Health Tips: ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಈ ಕೆಲವು ಅಂಶಗಳೇ ಕಾರಣ!

| Updated By: preethi shettigar

Updated on: Sep 22, 2021 | 8:34 AM

ಅಧಿಕ ಬೊಜ್ಜಿನ ಸಮಸ್ಯೆಯಿಂದ ಟೈಪ್ 2 ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಕೀಲು ನೋವಿನಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹಾಗಿರುವಾಗ ನಿಮ್ಮ ದೇಹದ ತೂಕ ನಿಯಂತ್ರಿಸುವುದು ಅವಶ್ಯಕ.

Health Tips: ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಈ ಕೆಲವು ಅಂಶಗಳೇ ಕಾರಣ!
ಸಾಂದರ್ಭಿಕ ಚಿತ್ರ
Follow us on

ತೂಕ ಇಳಿಸಿಕೊಳ್ಳಲು ಅದೆಷ್ಟೋ ತಿಂಗಳುಗಳಿಂದ ಸಲಹೆ ಹುಡುಕುತ್ತಿರಬಹುದು. ಜೀವನ ಶೈಲಿಯಲ್ಲಿನ ಬದಲಾವಣೆ ಮತ್ತು ಆಹಾರದ ಬದಲಾವಣೆಗಳಿಂದ ದೇಹದ ತೂಕ ಹೆಚ್ಚಳವಾಗುತ್ತದೆ. ಅಧಿಕ ಬೊಜ್ಜಿನ ಸಮಸ್ಯೆಯಿಂದ ಟೈಪ್ 2 ಡಯಾಬಿಟೀಸ್, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಕೀಲು ನೋವಿನಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹಾಗಿರುವಾಗ ನಿಮ್ಮ ದೇಹದ ತೂಕ ನಿಯಂತ್ರಿಸುವುದು ಅವಶ್ಯಕ. ದೇಹದ ತೂಕ ಹೆಚ್ಚಕ್ಕೆ ಕಾರಣವಾಗುವ ಕೆಲವು ಅಂಶಗಳು ಈ ಕೆಳಗಿನಂತಿವೆ.

ಒತ್ತಡ
ದೇಹದ ಒತ್ತಡವು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಕೆಲಸದ ಒತ್ತಡ, ಕಟ್ಟು ನಿಟ್ಟಾದ ದಿನಚರಿ ಇದು ನಿಮಗೆ ಒತ್ತಡವನ್ನುಂಟು ಮಾಡಬಹುದು. ಒತ್ತಡವು ವಿವಿಧ ಹಾರ್ಮೋನುಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಇದರಿಂದ ನಿಮ್ಮ ದೇಹದ ತೂಹ ಹೆಚ್ಚಳವಾಗುವ ಸಾಧ್ಯತೆಗಳಿರುತ್ತದೆ.

ನಿದ್ರಾಹೀನತೆ
ತೂಕ ಹೆಚ್ಚಳಕ್ಕೆ ಮತ್ತೊಂದು ಕಾರಣವೇನೆಂದರೆ ನಿದ್ರಾಹೀನತೆ. ಮಲಗುವ ವಿಧಾನದಲ್ಲಿ ಬದಲಾವಣೆಗಳು, ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡ ಮನಸ್ಥಿತಿಯ ಮೇಲೆ ಪರಿಣಅಮ ಬೀರುತ್ತದೆ. ನಿದ್ದೆಯಿಲ್ಲದ ಜನರು ಹೆಚ್ಚು ಕಾರ್ಬೊಹೈಡ್ರೇಟ್​ಗಳನ್ನು ಆಹಾರದ ಮೂಲಕ ಸೇವಿಸುತ್ತಾರೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಔಷಧಿ
ಕೆಲವು ಔಷಧಿಗಳು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ. ಖಿನ್ನತೆ, ಸ್ಟೀರಾಯ್ಡ್​ಗೆ ಸಂಬಂಧಿಸಿದಂತೆ ಸೇವಿಸುವ ಮಾತ್ರೆಗಳು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಆದ್ದರಿಂದ ವೈದ್ಯರಲ್ಲಿ ಸಮಾಲೋಚಿಸಿ ಬಳಿಕ ಮಾತ್ರೆಗಳನ್ನು ಸೇವಿಸಿ.

ಥೈರಾಯ್ಡ್ ಸಮಸ್ಯೆ
ಥೈರಾಯ್ಡ್ ಸಮಸ್ಯೆ ಹೊಂದಿರುವವರಿಗೆ ತೂಕ ಹೆಚ್ಚಳ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಆಹಾರ ಪದ್ಧತಿಯಲ್ಲಿನ ನಿಯಂತ್ರಣ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಗಳು ಜತೆಗೆ ನಿಯಮಿತ ವ್ಯಾಯಾಮದ ಮೂಲಕ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು. ವ್ಯಾಯಾಮ ಮಾಡುವುದರಿಂದದ ದೇಹದ ತೂಕವನ್ನು ನಿಯಂತ್ರಿಸಬಹುದು.

ಇದನ್ನೂ ಓದಿ:

Health Tips: ಬಾಳೆ ಎಲೆಯ ಮೇಲೆ ಊಟ ಮಾಡುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

Health Tips: ಆಹಾರದಲ್ಲಿನ ಈ ಕೆಲವು ಮಸಾಲೆ ಪದಾರ್ಥಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸುತ್ತದೆ

(Know about Six reasons for weight gain check in Kannada)