AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲೋವೆರಾ ಕ್ಯಾನ್ಸರ್​​​​ಗೆ ಕಾರಣವಾಗಬಹುದೇ? ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?

ಅಲೋವೆರಾ ಎಲೆಯು ಅಲೋಯಿನ್ ಅಂಶವನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಇದರ ಸಂಯುಕ್ತವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು ಎಂದು ಅಧ್ಯಯನಗಳು ಸೂಚಿಸಿವೆ.

ಅಲೋವೆರಾ ಕ್ಯಾನ್ಸರ್​​​​ಗೆ ಕಾರಣವಾಗಬಹುದೇ? ವಿಶ್ವ ಆರೋಗ್ಯ ಸಂಸ್ಥೆ  ಹೇಳುವುದೇನು?
Follow us
ಅಕ್ಷತಾ ವರ್ಕಾಡಿ
|

Updated on: Jul 20, 2023 | 11:31 AM

ಯುಕೆ ಕ್ಯಾನ್ಸರ್ ರಿಸರ್ಚ್​ನ ಅಧ್ಯಯನಯೊಂದರ ಪ್ರಕಾರ ಅಲೋವೆರಾ ಎಲೆಗಳ ಸಾರವು ಮಾನವರಲ್ಲಿ ಕ್ಯಾನ್ಸರ್ ಉಂಟುಮಾಡಬಹುದು ಎಂದು ಬಹಿರಂಗ ಪಡಿಸಿದೆ. ಸಾಮಾನ್ಯವಾಗಿ ಅಲೋವೆರಾವನ್ನು ಆರೋಗ್ಯಕರ ಮತ್ತು ಮೊಡವೆ ಮುಕ್ತ ಚರ್ಮಕ್ಕಾಗಿ ಬಳಸಲು ತಜ್ಞರು ಸಲಹೆ ನೀಡುತ್ತಾರೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಟಗೊಳಿಸಿರುವ ವರದಿಯೊಂದರ ಪ್ರಕಾರ ಅನೇಕ ತಂಪು ಪಾನೀಯಗಳಲ್ಲಿ ಕಂಡುಬರುವ ಆಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಕ ಕ್ಯಾನ್ಸರ್ ಕಾರಕ ಎಂದು ಘೋಷಿಸಿದೆ. ಅಲೋವೆರಾ ಸಸ್ಯದ ಸಾರಗಳು ಆಸ್ಪರ್ಟೇಮ್​​​​​​ನ ಒಂದೇ ವರ್ಗವಾಗಿದೆ.

ಅಲೋವೆರಾ ಪ್ರಯೋಜನಗಳು:

ಶತಮಾನಗಳಿಂದಲೂ, ಅಲೋವೆರಾವನ್ನು ಅದರ ಔಷಧೀಯ ಗುಣಲಕ್ಷಣದಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಚರ್ಮದ ಆರೋಗ್ಯದ ಹೊರತಾಗಿ, ಬಲವಾದ ರೋಗನಿರೋಧಕ ಶಕ್ತಿ, ಉತ್ತಮ ಚಯಾಪಚಯ ಮತ್ತು ಜೀರ್ಣಕಾರಿ ಆರೋಗ್ಯಕ್ಕೆ ಇದು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಇಡೀ ದಿನ ನಿದ್ದೆ ಮಾಡಬೇಕು ಅನಿಸುತ್ತಿದೆಯೇ? ಈ ಮಳೆಗಾಲದಲ್ಲಿ ನೀವು ಸೇವಿಸುತ್ತಿರುವ ಚಹಾ ಅಥವಾ ಕಾಫಿ ಇದಕ್ಕೆ ಕಾರಣವಾಗಿರಬಹುದು!

ಅಲೋವೆರಾ ಎಲೆಯ ಸಾರವು ಕ್ಯಾನ್ಸರ್ ಕಾರಕ ಹೇಗೆ?

ಅಲೋವೆರಾ  ಎಲೆಯು ಅಲೋಯಿನ್ ಅಂಶವನ್ನು ಹೊಂದಿರುತ್ತದೆ. ಇದು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಸಂಯುಕ್ತವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು ಎಂದು ಅಧ್ಯಯನಗಳು ಸೂಚಿಸಿವೆ.

ಮತ್ತಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: