Health Tips: ಮಹಿಳೆಯರು ಮಾಡುವ ಈ ಒಂದು ದೊಡ್ಡ ತಪ್ಪಿನಿಂದ ಜೀವನ ಪೂರ್ತಿ ಕಷ್ಟಪಡಬೇಕು ನೋಡಿ!

ಮಹಿಳೆಯರು ತೂಕ ಇಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಕೆಲವರು ಇದರಲ್ಲಿ ಯಶಸ್ಸನ್ನು ಕಾಣುತ್ತಾರೆ ಇನ್ನು ಹಲವರು ಇದರಲ್ಲಿ ವೈಫಲ್ಯ ಕಾಣುತ್ತಾರೆ. ಅದಕ್ಕೆ ನಾನಾ ರೀತಿಯ ಕಾರಣಗಳಿರಬಹುದು. ಆದರೆ ಮದುವೆ ಮಕ್ಕಳು ಆದ ಬಳಿಕ ಕೆಲವು ಮಹಿಳೆಯರು ತಮ್ಮ ತೂಕ ಇಳಿಸಿಕೊಂಡು ಮೊದಲಿನ ರೀತಿಯಲ್ಲಿ ಕಾಣುವುದಕ್ಕೆ ಬಯಸುತ್ತಾರೆ. ಆದರೆ ಕೆಲವೊಮ್ಮೆ ಅವರು ಮಾಡುವ ತಪ್ಪುಗಳು ಅವರ ಅರಿವಿಗೆ ಬರುವುದಿಲ್ಲ. ಇದರಿಂದಲೂ ಮಹಿಳೆಯರ ತೂಕ ಕಡಿಮೆ ಆಗದಿರಬಹುದು. ಹಾಗಾದರೆ ಮಹಿಳೆಯರು ಸಾಮಾನ್ಯವಾಗಿ ಮಾಡುವ ತಪ್ಪುಗಳೇನು? ಇದರಿಂದಾಗುವ ಆರೋಗ್ಯ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ.

Health Tips: ಮಹಿಳೆಯರು ಮಾಡುವ ಈ ಒಂದು ದೊಡ್ಡ ತಪ್ಪಿನಿಂದ ಜೀವನ ಪೂರ್ತಿ ಕಷ್ಟಪಡಬೇಕು ನೋಡಿ!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 02, 2024 | 10:02 AM

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತೂಕ ಇಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಕೆಲವರು ಇದರಲ್ಲಿ ಯಶಸ್ಸನ್ನು ಕಾಣುತ್ತಾರೆ ಇನ್ನು ಹಲವರು ಇದರಲ್ಲಿ ವೈಫಲ್ಯ ಕಾಣುತ್ತಾರೆ. ಅದಕ್ಕೆ ನಾನಾ ರೀತಿಯ ಕಾರಣಗಳಿರಬಹುದು. ಆದರೆ ಮದುವೆ ಮಕ್ಕಳು ಆದ ಬಳಿಕ ಕೆಲವು ಮಹಿಳೆಯರು ತಮ್ಮ ತೂಕ ಇಳಿಸಿಕೊಂಡು ಮೊದಲಿನ ರೀತಿಯಲ್ಲಿ ಕಾಣುವುದಕ್ಕೆ ಬಯಸುತ್ತಾರೆ. ಆದರೆ ಕೆಲವೊಮ್ಮೆ ಅವರು ಮಾಡುವ ತಪ್ಪುಗಳು ಅವರ ಅರಿವಿಗೆ ಬರುವುದಿಲ್ಲ. ಇದರಿಂದಲೂ ಮಹಿಳೆಯರ ತೂಕ ಕಡಿಮೆ ಆಗದಿರಬಹುದು. ಹಾಗಾದರೆ ಮಹಿಳೆಯರು ಸಾಮಾನ್ಯವಾಗಿ ಮಾಡುವ ತಪ್ಪುಗಳೇನು? ಇದರಿಂದಾಗುವ ಆರೋಗ್ಯ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ.

ಸಾಮಾನ್ಯವಾಗಿ ಮಹಿಳೆಯರು ಮಕ್ಕಳು ಅಥವಾ ಗಂಡ, ತಟ್ಟೆಯಲ್ಲಿ ಬಿಟ್ಟ ಆಹಾರವನ್ನು ಸೇವನೆ ಮಾಡುತ್ತಾರೆ. ಆಹಾರ ಹಾಳು ಮಾಡುವುದು ಬೇಡ ಎಂಬುದು ಅವರ ಯೋಚನೆಯಾಗಿರುತ್ತದೆ. ಆದರೆ ಅವರು ತಿಳಿಯದೆಯೇ ದೇಹವನ್ನು ಕಸದ ಬುಟ್ಟಿಯನ್ನಾಗಿ ಮಾಡಿಕೊಂಡಿರುತ್ತಾರೆ. ಇದು ಎಲ್ಲಾ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ ಆದರೆ ಕೆಲವು ಮನೆಯ ಮಹಿಳೆಯರು ಇವತ್ತಿಗೂ ಈ ರೀತಿಯ ನಿಯಮಗಳನ್ನು ರೂಢಿಸಿಕೊಂಡಿರುತ್ತಾರೆ. ಇದರಿಂದ ನಿಮಗೆ ಗೊತ್ತಿಲ್ಲದೆಯೇ ನೀವು ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡಿರುತ್ತೀರಿ. ಇದರಿಂದ ತೂಕ ಹೆಚ್ಚಳವಾಗಬಹುದು.

ಇದನ್ನೂ ಓದಿ: ಒಂದು ಮಗು ಪಡೆದ ಬಳಿಕ ಮತ್ತೊಮ್ಮೆ ಗರ್ಭಧರಿಸಲು ಎಷ್ಟು ಸಮಯ ಕೊಡುವುದು ಒಳ್ಳೆಯದು

ಈ ರೀತಿ ನೀವು ಮಾಡುತ್ತಿದ್ದರೆ ಇಂದೇ ಆ ಅಭ್ಯಾಸವನ್ನು ಬಿಟ್ಟು ಬಿಡಿ. ನಿಮ್ಮ ಗಂಡ, ಮಕ್ಕಳು ತಟ್ಟೆಯಲ್ಲಿ ಹೆಚ್ಚು ಆಹಾರ ಬಿಡುತ್ತಾರೆ ಎಂದರೆ ಅವರಿಗೆ ಸ್ವಲ್ಪ ಸ್ವಲ್ಪವೇ ಬಡಿಸಿ. ಬೇಕು ಅಂದರೆ ಮತ್ತೆ ಕೊಡಬಹುದು. ಆದರೆ ಅವರು ಬಿಟ್ಟ ಆಹಾರವನ್ನು ನೀವು ತಿನ್ನಬೇಡಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಏಕೆಂದರೆ ಇದು ಒಂದು ರೀತಿಯ ಕೆಟ್ಟ ಅಭ್ಯಾಸ ನಿಮಗೆ ತಿಳಿದೋ ತಿಳಿಯದೆಯೋ ಹೆಚ್ಚು ಆಹಾರ ಸೇವನೆ ಮಾಡುತ್ತೀರಿ. ಇದರಿಂದ ನಿಮ್ಮ ಆರೋಗ್ಯವೇ ಹಾಳಾಗುತ್ತದೆ. ಹಾಗಾಗಿ ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ ಅಲ್ಲದೆ ಆರೋಗ್ಯವೂ ಚೆನ್ನಾಗಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ