Bone Cancer: ಮೂಳೆ ಕ್ಯಾನ್ಸರ್​​​ನ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ

|

Updated on: Jul 18, 2023 | 5:07 PM

ಯಾವುದೇ ದೈಹಿಕ ಚಟುವಟಿಕೆ ಮತ್ತು ಆಯಾಸದ ಹೊರತಾಗಿಯೂ ನಿಮ್ಮಲ್ಲಿ ಹಠಾತ್​​ ತೂಕ ನಷ್ಟದ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಮತ್ತು ವೈದ್ಯಕೀಯ ಸಹಾಯವನ್ನು ಪಡೆಯಬೇಕು.

Bone Cancer: ಮೂಳೆ ಕ್ಯಾನ್ಸರ್​​​ನ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ
ಮೂಳೆ ಕ್ಯಾನ್ಸರ್
Image Credit source: Freepik
Follow us on

ಸಾರ್ಕೋಮಾ ದೇಹದ ಮೂಳೆ ಅಥವಾ ಮೃದು ಅಂಗಾಂಶಗಳಲ್ಲಿ ಪ್ರಾರಂಭವಾಗುವ ಅಪರೂಪದ ಕ್ಯಾನ್ಸರ್. ಈ ರೋಗವು ಜಾಗತಿಕವಾಗಿ ಮತ್ತು ಭಾರತದಲ್ಲಿ ಅಪರೂಪವಾಗಿದ್ದು, ವಯಸ್ಕರಿಗಿಂತ ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೆಚ್ಚು ಈ ರೋಗ ಲಕ್ಷಣಗಳು ಕಂಡುಬರುತ್ತದೆ. ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಹಿರಿಯ ನಿರ್ದೇಶಕ ಡಾ. ಅಂಕುರ್ ಬಹ್ಲ್ ಅವರ ಪ್ರಕಾರ “ಮೂಳೆ ಕ್ಯಾನ್ಸರ್ ಸಾಮಾನ್ಯವಾಗಿ ಮೂಳೆಗಳು ಮತ್ತು ಕಾರ್ಟಿಲೆಜ್‌ಗಳಲ್ಲಿನ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಾರಂಭದಲ್ಲಿ ಸಾಮಾನ್ಯವಾಗಿ ಗೆಡ್ಡೆಗಳ ರೀತಿಯಲ್ಲಿ ಬೆಳೆದು ಮೂಳೆಗಳಿಗೆ ಹರಡುತ್ತದೆ. ಹೆಚ್ಚಿನ ಸಮಯ, ಮೂಳೆ ಕ್ಯಾನ್ಸರ್ ಉದ್ದವಾದ ಮೂಳೆಗಳಿಂದ ಪ್ರಾರಂಭವಾಗುತ್ತದೆ. ವಿಶೇಷವಾಗಿ ಕಾಲಿನ ಮೂಳೆಗಳು ಮತ್ತು ಕೆಲವೊಮ್ಮೆ ತೋಳಿನ ಮೂಳೆಗಳು. ಸಾಮಾನ್ಯವಾಗಿ, ಸಾರ್ಕೋಮಾ ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಕಂಡುಬರುತ್ತದೆ” ಎಂದು ಎಚ್ಚರಿಸಿದ್ದಾರೆ.

ಮೂಳೆ ಕ್ಯಾನ್ಸರ್​​​ನ ಆರಂಭಿಕ ಲಕ್ಷಣಗಳು:

ಮೂಳೆ ನೋವು ಮತ್ತು ಮೃದುತ್ವ:

ಮೂಳೆ ಕ್ಯಾನ್ಸರ್‌ಗಳ ಆರಂಭಿಕ ಲಕ್ಷಣಗಳೆಂದರೆ ಗೆಡ್ಡೆ ಇರುವ ಸ್ಥಳದಲ್ಲಿ ನೋವು ಮತ್ತು ಊತ. ನೋವು ಮೊದಲಿಗೆ ಬರಬಹುದು ಮತ್ತು ಹೋಗಬಹುದು. ಕೆಲವೊಮ್ಮೆ, ನೋವು ಚಲನೆಯೊಂದಿಗೆ ಉಲ್ಬಣಗೊಳ್ಳಬಹುದು ಮತ್ತು ಹತ್ತಿರದ ಅಂಗಾಂಶಗಳಲ್ಲಿ ಊತವನ್ನು ಉಂಟುಮಾಡಬಹುದು.

ಇದನ್ನೂ ಓದಿ: ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುವ ಆರ್ಟ್ ಥೆರಪಿ

ಊತ ಮತ್ತು ಬಿಗಿತ:

ಡಾ. ಬಹ್ಲ್ ಅವರ ಪ್ರಕಾರ, “ಒಂದು ಗಡ್ಡೆಯು ಕೀಲುಗಳ ಬಳಿ ಸಂಭವಿಸಿದರೆ, ಕೀಲುಗಳಲ್ಲಿ ಮೃದುತ್ವ ಅಥವಾ ಬಿಗಿತಕ್ಕೆ ಊತಕ್ಕೆ ಕಾರಣವಾಗಬಹುದು. ಕುಂಟುತ್ತಾ ಸಾಗುವುದು, ಸೀಮಿತ ಚಲನೆ, ಕಾಲು ಎತ್ತುವಾಗ ಹೆಚ್ಚಿದ ನೋವು ಮೂಳೆ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.

ಹಠಾತ್​​​ ತೂಕ ನಷ್ಟ ಮತ್ತು ಆಯಾಸ:

ಯಾವುದೇ ದೈಹಿಕ ಚಟುವಟಿಕೆ ಮತ್ತು ಆಯಾಸದ ಹೊರತಾಗಿಯೂ ನಿಮ್ಮಲ್ಲಿ ಹಠಾತ್​​ ತೂಕ ನಷ್ಟದ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಮತ್ತು ವೈದ್ಯಕೀಯ ಸಹಾಯವನ್ನು ಪಡೆಯಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: