Noodles: 2 ನಿಮಿಷದಲ್ಲಿ ರೆಡಿಯಾಗುವ ನೂಡಲ್ಸ್ ತಿನ್ನುವುದರಿಂದ ಎಷ್ಟೆಲ್ಲಾ ಅಪಾಯವಿದೆ ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: May 31, 2024 | 5:47 PM

ತ್ವರಿತ ನೂಡಲ್ಸ್ ಗಳನ್ನು ನಿಯಮಿತ ಸೇವನೆಯು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಮುಂತಾದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ತಯಾರಿಸಲು ನಿಮಗೆ ಕಡಿಮೆ ಸಮಯ ತೆಗೆದುಕೊಳ್ಳಬಹುದಾದರೂ, ಅದರಲ್ಲಿರುವ ಪೌಷ್ಠಿಕಾಂಶದ ನ್ಯೂನತೆಗಳ ಬಗ್ಗೆ ಜಾಗರೂಕರಾಗಿರುವುದು ಮತ್ತು ಉತ್ತಮ ಆರೋಗ್ಯಕ್ಕಾಗಿ ಇವುಗಳ ಸೇವನೆಯನ್ನು ಮಿತಿಗೊಳಿಸುವುದು ಅತ್ಯಗತ್ಯ.

Noodles: 2 ನಿಮಿಷದಲ್ಲಿ ರೆಡಿಯಾಗುವ ನೂಡಲ್ಸ್ ತಿನ್ನುವುದರಿಂದ ಎಷ್ಟೆಲ್ಲಾ ಅಪಾಯವಿದೆ ಗೊತ್ತಾ?
Follow us on

ಇತ್ತೀಚಿನ ದಿನಗಳಲ್ಲಿ ತ್ವರಿತ ನೂಡಲ್ಸ್ ಸವಿಯಲು ಜನ ಇಷ್ಟಪಡುತ್ತಾರೆ, ಅವುಗಳ ರುಚಿ, ಆ ಮಸಾಲೆಯ ಸ್ವಾದ ಇವೆಲ್ಲದರ ಜೊತೆಗೆ ಬಹುಬೇಗ ಸಿದ್ಧವಾಗುವುದರಿಂದ ಇದನ್ನು ಸವಿಯಲು ಬಯಸುತ್ತಾರೆ. ಆದರೆ ಇದು ಆರೋಗ್ಯಕರ ಆಯ್ಕೆಯಲ್ಲ ಇವುಗಳಲ್ಲಿ ಸೋಡಿಯಂ, ಸಂರಕ್ಷಕಗಳು ಮತ್ತು ಇತರ ರಾಸಾಯನಿಕಗಳು ಹೆಚ್ಚಾಗಿರುತ್ತವೆ, ಹಾಗಾಗಿ ಇದು ಅನಾರೋಗ್ಯಕರ ಆಹಾರ ಆಯ್ಕೆಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ತ್ವರಿತ ನೂಡಲ್ಸ್ ಗಳನ್ನು ನಿಯಮಿತ ಸೇವನೆಯು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಮುಂತಾದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ತಯಾರಿಸಲು ನಿಮಗೆ ಕಡಿಮೆ ಸಮಯ ತೆಗೆದುಕೊಳ್ಳಬಹುದಾದರೂ, ಅದರಲ್ಲಿರುವ ಪೌಷ್ಠಿಕಾಂಶದ ನ್ಯೂನತೆಗಳ ಬಗ್ಗೆ ಜಾಗರೂಕರಾಗಿರುವುದು ಮತ್ತು ಉತ್ತಮ ಆರೋಗ್ಯಕ್ಕಾಗಿ ಇವುಗಳ ಸೇವನೆಯನ್ನು ಮಿತಿಗೊಳಿಸುವುದು ಅತ್ಯಗತ್ಯ.

ತ್ವರಿತ ನೂಡಲ್ಸ್ ಗಳ ಅಡ್ಡಪರಿಣಾಮಗಳು ಯಾವುವು?

1. ನೂಡಲ್ಸ್ ಗಳಲ್ಲಿ ಯಾವುದೇ ರೀತಿಯ ಪೌಷ್ಠಿಕಾಂಶವಿಲ್ಲ. ಅವು ಜೀವಸತ್ವಗಳು, ಖನಿಜಗಳು, ಪ್ರೋಟೀನ್ ಮತ್ತು ಫೈಬರ್ ನಂತಹ ಯಾವುದೇ ಅಗತ್ಯ ಪೋಷಕಾಂಶಗಳನ್ನು ನೀಡುವುದಿಲ್ಲ. ಬದಲಾಗಿ, ಅವುಗಳ ಸೇವನೆಯಿಂದ ಕ್ಯಾಲೊರಿ ಹೆಚ್ಚುತ್ತದೆ.

2. ಆಹಾರದ ರುಚಿಯನ್ನು ಹೆಚ್ಚಿಸಲು ಮೊನೊಸೋಡಿಯಂ ಗ್ಲುಟಮೇಟ್ (ಎಂಎಸ್‌ಜಿ) ಗಳನ್ನು ಸೇರಿಸಲಾಗುತ್ತದೆ. ಇದಕ್ಕೆ ಸಂಬಂಧ ಪಟ್ಟಂತೆ ಅಮೇರಿಕನ್ ಜನರಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಪ್ರಕಟಿಸಿದ ಅಧ್ಯಯನವು ಹೆಚ್ಚಿನ ಎಂಎಸ್‌ಜಿ ಇರುವ ಆಹಾರಗಳ ಸೇವನೆ ಮಾಡುವುದರಿಂದ ತೂಕ ಹೆಚ್ಚಳ, ತಲೆನೋವು, ವಾಕರಿಕೆ ಮತ್ತು ಅಧಿಕ ರಕ್ತದೊತ್ತಡ ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದನ್ನು ತಿಳಿಸಿದೆ.

3. ಇವುಗಳಲ್ಲಿ ಸೋಡಿಯಂ ಅಂಶ ಹೆಚ್ಚಿರುತ್ತದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು. ಅತಿಯಾದ ಸೋಡಿಯಂ ಸೇವನೆ ಮಾಡುವುದರಿಂದ ಅಂಗಾಂಗ ಹಾನಿ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಪೌಷ್ಟಿಕತಜ್ಞ ಸಲೋನಿ ಅರೋರಾ ಹೇಳಿದ್ದಾರೆ.

4. ನೂಡಲ್ಸ್ ಅನ್ನು ಮೈದಾದಿಂದ ತಯಾರಿಸಲಾಗುತ್ತದೆ, ಇದರಲ್ಲಿ ನಾರಿನಂಶ ಮತ್ತು ಅಗತ್ಯ ಪೋಷಕಾಂಶಗಳು ಕಡಿಮೆ ಇರುತ್ತದೆ. ಇದನ್ನು ಹೆಚ್ಚು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ, ಅಲ್ಲದೆ ಮಧುಮೇಹ ಇರುವವರು ಇದನ್ನು ಸೇವನೆ ಮಾಡಬಾರದು. ಜೊತೆಗೆ ಇದರಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು ಹೆಚ್ಚಾಗಿ ಇರುವುದರಿಂದ ಇವು ಬೊಜ್ಜು, ಚಯಾಪಚಯ ಸಿಂಡ್ರೋಮ್ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

5. ನೂಡಲ್ಸ್ ಗಳ ನಿಯಮಿತ ಸೇವನೆಯು ದೀರ್ಘಕಾಲೀನ ಆರೋಗ್ಯ ಅಪಾಯಗಳನ್ನು ಹೆಚ್ಚು ಮಾಡಬಹುದು. ನ್ಯೂಟ್ರಿಷನ್ ರಿಸರ್ಚ್ ಪ್ರಕಟಿಸಿದ ಅಧ್ಯಯನವು ತ್ವರಿತ ನೂಡಲ್ಸ್ ಅನ್ನು ಆಗಾಗ ಸೇವಿಸುವುದರಿಂದ ಮೆಟಾಬಾಲಿಕ್ ಸಿಂಡ್ರೋಮ್, ಅಧಿಕ ರಕ್ತದೊತ್ತಡ, ಮಧುಮೇಹ, ಸೊಂಟದ ಸುತ್ತ ಹೆಚ್ಚುವರಿ ಕೊಬ್ಬು ಮತ್ತು ಅಸಹಜ ಕೊಲೆಸ್ಟ್ರಾಲ್ ಮಟ್ಟಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಹಾಗಾಗಿ ಪ್ರತಿನಿತ್ಯ ನೂಡಲ್ಸ್ ಸೇವನೆ ಮಾಡುತ್ತಿದ್ದರೆ ಈ ಅಭ್ಯಾಸವನ್ನು ಕಡಿಮೆ ಮಾಡಿ, ಸಾಧ್ಯವಾದಲ್ಲಿ ನಿಲ್ಲಿಸಿ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದರ ಸೇವನೆಯ ಉಪಯೋಗಕ್ಕಿಂತ ಅಪಾಯವೇ ಹೆಚ್ಚಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

 

Published On - 5:46 pm, Fri, 31 May 24