Mental Stress: ಮಾನಸಿಕ ಒತ್ತಡವೂ ಮಧುಮೇಹವನ್ನು ಹೆಚ್ಚಿಸಬಹುದು!

|

Updated on: Aug 27, 2023 | 7:00 AM

ಇಂದಿನ ಜೀವನ ಶೈಲಿಯಲ್ಲಿ ಒತ್ತಡವು ಒಂದು ಭಾಗವಾಗಿದೆ. ಒತ್ತಡವು ಹೃದಯ ಬಡಿತದೊಂದಿಗೂ ಬೆಸೆದುಕೊಂಡಿದ್ದು, ನಮ್ಮ ಸಿಟ್ಟು,ಭಯ,ಹಾಗೂ ದೈಹಿಕ ಕ್ರಿಯೆಗಳ ಮೇಲೂ ಭಾರಿ ಪರಿಣಾಮ ಬೀರುತ್ತದೆ. ಕೊಲೆಸ್ಟ್ರಾಲ್ ನ ಬಿಡುಗಡೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನೂ ಏರುಪೇರಾಗಿಸುತ್ತದೆ.

Mental Stress: ಮಾನಸಿಕ ಒತ್ತಡವೂ ಮಧುಮೇಹವನ್ನು ಹೆಚ್ಚಿಸಬಹುದು!
Mental stress
Follow us on

ಒತ್ತಡದ ಜಗತ್ತಿನಲ್ಲಿ ಮಧುಮೇಹ ಖಾಯಿಲೆಯು ದಿನೇ ದಿನೇ ಹೆಚ್ಚುತ್ತಿದೆ. ಇದೊಂದು ಗಂಭೀರ ಕಾಯಿಲೆಯಾಗಿದ್ದು, ಬಹು ಜನರಲ್ಲಿ ಇದು ಕಾಣಿಸಿಕೊಳ್ಳುತ್ತಿರುವುದರಿಂದ ಜನರಲ್ಲಿ ನಿರ್ಲಕ್ಷವೂ ಹೆಚ್ಚಾಗುತ್ತಿದೆ. ಈ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಯಾವುದೇ ಅಧಿಕೃತ ಔಷಧಗಳಿಲ್ಲವಾದ್ದರಿಂದ, ಜೀವನ ಶೈಲಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೊಂದೇ ಮಾರ್ಗವಾಗಿದೆ.ಮಧುಮೇಹ ಕೇವಲ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವುದು ಮಾತ್ರವಲ್ಲದೆ ದೇಹದಲ್ಲಿ ಇತರ ಬದಲಾವಣೆಗೆ, ಹೃದ್ರೋಗದಂತಹ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇತ್ತೀಚಿಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಮಧುಮೇಹವು ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಪರಿಣಾಮ ಬೀರುತ್ತದೆ

ಮಾನಸಿಕ ಒತ್ತಡವು ದೇಹದ ಹಲವು ಕ್ರಿಯೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದ್ದು,ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ನೇರವಾಗಿ ಪರಿಣಾಮ ಬೀರದೇ ಹೋದರು ಪರೋಕ್ಷವಾಗಿ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ.ಮಧುಮೇಹವನ್ನು ನಿಯಂತ್ರಿಸುವುದು ಬಹಳ ಕಠಿಣ ಕೆಲಸವಾದ್ದರಿಂದ ಮಾನಸಿಕ ಆರೋಗ್ಯದ ಮೇಲು ಇದರ ಪರಿಣಾಮ ಉಂಟಾಗಬಹುದು ಎನ್ನಲಾಗಿದೆ.ಈ ಕುರಿತು ಫಿಟರ್ಫ್ಲೈನ ಸಹ ಸಂಸ್ಥಾಪಕ ಸಿಇಒ ಡಾ ಅರ್ಬಿಂದರ್ ನ್ಯೂ ಇಂಡಿಯನ್ ಎಕ್ಸಪ್ರೆಸ್ನೊಂದಿಗೆ ಮಾತನಾಡಿದ್ದಾರೆ. ಇಂದಿನ ಜೀವನ ಶೈಲಿಯಲ್ಲಿ ಒತ್ತಡವು ಒಂದು ಭಾಗವಾಗಿದೆ. ಒತ್ತಡವು  ಹೃದಯ ಬಡಿತದೊಂದಿಗೂ ಬೆಸೆದುಕೊಂಡಿದ್ದು,  ಸಿಟ್ಟು,ಭಯ,ಹಾಗೂ ದೈಹಿಕ ಕ್ರಿಯೆಗಳ ಮೇಲೂ ಭಾರಿ ಪರಿಣಾಮ ಬೀರುತ್ತದೆ. ಕೊಲೆಸ್ಟ್ರಾಲ್ ನ ಬಿಡುಗಡೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನೂ ಏರುಪೇರಾಗಿಸುತ್ತದೆ. ಸಕ್ಕರೆ ಖಾಯಿಲೆಯೊಂದಿಗೆ ಮಧುಮೇಹವೂ ಇದ್ದರೆ ಅದನ್ನು ‘ಡಯಾಬಿಟಿಸ್ ಡಿಸ್ಟ್ರೆರ್ಸ್’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಬೂದುಗುಂಬಳಕಾಯಿಯ ರಸದ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ

ಮಧುಮೇಹಿಗಳಲ್ಲಿ ಸುಮಾರು 33 ರಿಂದ 50 ಜನರು ಈ ಖಾಯಿಲೆ ಹೊಂದಿರುತ್ತಾರೆ ಎನ್ನಲಾಗಿದೆ. ಭಾವನಾತ್ಮಕ ಹಾಗೂ ಮಾನಸಿಕ ಸ್ಥಿತಿಯು ಮಧುಮೇಹದ ಏರುಪೇರಿನಲ್ಲಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಿಂದ ಸಾಭೀತಾಗಿದೆ. ಸಕ್ಕರೆ ಖಾಯಿಲೆ ಇರುವವರು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದನ್ನು ಕುರಿತು, ಮಂಬರುವ ಆರೋಗ್ಯದ ಸಮಸ್ಯೆ ಕುರಿತು, ಸ್ವ- ನಿಯಂತ್ರಣದ ಕುರಿತು ಚಿಂತಿತರಾಗಿರುವುದರಿಂದ ಅವರಲ್ಲಿ ಸಾಮಾನ್ಯವಾಗಿ ಮಾನಸಿಕ ಒತ್ತಡವು ಅಧಿಕವಾಗಿರುತ್ತದೆ. ಮಧುಮೇಹಿಗಳಲ್ಲಿ ಒತ್ತಡವೂ ಇದ್ದರೆ ಅವರಿಗೆ ಸಕ್ಕರೆ ಖಾಯಿಲೆಯಿಂದಾಗುವ ಪರಿಣಾಮ 20 ಪಟ್ಟು ಹೆಚ್ಚು ಎನ್ನುತ್ತದೆ ಸಂಶೋಧನೆ.

ಒತ್ತಡ  ನಿಯಂತ್ರಣ ಹೇಗೆ?

ಡಾಕ್ಟರ್, ಸೆಹಗಲ್ ರವರ ಪ್ರಕಾರ ಮಾನಸಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಿಸಬಹುದು ಎನ್ನುತ್ತಾರೆ. ಉತ್ತಮ ನಿದ್ದೆಯಿಂದಾಗಿ ಒತ್ತಡವೂ ಕಡಿಮೆಯಾಗುತ್ತದೆ, ದೇಹದಲ್ಲಿ ಮೆಟಬಾಲಿಸಂ ಪ್ರಮಾಣವು ಹೆಚ್ಚಾಗುವುದರಿಂದ ಗ್ಲೂಕೋಸ್ ಅಂಶವನ್ನೂ ಕಾಯ್ದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಡಾ ಅರ್ಬಿಂದರ್ ನ್ಯೂ ರವರ ಪ್ರಕಾರ ದೈಹಿಕ ಕಾರ್ಯಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ದೇಹದ ಮೇಲೆ ಸಾಕಷ್ಟು ಉತ್ತಮ ಪರಿಣಾಮ ಬೀರುತ್ತದೆ. ನಡಿಗೆ, ಯೋಗ, ಆರೋಗ್ಯಕರವಾದ ಆಹಾರ ಸೇವನೆಯು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಸಹಾಯ ಮಾಡುತ್ತದೆ ಎನ್ನುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: