ಸಮಾಜ, ತಂತ್ರಜ್ಞಾನ (Technology) ಎಷ್ಟೇ ಮುಂದುವರೆದರೂ ಮಹಿಳೆಯರ(Woman) ಕುರಿತಾದ ಕೆಲವು ವಿಚಾರಗಳು ಮಾತ್ರ ಗೌಣವಾಗಿಯೇ ಇರುತ್ತದೆ. ಕೆಲವೊಂದಿಷ್ಟು ಮಿಥ್ಯೆಗಳಲ್ಲಿಯೇ ಬದುಕು ಸಾಗುತ್ತಿರುತ್ತದೆ. ಅದೆಷ್ಟೇ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾದರೂ ಮಹಿಳೆಯ ದೇಹದ ಪ್ರಕೃತಿಯನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಪುರಾಣ ಕಾಲದಿಂದಲೂ ಕೆಲವು ವಿಚಾರಗಳು ಮಹಿಳೆಯರನ್ನು ಕಾಡುತ್ತಿದೆ ಆದರೆ ಅದು ಎಷ್ಟು ಸತ್ಯ ಎನ್ನುವುದು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ಕುರಿತು ಟೈಮ್ಸ್ ನೌ ಮಾಹಿತಿಯನ್ನು ಹಂಚಿಕೊಂಡಿದೆ. ಇಲ್ಲಿ ಮಹಿಳೆಯರ ಬಗ್ಗೆ ಇರುವ ಕೆಲವು ಮಿಥ್ಯ ವಿಚಾರಗಳು ಯಾವವು ಹಾಗೂ ಅದರ ಸತ್ಯಾಸತ್ಯತೆಗಳೇನು ಎನ್ನುವುದನ್ನು ವಿವರಿಸಲಾಗಿದೆ. ಇಲ್ಲಿದೆ ನೋಡಿ ಮಾಹಿತಿ.
ಲೈಂಗಿಕತೆ ವೇಳೆ ನೋವು ಸಹಜ:
ಲೈಂಗಿಕ ಸಂಭೋಗದ ಸಮಯದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಆರೋಗ್ಯಕರ ಲೈಂಗಿಕತೆಯು ನೋವಿನಿಂದ ಕೂಡಿರುವುದಿಲ್ಲ. ಒಂದು ವೇಳೆ ಆ ರೀತಿ ನೋವು ಕಾಣಿಸಿಕೊಂಡರೆ ಅದು ಯೋನಿಸ್ಮಸ್ ನ ಲಕ್ಷಣವಾಗಿರಬಹದು.
ಯೋನಿಯಿಂದಾಗುವ ಡಿಸ್ಚಾರ್ಜ್ ಒಳಿತಲ್ಲ:
ಯೋನಿಯಿಂದಾಗು ಡಿಸ್ಚಾರ್ಜ್ ಸಾಮಾನ್ಯ. ಹೀಗಾಗಿ ಅದನ್ನು ಒಳಿತಲ್ಲ ಎನ್ನುವುದು ತಪ್ಪು. ಆದರೆ ನೆನಪಿಡಿ. ಸ್ರವಿಸುವಿಕೆಯಲ್ಲಿ ವಾಸನೆ ಅಥವಾ ಬಣ್ಣ ಬದಲಾವಣೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಅದರ ಹೊರತಾಗಿ ಯಾವುದೇ ಅಪಾಯಗಳಿಲ್ಲ ಎನ್ನಲಾಗುತ್ತದೆ.
ಋತುಚಕ್ರ ಜನನ ನಿಯಂತ್ರಣವಾಗಿದೆ:
ಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಜನನ ನಿಯಂತ್ರಣವಾಗುವುದಿಲ್ಲ. ಋತುಚಕ್ರದ ಮೇಲೆಯೂ ಯಾವುದೇ ಪರಿಣಾಮ ಬೀರುವುದಿಲ್ಲ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಋತುಚಕ್ರ ಏರುಪೇರಾಗಿ ಜನನ ನಿಯಂತ್ರಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಋತುಚಕ್ರ ಜನನ ನಿಯಂತ್ರಣಕ್ಕೆ ಕಾರಣವಾಗಿಲ್ಲ ಎಂದು ಹೇಳಲಾಗಿದೆ.
ಸ್ತನಗಳ ಬಗೆಗಿನ ಅಭದ್ರತೆ:
ಸ್ತನಗಳು ಹೆಣ್ಣಿನ ದೇಹದ ಬಹುಮುಖ್ಯ ಅಂಗವಾಗಿದೆ. ಆದರೆ ಒಂದು ಧೋರಣೆಯ ಪ್ರಕಾರ ಸ್ತನಗಳು ಸಮ್ಮಿತೀಯವಾಗಿರಬೇಕು ಎನ್ನಲಾಗಿದೆ. ಆದರೆ ವೈಜ್ಞಾನಿಕವಾಗಿ ಸ್ತನಗಳು ಬೇರೆ ಬೇರೆ ಅಳತೆ ಹೊಂದಿರುತ್ತದೆ. ಹೀಗಾಗಿ ಆ ಬಗ್ಗೆ ಅಭದ್ರತೆ ಬೇಡ ಎಂದು ಹೇಳಲಾಗುತ್ತದೆ.
(ಇಲ್ಲಿರುವ ಮಾಹಿತಿಗಳು ಟವಿ9ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್ ನೌ ವರದಿಯನ್ನು ಆಧರಿಸಿ ಸಲಹೆಗಳನ್ನು ನೀಡಲಾಗಿದೆ.)
ಇದನ್ನೂ ಓದಿ:
Child Care: ನಿಮ್ಮ ಮಗು ಆಗಾಗ್ಗೆ ಹೊಟ್ಟೆ ನೋವಿನಿಂದ ಬಳಲುತ್ತಿದೆಯೇ? ಇಲ್ಲಿದೆ ತಜ್ಞರಿಂದ ಸೂಕ್ತ ಸಲಹೆ
Published On - 12:50 pm, Sun, 20 February 22