Bone Cancer: ಮೂಳೆಗಳ ಕ್ಯಾನ್ಸರ್​ನ ಲಕ್ಷಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

ಮೂಳೆಯ ಕ್ಯಾನ್ಸರ್​ ನಿಮ್ಮ ದೇಹದಲ್ಲಿರುವ ಮೂಳೆಗಳನ್ನು ದುರ್ಬಲಗೊಳಿಸುತ್ತವೆ. ಹೀಗಾಗಿ ಆಗಾಗ ಮುರಿತ ಕಾಣಿಸಿಕೊಳ್ಳುತ್ತದೆ. ಜತೆಗೆ ವಿಪರೀತ ನೋವು ಕೂಡ ಉಂಟಾಗುತ್ತದೆ

Bone Cancer: ಮೂಳೆಗಳ ಕ್ಯಾನ್ಸರ್​ನ ಲಕ್ಷಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Feb 10, 2022 | 11:10 AM

ಮೂಳೆ, ಮಾಂಸಗಳ ಭಾಗವಾಗಿರುವ ನಮ್ಮ ದೇಹವು ಆಗಾಗ ಹಲವು ರೋಗಗಳಿಗೆ ತುತ್ತಾಗುತ್ತವೆ. ಕೆಲವು ದೀರ್ಘಕಾಲದ ಕಾಯಿಲೆಗಳಾದರೆ ಇನ್ನು ಕೆಲವು ಬೇಗನೆ ಗುಣಮುಖವಾಗುವ ಕಾಯಿಲೆಗಳು. ಇತ್ತೀಚಿನ ದಿನಗಳಲ್ಲಿ ಅತೀ ವೇಗವಾಗಿ ಹರಡುತ್ತಿರುವ ದೀರ್ಘಕಾಲದ ಕಾಯಿಲೆಯಲ್ಲಿ ಕ್ಯಾನ್ಸರ್ (Cancer)​ ಕೂಡ ಒಂದು. ಕ್ಯಾನ್ಸರ್​ಗಳಲ್ಲಿ ಹಲವು ವಿಧ. ಮೂಳೆ ಕ್ಯಾನ್ಸರ್​, ಸ್ತನ ಕ್ಯಾನ್ಸರ್​, ಶ್ವಾಸಕೋಶದ ಕ್ಯಾನ್ಸರ್, ಅನ್ನ ನಾಳದ ಕ್ಯಾನ್ಸರ್​, ಬ್ಲಡ್​ ಕ್ಯಾನ್ಸರ್​ ಇತ್ಯಾದಿ. ಬದಲಾದ ಜೀವನ ಶೈಲಿ, ಒತ್ತಡ, ಅಸಮಂಜಸ ಆಹಾರ ಪದ್ಧತಿಗಳಿಂದ ದೇಹಕ್ಕೆ ಕ್ಯಾನ್ಸರ್​ ತಗುಲುತ್ತದೆ. ಇದು ಒಮ್ಮೆ ಬಂದ ಮೇಲೆ ಶಾಶ್ವತ ಪರಿಹಾರವಿಲ್ಲ. ಆದರೆ ಅದನ್ನು ದೈನಂದಿನ ಅಭ್ಯಾಸಗಳಿಂದ ನಿಯಂತ್ರಿಸಬಹುದಾಗಿದೆ. ಕ್ಯಾನ್ಸರ್​ ಎಂದರೆ ಎಲ್ಲವೂ ಅಪಾಯಕಾರಿಯೇ, ಅವುಗಳಲ್ಲಿ ಒಂದು ಮೂಳೆಗಳ ಕ್ಯಾನ್ಸರ್ (Bone Cancer)​. ಮೂಳೆಗಳ ಕ್ಯಾನ್ಸರ್​ನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಸಂಧಿವಾತ, ಆಸ್ಟಿಯೊಪೊರೋಸಿಸ್, ಮೂಳೆಯ ಪ್ಯಾಗೆಟ್ಸ್ ಕಾಯಿಲೆ, ಸ್ಕೋಲಿಯೋಸಿಸ್, ಗೌಟ್.

ನಾರಿನ ಅಂಗಾಂಶ, ಕಾರ್ಟಿಲೇಜ್​ ಮತ್ತು ಕ್ಯಾಲ್ಸಿಯಂನಿಂದ ಮೂಳೆಗಳು ರಚನೆಯಾಗುತ್ತವೆ. ಈ ಮೂಳೆಗಳಿಗೆ ಕ್ಯಾನ್ಸರ್​ ಕೋಶಗಳು ಹರಡಿ ಮೂಳೆಗಳ ಕ್ಯಾನ್ಸರ್​​ ಕಾಯಿಲೆಗೆ ಕಾರಣವಾಗುತ್ತದೆ. ಒಮ್ಮೆ ಮೂಳೆಗಳ ಕ್ಯಾನ್ಸರ್​ ಬಂದ ಮೇಲೆ ಮೂಳೆಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇದರಿಂದ ಮೂಳೆಗಳ ಮುರಿತ ಅಥವಾ ಮೂಳೆಗಳಿಗೆ ಹಾನಿಯಾಗಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಆರಂಭದ ಹಂತಗಳಲ್ಲಿ ಇದು ಅಷ್ಟಾಗಿ ಗೊತ್ತಾಗುವುದಿಲ್ಲ. ಹೀಗಾಗಿ ಮೂಳೆಗಳಲ್ಲಿ ನೋವು ಕಾಣಿಸಿಕೊಂಡು  ಕ್ರಮೇಣ ಹೆಚ್ಚಾಗುತ್ತದೆ. ಹೀಗೆ ನೋವು ತೀವ್ರವಾದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಹಾಗಾದರೆ ಮೂಳೆಗಳ ಕ್ಯಾನ್ಸರ್​ನ ಲಕ್ಷಣಗಳೇನು? ಇಲ್ಲಿದೆ ನೋಡಿ ಮಾಹಿತಿ

ಆಗಾಗ ಮುರಿತ ಕಾಣಿಸಿಕೊಳ್ಳವುದು: ಮೂಳೆಯ ಕ್ಯಾನ್ಸರ್​ ನಿಮ್ಮ ದೇಹದಲ್ಲಿರುವ ಮೂಳೆಗಳನ್ನು ದುರ್ಬಲಗೊಳಿಸುತ್ತವೆ. ಹೀಗಾಗಿ ಆಗಾಗ ಮುರಿತ ಕಾಣಿಸಿಕೊಳ್ಳುತ್ತದೆ. ಜತೆಗೆ ವಿಪರೀತ ನೋವು ಕೂಡ ಉಂಟಾಗುತ್ತದೆ. ಇದರಿಂದ ನಿಮಗೆ ಮೂಳೆಯ ಕ್ಯಾನ್ಸರ್​ನ ಲಕ್ಷಣ ಎಂದು ಗೊತ್ತಾಗುತ್ತದೆ.

ನಿರಂತರ ನೋವು: ನಿಮ್ಮ  ಮೊಣಕೈ, ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಸರಿಹೋಗುತ್ತದೆ. ಆದರೆ ಮೂಳೆಯ ಕ್ಯಾನ್ಸರ್​ ಆಗಿದ್ದರೆ ಮೊಣಕೈ ಸೇರಿದಂತೆ ದೇಹದ ಗಂಟುಗಳಲ್ಲಿ ವಿಪರೀತ ಮತ್ತು ನಿರಂತರ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತಾಗಿದೆ.

ಮೂಳೆಗಳಲ್ಲಿ ಊತ: ದೇಹದ ವಿವಿಧ ಭಾಗಗಳಲ್ಲಿ ಆಗಾಗ ಊತ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಗಾಯಗಳಾಗಿದ್ದರೆ ಮಾತ್ರ ಊತ ಕಂಡುಬರುತ್ತದೆ. ಮೂಳೆಗಳ ಕ್ಯಾನ್ಸರ್​ನ ಲಕ್ಷಣವಾಗಿದ್ದರೆ ದೇಹದಲ್ಲಿ ಅನಗತ್ಯ ಊತಗಳು, ಗಡ್ಡೆಯಂತಹ ರಚನೆಗಳು ಮೂಡುತ್ತವೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಮರಗಟ್ಟುವಿಕೆ: ಕೆಲವೊಮ್ಮೆ ನಿಶ್ಯಕ್ತಿಯಿಂದಲೂ ದೇಹದ ಭಾಗಗಳಲ್ಲಿ ಮರಗಟ್ಟುವಿಕೆ ಕಾಣಿಸಿಕೊಳ್ಳುತ್ತದೆ. ಇದು ಅತಿಯಾದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಏಕೆಂದರೆ ಈ ರೀತಿ ದೇಹದ ವಿವಿಧ ಭಾಗಗಳಲ್ಲಿ ಆಗಾಗ ಮರಗಟ್ಟುವಿಕೆ ಕಾಣಿಸಿಕೊಳ್ಳುವುದೂ ಕೂಡ ಮೂಳೆಗಳ ಕ್ಯಾನ್ಸರ್​ನ ಒಂದು ಲಕ್ಷಣವಾಗಿದೆ. ಹೀಗಾಗಿ ಆರೊಗ್ಯ, ದೈನಂದಿನ ಚಲನವಲದಲ್ಲಿ ಸ್ವಲ್ಪ ಬದಲಾವಣೆಯಾಗುತ್ತಿದ್ದರೂ ಹೆಚ್ಚು ಗಮನಹರಿಸಿ.

ಬಿಗಿತದ ಅನುಭವ: ಮೂಳೆಗಳಲ್ಲಿ ಆಗಾಗ ಬಿಗಿದ ಅನುಭವವಾಗುತ್ತದೆ. ಅಂದರೆ ಸಂಧಿಗಳಲ್ಲಿ ನೋವು ಕಾಣಿಸಿಕೊಂಡು ದೇಹದ ಭಾಗಗಳನ್ನು ಅಲುಗಾಡಿಸಲೂ ಕಷ್ಟ ಎನ್ನಿಸುವ ಸ್ಥಿತಿ ಎದುರಾಗುತ್ತದೆ. ಈ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸಿವುದು ಒಳಿತಲ್ಲ. ಹೀಗಾಗಿ ಅಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲೇಬೇಕು.

ಇದನ್ನೂ ಓದಿ:

Air Pollution ವಾಯುಮಾಲಿನ್ಯದಿಂದ ಆರೋಗ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ

Published On - 11:10 am, Thu, 10 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ