Diabetes: ಮಧುಮೇಹ ಬರುವುದಕ್ಕೂ ಮುನ್ನ ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬರಬಹುದು

|

Updated on: Jul 20, 2023 | 3:38 PM

ಪ್ರಾರಂಭದ ಹಂತದಲ್ಲಿಯೇ ಮಧುಮೇಹ ಕಾಯಿಲೆಯ ಲಕ್ಷಣಗಳನ್ನು ತಿಳಿದು ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅವಶ್ಯಕ ಎಂದು ತಜ್ಞರು ಎಚ್ಚರಿಸುತ್ತಾರೆ.

Diabetes: ಮಧುಮೇಹ ಬರುವುದಕ್ಕೂ ಮುನ್ನ ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬರಬಹುದು
Prediabetes
Follow us on

ಭಾರತದಲ್ಲಿ ಮಧುಮೇಹ(Diabetes) ಕಾಯಿಲೆಯ ವ್ಯಾಪ್ತಿಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದೀಗಾಗಲೇ ದೇಶದಲ್ಲಿ 10 ಕೋಟಿಗೂ ಹೆಚ್ಚು ಪ್ರಕರಣಗಳಿವೆ. ಕೇವಲ ವಯಸ್ಕರಲ್ಲಿ ಮಾತ್ರವಲ್ಲದೇ ಮಕ್ಕಳ ವರೆಗೂ ಈ ರೋಗ ಲಕ್ಷಣಗಳನ್ನು ಕಾಣಬಹುದು. ಆದ್ದರಿಂದ ಪ್ರಾರಂಭದ ಹಂತದಲ್ಲಿಯೇ ಇದರ ಲಕ್ಷಣಗಳನ್ನು ತಿಳಿದು ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅವಶ್ಯಕ ಎಂದು ತಜ್ಞರು ಎಚ್ಚರಿಸುತ್ತಾರೆ. ಮಧುಮೇಹ ಪೂರ್ವ ಹಂತ ಯಾವುದು ಮತ್ತು ಅದರ ಲಕ್ಷಣಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಕುರಿತು ದೆಹಲಿಯ ಹಿರಿಯ ವೈದ್ಯ ಡಾ.ಅಜಯ್ ಕುಮಾರ್ ಹಾಗೂ ಸಫ್ದರ್ ಡಾ.ಜುಗಲ್ ಕಿಶೋರ್ ನೀಡಿರುವ ಸಲಹೆ ಇಲ್ಲಿವೆ.

ಮಧುಮೇಹ ಪೂರ್ವದ ಲಕ್ಷಣಗಳು:

1. ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ:

ಮಧುಮೇಹ ಪೂರ್ವ ಹಂತದಲ್ಲಿ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆಯಾದರೂ ಅದು ಮಧುಮೇಹದ ಮಿತಿಯನ್ನು ತಲುಪುವುದಿಲ್ಲ. ಈ ಸಮಯದಲ್ಲಿ ವ್ಯಕ್ತಿಯು ಹೆಚ್ಚು ಬೆವರುತ್ತಾನೆ ಹಾಗೂ ಹೆಚ್ಚು ಹಸಿವು, ಪದೇ ಪದೇ ಮೂತ್ರ ವಿಸರ್ಜನೆ ಮುಂತಾದ ಲಕ್ಷಣಗಳು ಕಂಡು ಬರುತ್ತದೆ. ಇವೆಲ್ಲವೂ ದೇಹವು ಮಧುಮೇಹ ಪೂರ್ವ ಹಂತವನ್ನು ಪ್ರವೇಶಿಸಿದೆ ಎಂದು ಸೂಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಕ್ಷಣವೇ ಜೀವನಶೈಲಿಯನ್ನು ಬದಲಾಯಿಸುವ ಬಗ್ಗೆ ಗಮನ ಕೊಡದಿದ್ದರೆ, ಮಧುಮೇಹ ಶೀಘ್ರದಲ್ಲೇ ಬರಬಹುದು ಎಂದು ಡಾ.ಅಜಯ್ ಕುಮಾರ್ ವಿವರಿಸುತ್ತಾರೆ.

2. ತಲೆಸುತ್ತು ಸಮಸ್ಯೆ:

ಮಧುಮೇಹ ಪೂರ್ವ ಹಂತದಲ್ಲಿ ಬಿಪಿ ಹೆಚ್ಚುತ್ತದೆ ಮತ್ತು ತಲೆಸುತ್ತು ಕೂಡ ಬರುತ್ತದೆ. ತೂಕವೂ ಹೆಚ್ಚಾಗತೊಡಗುತ್ತದೆ. ದೇಹವು ಶೀಘ್ರದಲ್ಲೇ ಮಧುಮೇಹಕ್ಕೆ ಬಲಿಯಾಗಬಹುದು ಎಂಬುದರ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಬಿಪಿಯನ್ನು ನಿಯಂತ್ರಿಸುವುದು ಮತ್ತು ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

3. ಪಾದಗಳ ಮರಗಟ್ಟುವಿಕೆ:

ಪಾದಗಳ ಮರಗಟ್ಟುವಿಕೆ ಕೂಡ ಮಧುಮೇಹ ಪೂರ್ವದ ಲಕ್ಷಣವಾಗಿದೆ. ಈ ಕಾರಣದಿಂದಾಗಿ, ದೇಹದಲ್ಲಿನ ಸಕ್ಕರೆಯ ಹೆಚ್ಚಳವು ಶೀಘ್ರದಲ್ಲೇ ಮಧುಮೇಹವಾಗಬಹುದು ಎಂದು ದೇಹವು ಸೂಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಪಾದಗಳ ಮರಗಟ್ಟುವಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಂತರ ನಿಮ್ಮ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿ, ಅದು ಹೆಚ್ಚಾಗಿದ್ದರೆ ನಂತರ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ನೆನೆಸಿದ ಒಣದ್ರಾಕ್ಷಿಯ ಸೇವನೆಯಿಂದಾಗುವ ಅದ್ಭುತ ಪ್ರಯೋಜನಗಳು

ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ:

ಅನೇಕ ಜನರಲ್ಲಿ ಮಧುಮೇಹ ಪೂರ್ವ ಹಂತದಲ್ಲಿ ದೇಹದ ತೂಕವೂ ಹೆಚ್ಚಾಗತೊಡಗುತ್ತದೆ ಎನ್ನುತ್ತಾರೆ ಡಾ.ಕಿಶೋರ್. ಇದು ಅನೇಕ ಇತರ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ಮಧುಮೇಹ ಪೂರ್ವ ಹಂತದಲ್ಲಿ ಕೆಲವೊಂದು ಕಾಳಜಿ ವಹಿಸಿದರೆ ಮಧುಮೇಹದಿಂದ ದೂರವಿರಬಹುದು ಎಂದು ಡಾ.ಜುಗಲ್ ಕಿಶೋರ್ ವಿವರಿಸುತ್ತಾರೆ. ಇದಕ್ಕಾಗಿ, ನಿಮ್ಮ ಆಹಾರಕ್ರಮಕ್ಕೆ ಗಮನ ಕೊಡುವುದು ಮತ್ತು ಜೀವನಶೈಲಿಯನ್ನು ಸರಿಪಡಿಸುವುದು ಅತ್ಯಂತ ಮುಖ್ಯವಾಗಿದೆ. ನಿಮ್ಮ ಆಹಾರದಲ್ಲಿ ಫೈಬರ್ ಮತ್ತು ಪ್ರೋಟೀನ್ ಅನ್ನು ಸೇರಿಸಿ. ಹೆಚ್ಚಿನ ಕೊಬ್ಬಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಫಿಟ್ ಆಗಿರಲು ಪ್ರತಿದಿನ ವ್ಯಾಯಾಮ ಮಾಡಿ. ಇದಕ್ಕಾಗಿ ನೀವು ಲಘು ವ್ಯಾಯಾಮವನ್ನು ಮಾಡಬಹುದು ಮತ್ತು ಪ್ರತಿದಿನ 15 ನಿಮಿಷಗಳ ಕಾಲ ನಡೆಯಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: