Mental Health: ಪ್ರತಿ 100 ಜನರಲ್ಲಿ 88 ಜನರು ಮಾನಸಿಕ ಅಸ್ವಸ್ಥತೆಗೆ ಬಲಿಯಾಗುತ್ತಿದ್ದಾರೆ; ಅಧ್ಯಯನ

|

Updated on: Oct 26, 2024 | 8:06 PM

ದೇಶದಲ್ಲಿ ಶೇ. 88 ರಷ್ಟು ಜನರು ಆತಂಕದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ತೋರಿಸಿವೆ. ಆದ್ದರಿಂದ ನಿಮ್ಮ ಸುತ್ತಮುತ್ತಲೂ ಯಾರಾದರೂ ಪ್ಯಾನಿಕ್ ಅಟ್ಯಾಕ್​ನಿಂದ ಬಳಲುತ್ತಿದ್ದರೆ ಅವರಿಗೆ ಈ ರೀತಿ ಮಾಡಿ ಎಂದು ಮನೋವೈದ್ಯರು ಸಲಹೆ ನೀಡುತ್ತಾರೆ. 

Mental Health: ಪ್ರತಿ 100 ಜನರಲ್ಲಿ 88 ಜನರು ಮಾನಸಿಕ ಅಸ್ವಸ್ಥತೆಗೆ ಬಲಿಯಾಗುತ್ತಿದ್ದಾರೆ; ಅಧ್ಯಯನ
Mental Health
Follow us on

ಕೆಲಸದ ಒತ್ತಡ ಅಥವಾ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಅತಿಯಾದ ಚಿಂತೆ ಮತ್ತು ಅತಿಯಾಗಿ ಯೋಚಿಸುವುದು ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಅಸ್ವಸ್ಥರನ್ನಾಗಿ ಮಾಡಬಹುದು. ಇದರಿಂದ ಆತಂಕದಂತಹ ಸಮಸ್ಯೆಗಳೂ ಬರಬಹುದು. ಇದು ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಾಗಿದ್ದು, ಇದು ನಿದ್ರೆಯ ಮೇಲೆ ಪರಿಣಾಮ ಬೀರಬಹುದು, ಸ್ನಾಯುಗಳ ಒತ್ತಡ, ಜೀರ್ಣಕಾರಿ ಸಮಸ್ಯೆಗಳು, ಕಿರಿಕಿರಿ, ಏಕಾಗ್ರತೆಗೆ ತೊಂದರೆ ಮತ್ತು ಪ್ಯಾನಿಕ್ ಅಟ್ಯಾಕ್ ಅನ್ನು ಹೆಚ್ಚಿಸುತ್ತದೆ.

ದೇಶದಲ್ಲಿ ಸುಮಾರು 88% ಜನರು ಕೆಲವು ರೀತಿಯ ಆತಂಕದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಅಂದರೆ, ಪ್ರತಿ 100 ಜನರಲ್ಲಿ 88 ಜನರು ಈ ಮಾನಸಿಕ ಅಸ್ವಸ್ಥತೆಗೆ ಬಲಿಯಾಗುತ್ತಾರೆ. ಆದ್ದರಿಂದ ನಿಮ್ಮ ಸುತ್ತಮುತ್ತಲೂ ಯಾರಾದರೂ ಪ್ಯಾನಿಕ್ ಅಟ್ಯಾಕ್​ನಿಂದ ಬಳಲುತ್ತಿದ್ದರೆ ಈ ರೀತಿ ಮಾಡಿ ಎಂದು ಮನೋವೈದ್ಯರು ಸಲಹೆ ನೀಡುತ್ತಾರೆ.

ಪ್ಯಾನಿಕ್ ಅಟ್ಯಾಕ್​​ನಿಂದ ಬಳಲುತ್ತಿದ್ದರೆ ಈ ರೀತಿ ಸಹಾಯ ಮಾಡಿ:

ಸ್ವಲ್ಪ ನೀರು ಕುಡಿಸಿ:

ನೀರು ಕುಡಿಸುವುದರಿಂದ ಅವರಲ್ಲಿ ಸ್ವಲ್ಪ ಮಟ್ಟದ ಭಯ, ಆತಂಕದಿಂದ ಕಡಿಮೆಯಾಗುತ್ತದೆ. ತಣ್ಣೀರು ಕುಡಿಯುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಪ್ರಚೋದಿಸುತ್ತದೆ. ಇದು ವ್ಯಕ್ತಿಯನ್ನು ಶಾಂತಗೊಳಿಸಲು ಸಹಕಾರಿಯಾಗಿದೆ.

ಮುಖ ತೊಳೆಯಿರಿ:

ಪ್ಯಾನಿಕ್ ಅಟ್ಯಾಕ್​​ಗೆ ಒಳಗಾದ ವ್ಯಕ್ತಿಯ ಕೈ ಮತ್ತು ಪಾದಗಳನ್ನು ತಣ್ಣೀರಿನಿಂದ ತೊಳೆಯಿರಿ. ಇದಲ್ಲದೇ ಒಂದು ಟವೆಲ್​​ ಅನ್ನು ಒದ್ದೆ ಮಾಡಿ ಮುಖದ ಮೇಲೆ ಅಥವಾ ಕುತ್ತಿಗೆಗೆ ಹಾಕಿ. ಇದು ಅವರನ್ನು ಭಯದಿಂದ ಸ್ವಲ್ಪ ಶಾಂತಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ವಾಕಿಂಗ್​ ವೇಳೆ ಈ ತಪ್ಪುಗಳನ್ನು ಮಾಡಬೇಡಿ; ಪ್ರಯೋಜನಕ್ಕಿಂತ ಸಮಸ್ಯೆಗಳೇ ಹೆಚ್ಚು

ಅವರಿಂದ ಬಳಿಯೇ ಸ್ಪಲ್ಪ ಹೊತ್ತು ಇರಿ:

ನಿಮ್ಮ ಸುತ್ತಮುತ್ತ ಅಥವಾ ಮನೆಯಲ್ಲಿ ಯಾರಿಗಾದರೂ ಪ್ಯಾನಿಕ್ ಅಟ್ಯಾಕ್ ಆದರೆ ಅವರ ವರ್ತನೆ ಕಂಡು ದೂರ ಹೋಗಬೇಡಿ. ಬದಲಾಗಿ ಆ ವ್ಯಕ್ತಿಯನ್ನು ಆರಾಮದಾಯಕವಾದ ಕುರ್ಚಿ ಅಥವಾ ಸೋಫಾದಲ್ಲಿ ಕುಳ್ಳಿರಿಸಿ, ಸ್ವಲ್ಪ ಹೊತ್ತು ನೀವು ಅವರ ಜೊತೆಗಿದ್ದು ಧೈರ್ಯ ಹೇಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ