್ಕೊಮ್ಮೆಯಾದರೂ ಶುಂಠಿ ಚಹ ಮಾಡಿ ಸವಿಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ:

Health Tips: ಹಲಸಿನ ಹಣ್ಣಿನ ಸೇವನೆಯ ಆರೋಗ್ಯ ಪ್ರಯೋಜನಗಳು ಬಹಳಷ್ಟಿವೆ; ಈ ಕೆಲವು ಸಲಹೆಗಳು ನಿಮಗಾಗಿ

Health Tips: ಹಲಸಿನ ಹಣ್ಣಿನ ಸೇವನೆಯ ಆರೋಗ್ಯ ಪ್ರಯೋಜನಗಳು ಬಹಳಷ್ಟಿವೆ; ಈ ಕೆಲವು ಸಲಹೆಗಳು ನಿಮಗಾಗಿ

(Know about ginger tea health benefits check in kannada)