ನಮ್ಮ ಮಾನಸಿಕ ಆರೋಗ್ಯದಲ್ಲಿ ನಾವು ಸೇವಿಸುವ ಆಹಾರ ಕೂಡ ಮುಖ್ಯ ಪಾತ್ರ ವಹಿಸುತ್ತವೆ. ನಾವು ತೀರಾ ಒತ್ತಡದಲ್ಲಿದ್ದಾಗ ಅತಿಯಾಗಿ ತಿನ್ನುತ್ತೇವೆ. ಒತ್ತಡ ಮತ್ತು ಆತಂಕದ ಮೇಲೆ ಆಹಾರದ ಪ್ರಭಾವವನ್ನು ತಿಳಿಯುವುದು ಮುಖ್ಯವಾಗಿದೆ. ಒತ್ತಡವನ್ನು (Mental Pressure) ಉಂಟುಮಾಡುವ ಆಹಾರವನ್ನು ತಪ್ಪಿಸಲು ಹಣ್ಣುಗಳು, ನಟ್ಸ್, ಸೀಡ್ಸ್ ಮತ್ತು ಪೋಷಕಾಂಶಭರಿತ ಆಹಾರಗಳನ್ನು ಸೇವಿಸಬಹುದು. ಸಮತೋಲಿತ ಆಹಾರ ನಮ್ಮ ಒಟ್ಟಾರೆ ಮಾನಸಿಕ ಆರೋಗ್ಯಕ್ಕೆ (Mental Health) ಸಹಾಯ ಮಾಡುತ್ತದೆ.
ಈ ಬಗ್ಗೆ ಪೌಷ್ಟಿಕ ತಜ್ಞರಾದ ಗೀತಿಕಾ ಬಜಾಜ್ ಕೆಲವು ಸಲಹೆಗಳನ್ನು ನೀಡಿದ್ದಾರೆ.
– ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬುಗಳು ಹೆಚ್ಚಿರುವ ಆಹಾರವನ್ನು ಮಿತಿಗೊಳಿಸಿ.
– ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಬೆರಿ ಹಣ್ಣುಗಳು ಜೀವಕೋಶದ ಹಾನಿಯನ್ನು ತಡೆಯಲು ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Dates Face Scrub: ಆರೋಗ್ಯಯುತ ಚರ್ಮಕ್ಕೆ ಖರ್ಜೂರವನ್ನು ಫೇಸ್ ಸ್ಕ್ರಬ್ ಆಗಿ ಬಳಸಿ!
– ಸತುವಿನ ಕೊರತೆಯನ್ನು ಎದುರಿಸಲು ಗೋಡಂಬಿ ಸೇವಿಸಿ. ಗೋಡಂಬಿಯು ಶೇ. 14-20ರಷ್ಟು ಸತುವನ್ನು ಒದಗಿಸುತ್ತದೆ. ಇದು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
– ಮೆಗ್ನೀಸಿಯಮ್ ಮೂಲಗಳಾದ ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು ಮತ್ತು ಮೊಟ್ಟೆಗಳು ಮನಸ್ಥಿತಿ ಸುಧಾರಣೆಯನ್ನು ಹೆಚ್ಚಿಸುತ್ತದೆ.
– ಟ್ರಿಪ್ಟೊಫಾನ್ ಹೊಂದಿರುವ ಮೊಟ್ಟೆಗಳು ಸಿರೊಟೋನಿನ್ ಉತ್ಪಾದನೆಗೆ ಕೊಡುಗೆ ನೀಡುತ್ತವೆ. ಇದು ಮನಸ್ಥಿತಿಯನ್ನು ನಿಯಂತ್ರಿಸುತ್ತವೆ.
– ಆವಕಾಡೊಗಳು ಆರೋಗ್ಯಕರ ಕೊಬ್ಬುಗಳು, ಫೈಬರ್, ವಿಟಮಿನ್ ಸಿ ಮತ್ತು ಬಿ 6, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
– ಫೋಲೇಟ್ ಭರಿತ ಹಸಿರು ಸೊಪ್ಪುಗಳು ನರಪ್ರೇಕ್ಷಕ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಆತಂಕವನ್ನು ಕಡಿಮೆ ಮಾಡುತ್ತವೆ.
ಇದನ್ನೂ ಓದಿ: ಅತಿಯಾದ ಸಕ್ಕರೆ ಸೇವನೆಯಿಂದ ನಿಮ್ಮ ಮಾನಸಿಕ ಆರೋಗ್ಯಕ್ಕೂ ತೊಂದರೆ
– ವಿಟಮಿನ್ ಡಿ ಸಮೃದ್ಧವಾಗಿರುವ ಸಾಲ್ಮನ್ ಮತ್ತು ಸಾರ್ಡೀನ್ಗಳು ಆತಂಕದಂತಹ ಮನಸ್ಥಿತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ.
– ಟ್ರಿಪ್ಟೊಫಾನ್, ಮೆಲಟೋನಿನ್ ಮತ್ತು ವಿಟಮಿನ್ ಬಿಗಳನ್ನು ಒಳಗೊಂಡಂತೆ ಹಾಲಿನ ಪೋಷಕಾಂಶಗಳು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯನ್ನು ಉತ್ತೇಜಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ