ಬೂದುಗುಂಬಳಕಾಯಿಯ ರಸದ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ

ಬಿಳಿ ಕುಂಬಳಕಾಯಿ ಅಥವಾ ಬೂದುಗುಂಬಳಕಾಯಿ ಹೆಚ್ಚಿನ ಪೌಷ್ಠಿಕಾಂಶಯುಕ್ತ ಆಹಾರವಾಗಿದೆ ಎಂಬುದು ನಿಮಗೆ ತಿಳಿದಿರಬಹುದು. ಬೂದುಗುಂಬಳಕಾಯಿ ರಸವನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ನೀವು ಕಾಣಬಹುದು. ಇದು ನಿಮ್ಮನ್ನು ಚೆನ್ನಾಗಿ ಹೈಡ್ರೇಟ್ ಆಗಿರಿಸುವುದರಿಂದ ಹಿಡಿದು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುವವರೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೂದುಗುಂಬಳಕಾಯಿಯ ರಸದ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ
ಬೂದುಗುಂಬಳಕಾಯಿಯ ರಸ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Aug 27, 2023 | 10:23 AM

ಬೂದುಗುಂಬಳಕಾಯಿ ಸಸ್ಯವೂ ಕೂಡ ಕಲ್ಲಂಗಡಿಯಂತೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಸಸ್ಯವು ಬೆಚ್ಚಗಿನ, ಆರ್ದ್ರ ಉಷ್ಣವಲಯದ ಹವಾಮಾನದಲ್ಲಿ ಬೆಳೆಯುತ್ತದೆ, ಮತ್ತು ಇದರ ಕೃಷಿಯನ್ನು ಆಗ್ನೇಯ ಏಷ್ಯಾದಂತಹ ದೇಶಗಳಲ್ಲಿ ಮಾಡಲಾಗುತ್ತದೆ, ಇದರಲ್ಲಿ ಜಪಾನ್, ಭಾರತ, ಚೀನಾ, ಮ್ಯಾನ್ಮಾರ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ತೈವಾನ್ ನಂತಹ ದೇಶಗಳು ಸೇರಿವೆ. ಬೂದುಗುಂಬಳಕಾಯಿ ರಸದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿರಬಹುದು. ಆದರೆ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಅದನ್ನು ಬಳಸುವುದರಿಂದ ಏನೇನು ಉಪಯೋಗವಿದೆ? ಇದಕ್ಕೆಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ.

ಆತ್ಮಂತನ್ ವೆಲ್ನೆಸ್ ಸೆಂಟರ್ನ ವೈದ್ಯಕೀಯ ನಿರ್ದೇಶಕ ಮತ್ತು ಸಿಇಒ ಡಾ. ಮನೋಜ್ ಕುಟ್ಟೇರಿ ಮತ್ತು ಮುಂಬೈನ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೋಂದಾಯಿತ ಆಹಾರ ತಜ್ಞ ಮತ್ತು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡಾ. ಉಷಾಕಿರಣ್ ಸಿಸೋಡಿಯಾ ಅವರು ಈ ವಿಷಯದ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದು, ಬೂದುಗುಂಬಳಕಾಯಿ ರಸ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಸವಿಸ್ತಾರವಾಗಿ ತಿಳಿಸಿದ್ದಾರೆ.

ಬೂದುಗುಂಬಳಕಾಯಿ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಯಾವುವು?

ಬಿಳಿ ಕುಂಬಳಕಾಯಿ ಎಂದು ಕರೆಯಲ್ಪಡುವ ಬೂದುಗುಂಬಳಕಾಯಿ ಒಂದು ಜಾತಿಯ ಸೋರೆಕಾಯಿಯಾಗಿದ್ದು, ಇದನ್ನು ಏಷ್ಯಾದ ವಿವಿಧ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಹೆಚ್ಚುವರಿಯಾಗಿ, ಅದರ ಹಲವಾರು ಪ್ರಯೋಜನಗಳಿಂದಾಗಿ, ಬೂದುಗುಂಬಳಕಾಯಿ ರಸವು ಸಂಭಾವ್ಯ ಆರೋಗ್ಯ ಪಾನೀಯವಾಗಿ ಜನಪ್ರಿಯತೆಯನ್ನು ಗಳಿಸಿದೆ. ಬೂದುಗುಂಬಳಕಾಯಿ ರಸವು ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಇದನ್ನು ಬೆಂಬಲಿಸಲು ಹೆಚ್ಚಿನ ಪುರಾವೆಗಳಿಲ್ಲ ಮತ್ತು ಜನರು ಈ ಬಗ್ಗೆ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: ಮಧುಮೇಹಿಗಳು ಕಲ್ಲಂಗಡಿ ಹಣ್ಣು ತಿನ್ನಬೇಕೋ ಬೇಡವೋ? ಇಲ್ಲಿದೆ ಮಾಹಿತಿ

1. ಜಲಸಂಚಯನಕ್ಕೆ ಸಹಾಯ ಮಾಡುತ್ತದೆ: 

“ಬೂದುಗುಂಬಳಕಾಯಿಯಲ್ಲಿ ಶೇಕಡಾ 96 ರಷ್ಟು ನೀರಿನ ಅಂಶವಿದೆ, ಇದು ವಿಶೇಷವಾಗಿ ಬಿಸಿಲಿನಿಂದ ದೇಹ ಹೀಟ್ ಆಗಿದ್ದರೆ ನಿಮ್ಮನ್ನು ತೇವಾಂಶದಿಂದಿರಲು   ಸಹಾಯ ಮಾಡುತ್ತದೆ” ಎಂದು ಡಾ. ಕುಟ್ಟೇರಿ ಹೇಳುತ್ತಾರೆ.

2. ಉರಿಯೂತ ನಿವಾರಕ ಗುಣಗಳು:

ಬೂದುಗುಂಬಳಕಾಯಿಯ ಉರಿಯೂತ ನಿವಾರಕ ಗುಣಗಳು ಉರಿಯೂತಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಉತ್ತಮ ಆಯ್ಕೆಯಾಗಿದೆ.

3. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ :

ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಉತ್ತಮ ಏಜೆಂಟ್ ಆಗಿದೆ ಮತ್ತು ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ ಅನ್ನು ಇತರ ಪ್ರಮುಖ ಅಂಶಗಳಳನ್ನು ಒಳಗೊಂಡ ಪವರ್ ಪ್ಯಾಕ್ ಆಗಿದೆ ಎಂದು ತಜ್ಞರು ತಿಳಿಸಿದ್ದಾರೆ.

4. ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ: 

ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬೂದುಗುಂಬಳಕಾಯಿ ರಸವನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ.

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:47 pm, Fri, 25 August 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ