ಆಹಾರ ಆಚಾರ ವಿಚಾರ: ಕೆಲ ಪ್ರಾಚೀನ ಆರೋಗ್ಯ ಸಲಹೆಗಳ ಬಗ್ಗೆ ಆಲೋಚಿಸೋಣ, ಆಚರಿಸೋಣ

ಕೆಲ ಪ್ರಾಚೀನ ಆರೋಗ್ಯ ಸಲಹೆಗಳ ಬಗ್ಗೆ (health tips) ಆಲೋಚಿಸುವುದಾದರೆ ಸಂಸ್ಕೃತದಲ್ಲಿ 14 ಉಲ್ಲೇಖಗಳು ಇವೆ. ಒಂದೆರಡು ಉದಾಹರಣೆ ನೋಡುವುದಾದರೆ 1. ನ ಸ್ನಾನಮ್ ಆಚರೇತ್ ಭುಕ್ತ್ವಾ ಅಂದರೆ -ಆಹಾರದ ನಂತರ ಎಂದಿಗೂ ಸ್ನಾನ ಮಾಡಬೇಡಿ. 2. ಅತಿ ಸರ್ವತ್ರ ವರ್ಜಯೇತ್ ಅಂದರೆ -ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿಯೇ ಇದ್ದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ ಅದು ದೇಹಕ್ಕೆ ಹಿತವಾಗಿರುತ್ತದೆ.

ಆಹಾರ ಆಚಾರ ವಿಚಾರ: ಕೆಲ ಪ್ರಾಚೀನ ಆರೋಗ್ಯ ಸಲಹೆಗಳ ಬಗ್ಗೆ ಆಲೋಚಿಸೋಣ, ಆಚರಿಸೋಣ
ಆಹಾರ ಆಚಾರ ವಿಚಾರ: ಕೆಲ ಪ್ರಾಚೀನ ಆರೋಗ್ಯ ಸಲಹೆಗಳ ಬಗ್ಗೆ ಆಲೋಚಿಸೋಣ, ಆಚರಿಸೋಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 10, 2022 | 8:43 AM

ಕೆಲ ಪ್ರಾಚೀನ ಆರೋಗ್ಯ ಸಲಹೆಗಳ ಬಗ್ಗೆ (health tips) ಆಲೋಚಿಸುವುದಾದರೆ ಸಂಸ್ಕೃತದಲ್ಲಿ 14 ಉಲ್ಲೇಖಗಳು ಇವೆ. ಒಂದೆರಡು ಉದಾಹರಣೆ ನೋಡುವುದಾದರೆ 1. ನ ಸ್ನಾನಮ್ ಆಚರೇತ್ ಭುಕ್ತ್ವಾ ಅಂದರೆ -ಆಹಾರದ ನಂತರ ಎಂದಿಗೂ ಸ್ನಾನ ಮಾಡಬೇಡಿ. 2. ಅತಿ ಸರ್ವತ್ರ ವರ್ಜಯೇತ್ ಅಂದರೆ -ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿಯೇ ಇದ್ದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ ಅದು ದೇಹಕ್ಕೆ ಹಿತವಾಗಿರುತ್ತದೆ. 3. ನಾಸ್ತಿಮೂಲಂ ಅನೌಷಧಂ -ಅಂದರೆ ಯಾವುದೇ ಔಷಧೀಯ ಪ್ರಯೋಜನವಿಲ್ಲದ ಯಾವ ತರಕಾರಿಯೂ ಇಲ್ಲ. ಬನ್ನೀ ಮತ್ತೊಂದಿಷ್ಟು ಆಹಾರ ಆಚಾರ ವಿಚಾರಗಳನ್ನು ತಿಳಿಯೋಣ (overall well being of body, mind and soul).

1 ಅಜೀರಣೀ ಭೋಜನಂ ವಿಷಂ: ಈ ಹಿಂದೆ ತೆಗೆದುಕೊಂಡ ಊಟವು ಜೀರ್ಣವಾಗದಿದ್ದರೆ ಮತ್ತೆ ಊಟ ಮಾಡುವುದು ವಿಷವನ್ನು ತೆಗೆದುಕೊಳ್ಳುವುದಕ್ಕೆ ಸಮಾನವಾಗಿರುತ್ತದೆ. ಹಸಿವು, ಹಿಂದಿನ ಆಹಾರ ಜೀರ್ಣವಾಗುವ ಒಂದು ಸಂಕೇತ.

2 ಅರ್ಧೋಗಹರಿ ನಿದ್ರಾ: ಸರಿಯಾದ ನಿದ್ರೆ, ಅರ್ಧದಷ್ಟು ರೋಗಗಳನ್ನು ಗುಣಪಡಿಸುತ್ತದೆ.

3. ಮುದ್ಗಧಾಲಿ ಗಾಧವ್ಯಾಲಿ: ಎಲ್ಲಾ ದ್ವಿದಳ ಧಾನ್ಯಗಳಲ್ಲಿ ಹೆಸರು ಬೇಳೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತರ ದ್ವಿದಳ ಧಾನ್ಯಗಳು ಯಾವುದೋ ಒಂದು ಅಡ್ಡ ಪರಿಣಾಮ ಹೊಂದಿರುತ್ತವೆ.

4. ಬಗ್ನಾಸ್ತಿ ಸಂಧಾನಕರೋ ರಸೋನಹ: ಬೆಳ್ಳುಳ್ಳಿ ಮುರಿದ ಮೂಳೆಗಳನ್ನು ಸಹ ಸೇರಿಸುತ್ತದೆ.

5. ಅತಿ ಸರ್ವತ್ರ ವರ್ಜಯೇತ್: ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿದ್ದರೂ, ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ ಅದು ದೇಹಕ್ಕೆ ಹಿತವಾಗಿರುತ್ತದೆ.

6. ನಾಸ್ತಿಮೂಲಂ ಅನೌಷಧಂ: ಯಾವುದೇ ಔಷಧೀಯ ಪ್ರಯೋಜನವಿಲ್ಲದ ಯಾವುದೇ ತರಕಾರಿ ಇಲ್ಲ.

7. ನಾ ವೈದ್ಯಃ ಪ್ರಭುರಾಯುಷ: ಯಾವ ವೈದ್ಯರೂ ನಮ್ಮ ದೀರ್ಘಾಯುಷ್ಯದ ಅಧಿಪತಿ ಅಲ್ಲ. ವೈದ್ಯರಿಗೂ ಮಿತಿಗಳಿವೆ.

8. ಚಿಂತಾ ವ್ಯಾಧಿ ಪ್ರಕಾಶಯ: ಚಿಂತೆ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ.

9. ವ್ಯಾಯಮಾಶ್ಚ ಸನೈಹಿ ಸನೈಹಿ: ಪ್ರತಿ ದಿನ ವ್ಯಾಯಾಮ ಮಾಡಿ. ಆದ್ರೆ ಯಾವುದೇ ವ್ಯಾಯಾಮವನ್ನು ನಿಧಾನವಾಗಿ ಮಾಡಿ. ವೇಗದ ವ್ಯಾಯಾಮ ದೇಹ ಮತ್ತು ಮನಸ್ಸಿಗೆ ಒಳ್ಳೆಯದಲ್ಲ.

10. ಅಜಾವತ್ ಚರ್ವಣಂ ಕುರ್ಯಾತ್: ನಿಮ್ಮ ಆಹಾರವನ್ನು ಮೇಕೆಯಂತೆ ಅಗಿಯಿರಿ. ಆತುರದಿಂದ ಆಹಾರವನ್ನು ನುಂಗಬೇಡಿ. ಲಾಲಾರಸ ಜೀರ್ಣಕ್ರಿಯೆಯಲ್ಲಿ ಮೊದಲು ಸಹಾಯಕ್ಕೆ ಬರುತ್ತದೆ.

11. ಸ್ನಾನ ನಾಮ ಮನಃಪ್ರಸಾದನಕಾರಂ ದುಃಸ್ವಪ್ನ ವಿಧವಾಸನಮ್: ಸ್ನಾನವು ಖಿನ್ನತೆಯನ್ನು ತೆಗೆದುಹಾಕುತ್ತದೆ. ಇದು ಕೆಟ್ಟ ಕನಸುಗಳನ್ನು ದೂರ ಮಾಡುತ್ತದೆ.

12. ನ ಸ್ನಾನಮ್ ಆಚರೇತ್ ಭುಕ್ತ್ವಾ: ಆಹಾರದ ನಂತರ ಎಂದಿಗೂ ಸ್ನಾನ ಮಾಡಬೇಡಿ.

13. ನಾಸ್ತಿ ಮೇಘಸಮಂ ತೋಯಮ್: ಶುದ್ಧತೆಯಲ್ಲಿ ಮಳೆನೀರಿಗೆ ಯಾವುದೂ ಸಮವಿಲ್ಲ.

14 ಅಜೀರ್ನೆ ಭೇಷಜಂ ವಾರಿ: ಅಜೀರ್ಣವನ್ನು ಸರಳ ನೀರು ಕುಡಿಯುವ ಮೂಲಕ ಪರಿಹರಿಸಬಹುದು. (ಸಂಗ್ರಹ- ನಿತ್ಯಸತ್ಯ)

Also Read: BJP Office Attacked: ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ‘ಕಮಲಾಲಯಂ’ ಮೇಲೆ ಪೆಟ್ರೋಲ್ ಬಾಂಬ್​ ದಾಳಿ​ Also Read: Human Age: ಅರವತ್ತಕ್ಕೆ ಅರಳು ಮರಳು ಎನ್ನುವುದು ಏಕೆ? ಏನಿದು 60ರ ಲೆಕ್ಕಾಚಾರ?

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ