Miracle Plant: ಕಾಡು ಬಸಳೆಯನ್ನು ಈ ರೀತಿ ಸೇವನೆ ಮಾಡಿದರೆ ಯೋನಿ ಸಮಸ್ಯೆ ನಿವಾರಣೆಯಾಗುತ್ತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 02, 2024 | 2:15 PM

ಕಾಡು ಬಸಳೆ ಎಲೆಗಳು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕಾಡು ಬಸಳೆ ಸಸ್ಯಕ್ಕೆ 150 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿ ಇದ್ದು, ಇದರ ಎಲೆಗಳು ಸ್ವಲ್ಪ ದಪ್ಪ ಮತ್ತು ಹುಳಿಯಾಗಿರುತ್ತವೆ. ಅಲ್ಲದೆ ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಹಿಸ್ಟಮಿನ್ ವಿರೋಧಿ ಮತ್ತು ಅನಾಫಿಲ್ಯಾಕ್ಟಿಕ್ ಗುಣಗಳನ್ನು ಹೊಂದಿದೆ. ಹಾಗಾದರೆ ಇಷ್ಟೆಲ್ಲಾ ವಿಶೇಷತೆಗಳನ್ನು ಒಳಗೊಂಡಿರುವ ಕಾಡು ಬಸಳೆ ಎಲೆಯ ಪ್ರಯೋಜನಗಳೇನು? ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಇದು ಒಳ್ಳೆಯದು? ಇಲ್ಲಿದೆ ಸಂಪೂರ್ಣ ಮಾಹಿತಿ.

Miracle Plant: ಕಾಡು ಬಸಳೆಯನ್ನು ಈ ರೀತಿ ಸೇವನೆ ಮಾಡಿದರೆ ಯೋನಿ ಸಮಸ್ಯೆ ನಿವಾರಣೆಯಾಗುತ್ತೆ
ಸಾಂದರ್ಭಿಕ ಚಿತ್ರ
Follow us on

ರಣಪಾಲ ಅಥವಾ ಕಾಡು ಬಸಳೆ ಅಥವಾ ಪಟಪಟೆ ಎಲೆಯ ಬಗ್ಗೆ ಕೇಳಿದ್ದೀರಾ? ಈ ಎಲೆಗಳು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕಾಡು ಬಸಳೆ ಸಸ್ಯಕ್ಕೆ 150 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿ ಇದ್ದು, ಇದರ ಎಲೆಗಳು ಸ್ವಲ್ಪ ದಪ್ಪ ಮತ್ತು ಹುಳಿಯಾಗಿರುತ್ತವೆ. ಅಲ್ಲದೆ ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಹಿಸ್ಟಮಿನ್ ವಿರೋಧಿ ಮತ್ತು ಅನಾಫಿಲ್ಯಾಕ್ಟಿಕ್ ಗುಣಗಳನ್ನು ಹೊಂದಿದೆ. ಸಾಮಾನ್ಯವಾಗಿ ಈ ಕಾಡು ಬಸಳೆಯನ್ನು (miracle leaf) ಆಫೀಸ್ ಅಥವಾ ಮನೆಗಳಲ್ಲಿ ಅಲಂಕಾರಿಕ ಗಿಡವಾಗಿ ನೆಡುತ್ತಾರೆ. ಹಾಗಾದರೆ ಇಷ್ಟೆಲ್ಲಾ ವಿಶೇಷತೆಗಳನ್ನು ಒಳಗೊಂಡಿರುವ ಕಾಡು ಬಸಳೆ ಎಲೆಯ ಪ್ರಯೋಜನಗಳೇನು? ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಇದು ಒಳ್ಳೆಯದು? ಇಲ್ಲಿದೆ ಸಂಪೂರ್ಣ ಮಾಹಿತಿ.

ಕಾಡು ಬಸಳೆಯ ಎಲೆಗಳನ್ನು ಸೇವನೆ ಮಾಡುವುದಕ್ಕೆ, ಕಷಾಯ ತಯಾರಿಸುವುದಕ್ಕೆ, ಗಾಯಗಳಾದಾಗ ಬ್ಯಾಂಡೇಜ್ ಮಾಡಲು ಹೀಗೆ ಇದರಿಂದ ಅನೇಕ ರೀತಿಯ ಉಪಯೋಗಗಳಿವೆ. ಇದರ ಸೇವನೆ ಮಾಡುವುದರಿಂದ ಹೊಟ್ಟೆಯ ಹುಣ್ಣುಗಳು ಕಡಿಮೆಯಾಗುತ್ತವೆ. ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ತಡೆಯುತ್ತದೆ. ಇಲ್ಲಿದೆ ಈ ಎಲೆಗಳ ಇನ್ನಷ್ಟು ಆರೋಗ್ಯ ಪ್ರಯೋಜನ.

ಮೂತ್ರಪಿಂಡದ ಸಮಸ್ಯೆಗಳನ್ನು ತಡೆಯುತ್ತದೆ: ಕಾಡು ಬಸಳೆಯ ಎಲೆಗಳು ಮೂತ್ರಪಿಂಡದ ಸಮಸ್ಯೆಗಳನ್ನು ತಡೆಯುತ್ತವೆ. ಮೂತ್ರಪಿಂಡದ ಕಲ್ಲು ಇರುವವರಿಗೆ ಕಾಡು ಬಸಳೆ ಎಲೆಗಳು ತುಂಬಾ ಒಳ್ಳೆಯದು. ಈ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಿನ್ನಬೇಕು ಅಥವಾ ನೀವು ಬೆಳಿಗ್ಗೆ 30 ಮಿಲೀ ನೀರಿಗೆ ಈ ಎಲೆಯನ್ನು ಹಾಕಿ ಕುದಿಸಿ ಕಷಾಯ ಮಾಡಿ ಕುಡಿಯಬಹುದು. ಇದು ಮೂತ್ರಪಿಂಡ ಮತ್ತು ಮೂತ್ರಕೋಶದಲ್ಲಿನ ಕಲ್ಲುಗಳನ್ನು ನಿವಾರಣೆ ಮಾಡುತ್ತದೆ ಆ ಮೂಲಕ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.

ಕಾಮಾಲೆ ನಿವಾರಕ: ಕಾಮಾಲೆ ಇರುವವರು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಈ ಎಲೆಯ ರಸವನ್ನು 30 ಮೀಲಿ ತೆಗೆದುಕೊಳ್ಳಬೇಕು. ಇದು ರೋಗವನ್ನು ಗುಣಪಡಿಸುತ್ತದೆ. ಅಲ್ಲದೆ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ಈ ಎಲೆಗಳನ್ನು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಮೂತ್ರದಲ್ಲಿ ರಕ್ತ ಮತ್ತು ಕೀವು ಮುಂತಾದ ಸಮಸ್ಯೆಗಳಿದ್ದರೆ ಅದನ್ನು ತಡೆಯುತ್ತದೆ. ಅಲ್ಲದೆ ಈ ಎಲೆಗಳು ಶೀತ, ಕೆಮ್ಮು ಮತ್ತು ಭೇದಿಯನ್ನು ಗುಣಪಡಿಸುತ್ತದೆ.

ತಲೆನೋವು ಕಡಿಮೆಯಾಗುತ್ತದೆ: ರಣಪಾಲ ಅಥವಾ ಕಾಡು ಬಸಳೆ ಎಲೆಗಳ ಪೇಸ್ಟ್ ಅನ್ನು ಹಣೆಗೆ ಹಚ್ಚುವುದರಿಂದ ಅಥವಾ ಈ ಎಲೆಗಳನ್ನು ಜಜ್ಜಿ ತಲೆಯ ಮೇಲೆ ಇಡುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಬಿಳಿ ಕೂದಲುಗಳು ಬರದಂತೆ ತಡೆಯುತ್ತದೆ.

ಇದನ್ನೂ ಓದಿ: ಮಹಿಳೆಯರು ಮಾಡುವ ಈ ಒಂದು ದೊಡ್ಡ ತಪ್ಪಿನಿಂದ ಜೀವನ ಪೂರ್ತಿ ಕಷ್ಟಪಡಬೇಕು ನೋಡಿ!

ಗಾಯ ಗುಣಪಡಿಸುತ್ತದೆ: ಯಾವುದೇ ರೀತಿಯ ಗಾಯಗಳಿರಲಿ ಅದನ್ನು ತ್ವರಿತವಾಗಿ ಗುಣಪಡಿಸಲು ಇದರ ಎಲೆಗಳನ್ನು ಬಿಸಿ ಮಾಡಿ ಗಾಯಗಳ ಮೇಲೆ ಇರಿಸಲಾಗುತ್ತದೆ.

ಕಿವಿನೋವು ಕಡಿಮೆಯಾಗುತ್ತೆ: ಈ ಎಲೆಗಳ ಪೇಸ್ಟ್ ನ ಎರಡು ಹನಿಗಳನ್ನು ಕಿವಿಗೆ ಹಚ್ಚುವುದರಿಂದ ಕಿವಿನೋವು ಕಡಿಮೆಯಾಗುತ್ತದೆ. ಅಲ್ಲದೆ ಕಿವುಡುತನವೂ ದೂರವಾಗುತ್ತದೆ.

ಯೋನಿ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ: ಮಹಿಳೆಯರಲ್ಲಿ ಯೋನಿ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಅಂತಹ ಜನರು ಜೇನುತುಪ್ಪದೊಂದಿಗೆ ಕಾಡು ಬಸಳೆ ಎಲೆ ಬೆರಿಸಿ ಸೇವಿಸುವುದು ಉತ್ತಮ. ಹೀಗೆ ಮಾಡುವುದರಿಂದ ತ್ವರಿತ ಪರಿಹಾರ ಸಿಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:14 pm, Fri, 2 August 24