AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tobacco Side Effects: ತಂಬಾಕಿನಿಂದ ಬಾಯಿ ಮಾತ್ರವಲ್ಲ ಈ ಅಂಗಗಳಿಗೂ ಕ್ಯಾನ್ಸರ್ ಅಪಾಯವಿದೆ! ತಡೆಯುವುದು ಹೇಗೆ?

ತಂಬಾಕನ್ನು ಎರಡು ರೀತಿಯಲ್ಲಿ ಸೇವಿಸಲಾಗುತ್ತದೆ. ಒಂದು ಧೂಮಪಾನ ಮಾಡುವ ಮೂಲಕ. ಮತ್ತೊಂದು ಬಾಯಿಯಲ್ಲಿ ಜಗಿದು ತಿನ್ನುವುದು. ಹಾಗಾದರೆ ತಂಬಾಕಿನಿಂದಾಗಿ ನಮ್ಮ ದೇಹದ ಯಾವ ಅಂಗಗಳಿಗೆ ಕ್ಯಾನ್ಸರ್ ಅಪಾಯವಿದೆ. ಅದನ್ನು ತಡೆಯಲು ಯಾವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ತಿಳಿಯಿರಿ.

Tobacco Side Effects: ತಂಬಾಕಿನಿಂದ ಬಾಯಿ ಮಾತ್ರವಲ್ಲ ಈ ಅಂಗಗಳಿಗೂ ಕ್ಯಾನ್ಸರ್ ಅಪಾಯವಿದೆ! ತಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: May 31, 2024 | 1:00 PM

Share

ತಂಬಾಕು ಸೇವನೆ ವಿಷಕ್ಕೆ ಸಮಾನ ಆದರೂ ಜನರು ಅದರ ವ್ಯಸನದಿಂದಾಗಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಧೂಮಪಾನ ಅಥವಾ ತಂಬಾಕಿಗೆ ಸಂಬಂಧಿಸಿದ ಇತರ ಮಾದಕವಸ್ತುಗಳ ಸೇವನೆಯು ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೀಡಿ, ಸಿಗರೇಟ್ ಅಥವಾ ಗುಟ್ಕಾ ಸೇವನೆಯು ನಮ್ಮ ದೇಹದ ಅನೇಕ ಭಾಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಅದರಲ್ಲಿಯೂ ಭಾರತ ಅತಿ ಹೆಚ್ಚು ತಂಬಾಕು ಸೇವನೆ ಮಾಡುವ ರಾಷ್ಟ್ರವಾಗಿದ್ದು, ಸುಮಾರು 26 ಕೋಟಿ ತಂಬಾಕು ಬಳಕೆ ಮಾಡಲಾಗುತ್ತದೆ. ಇವರಲ್ಲಿ ಸಿಗರೇಟ್, ಹುಕ್ಕಾ, ತಾಂಬೂಲ, ಗುಟ್ಕಾ ಮತ್ತು ಖೈನಿ.. ಹೀಗೆ ಎಲ್ಲ ರೀತಿಯ ತಂಬಾಕು ಬಳಕೆದಾರರಿದ್ದಾರೆ. ಜೊತೆಗೆ ತಂಬಾಕನ್ನು ಎರಡು ರೀತಿಯಲ್ಲಿ ಸೇವಿಸಲಾಗುತ್ತದೆ. ಒಂದು ಧೂಮಪಾನ ಮಾಡುವ ಮೂಲಕ. ಮತ್ತೊಂದು ಬಾಯಿಯಲ್ಲಿ ಜಗಿದು ತಿನ್ನುವುದು. ಹಾಗಾದರೆ ತಂಬಾಕಿನಿಂದಾಗಿ ನಮ್ಮ ದೇಹದ ಯಾವ ಅಂಗಗಳಿಗೆ ಕ್ಯಾನ್ಸರ್ ಅಪಾಯವಿದೆ. ಅದನ್ನು ತಡೆಯಲು ಯಾವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ತಿಳಿಯಿರಿ.

ತಂಬಾಕಿನಿಂದ ಬರುವ ರೋಗಗಳು;

ಡಾ. ಚೌಧರಿ ಅವರು “ತಂಬಾಕು ಮತ್ತು ಅದರ ವಿವಿಧ ಉತ್ಪನ್ನಗಳ ಬಳಕೆಯು ನಮ್ಮ ದೇಹದಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಈ ಕಾರಣದಿಂದಾಗಿ, ಬಾಯಿ ಮಾತ್ರವಲ್ಲದೆ ಗಂಟಲಿನ ಮೇಲ್ಭಾಗ, ಮೂಗಿನ ನಾಳದ, ಸೈನಸ್, ತುಟಿ, ಧ್ವನಿಪೆಟ್ಟಿಗೆ, ಬಾಯಿ, ಗಂಟಲು, ಅನ್ನನಾಳ ಮತ್ತು ಕರುಳು ಈ ಎಲ್ಲಾ ಭಾಗಗಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಇದರಿಂದ ಮೇದೊಜೀರಕಾಂಗದಲ್ಲಿ, ಗರ್ಭಕಂಠದಲ್ಲಿ, ಅಂಡಾಶಯ, ಕೊಲೆರೆಕ್ಟಮ್‌ನಲ್ಲಿ, ಮೂತ್ರಪಿಂಡಗಳಲ್ಲಿ, ಹೊಟ್ಟೆ ಭಾಗದಲ್ಲಿ ಹಾಗೂ ರಕ್ತಕಣಗಳಲ್ಲಿಯೂ (ಲ್ಯುಕೆಮಿಯಾ) ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅವರು ಹೇಳುತ್ತಾರೆ. ಇನ್ನು ಜಗಿದು ತಿನ್ನುವ ಅಥವಾ ಧೂಮಪಾನವಲ್ಲದ ತಂಬಾಕು ಸೇವನೆಯಿಂದ ಅನ್ನನಾಳ, ಬಾಯಿ, ಗಂಟಲು ಮತ್ತು ಮೇದೊಜೀರಕಾಂಗದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಸಂಶೋಧನೆಗಳ ಪ್ರಕಾರ ಧೂಮಪಾನಕ್ಕಿಂತಲೂ ಜಗಿದು ತಿನ್ನುವ ತಂಬಾಕು ಅತ್ಯಂತ ಅಪಾಯಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಕಳೆದ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಧೂಮಪಾನವೂ ಒಂದು ಪ್ರಮುಖ ಕಾರಣವಾಗಿದೆ ಎಂದು ಹೇಳಿರುವ ಅನೇಕ ಸಂಶೋಧನೆಗಳು ಬೆಳಕಿಗೆ ಬಂದಿವೆ. ಈ ಕಾರಣದಿಂದ ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ; ಅತಿಯಾದ ತಲೆ‌ ನೋವಿದ್ರೆ ಹೀಗೆ ಮಾಡಿ ತಕ್ಷಣ ಕಡಿಮೆಯಾಗುತ್ತೆ, ತಜ್ಞರ ಸಲಹೆ

ತಂಬಾಕನ್ನು ತ್ಯಜಿಸುವುದು ಹೇಗೆ?

ಡಾ. ಅಂಶುಮಾನ್ ಕುಮಾರ್ ಅವರು ಹೇಳುವ ಪ್ರಕಾರ, “ಪ್ರತಿದಿನ ನೀವು ಮಾಡುವ ಕೆಲಸದಲ್ಲಿ ನಿಮ್ಮನ್ನು ಸರಿಯಾಗಿ ತೊಡಗಿಸಿಕೊಳ್ಳಿ, ಜೊತೆಗೆ ಇದರಿಂದ ಮುಕ್ತಿ ಪಡೆಯಲು ತಜ್ಞರು ಶಿಫಾರಸು ಮಾಡಿದ ನಿಕೋಟಿನ್ ಇನ್ಹೇಲರ್ ಅನ್ನು ಬಳಸಿ” ಎಂದು ಅವರು ಸಲಹೆ ನೀಡಿದ್ದಾರೆ. ಜೊತೆಗೆ ತಂಬಾಕು ಸೇವನೆ ಮಾಡುವವರಿಂದ ದೂರವಿರಿ. ಇದೆಲ್ಲದರ ಹೊರತಾಗಿ ಧೂಮಪಾನ ಅಥವಾ ತಂಬಾಕಿನಿಂದ ಮುಕ್ತಿ ಪಡೆಯಲು ವ್ಯಾಯಾಮವು ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್