AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies: ಅತಿಯಾದ ತಲೆ‌ ನೋವಿದ್ರೆ ಹೀಗೆ ಮಾಡಿ ತಕ್ಷಣ ಕಡಿಮೆಯಾಗುತ್ತೆ, ತಜ್ಞರ ಸಲಹೆ

ತಲೆ ನೋವು ಬಂದಾಗ ಯಾವುದೇ ಕೆಲಸ ಮಾಡಲು ಅಥವಾ ನಿಖರವಾಗಿ ಆಲೋಚಿಸಲು ಸಾಧ್ಯವಾಗುವುದಿಲ್ಲ. ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವುದನ್ನು ಬಿಟ್ಟರೆ ಬೇರೆ ಏನು ಮಾಡಬಹುದು ಎಂಬುದು ತಲೆಗೆ ಹೋಗುವುದಿಲ್ಲ. ತಲೆ ನೋವಿನ ಭಾದೆ ನಮಗೆ ಅಷ್ಟರ ಮಟ್ಟಿಗೆ ತೊಂದರೆ ನೀಡಿರುತ್ತದೆ. ಆದರೆ ತಲೆ ನೋವು ಬಂದ ತಕ್ಷಣ ನಾವು ಅದಕ್ಕೆ ಸೂಕ್ತವಾದ ಮಾತ್ರೆ ಎಲ್ಲಿದೆ ಎಂದು ಹುಡುಕುವ ಬದಲು ಆಯುರ್ವೇದದ ಮೊರೆ ಹೋಗಬಹುದು. ಇದು ಅಡ್ಡಪರಿಣಾಮ ಇಲ್ಲದಂತೆ ತಲೆ ನೋವನ್ನು ಮಾಯವಾಗಿಸುತ್ತದೆ. ಹಾಗಾದರೆ ಏನು ಮಾಡಬೇಕು? ತಲೆ ನೋವಿಗೆ ಪರಿಹಾರವೇನು?

Home Remedies: ಅತಿಯಾದ ತಲೆ‌ ನೋವಿದ್ರೆ ಹೀಗೆ ಮಾಡಿ ತಕ್ಷಣ ಕಡಿಮೆಯಾಗುತ್ತೆ, ತಜ್ಞರ ಸಲಹೆ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 31, 2024 | 9:46 AM

Share

ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಸಾಮಾನ್ಯವಾಗಿ ತಲೆನೋವು ಕಂಡುಬರುತ್ತದೆ. ನೀವು ಗಮನಿಸಿರಬಹುದು ತಲೆ ನೋವು ಬಂದಾಗ ಯಾವುದೇ ಕೆಲಸ ಮಾಡಲು ಅಥವಾ ನಿಖರವಾಗಿ ಆಲೋಚಿಸಲು ಸಾಧ್ಯವಾಗುವುದಿಲ್ಲ. ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವುದನ್ನು ಬಿಟ್ಟರೆ ಬೇರೆ ಏನು ಮಾಡಬಹುದು ಎಂಬುದು ತಲೆಗೆ ಹೋಗುವುದಿಲ್ಲ. ತಲೆಯ ಭಾದೆ ನಮಗೆ ಅಷ್ಟರ ಮಟ್ಟಿಗೆ ತೊಂದರೆ ನೀಡಿರುತ್ತದೆ. ಆದರೆ ತಲೆ ನೋವು ಬಂದ ತಕ್ಷಣ ನಾವು ಅದಕ್ಕೆ ಸೂಕ್ತವಾದ ಮಾತ್ರೆ ಎಲ್ಲಿದೆ ಎಂದು ಹುಡುಕುವ ಬದಲು ಆಯುರ್ವೇದದ ಮೊರೆ ಹೋಗಬಹುದು. ಇದು ಅಡ್ಡಪರಿಣಾಮ ಇಲ್ಲದಂತೆ ತಲೆ ನೋವನ್ನು ಮಾಯವಾಗಿಸುತ್ತದೆ. ಹಾಗಾದರೆ ಏನು ಮಾಡಬೇಕು? ತಲೆ ನೋವಿಗೆ ಪರಿಹಾರವೇನು?

ಇದಕ್ಕೆ ಪರಿಹಾರವೇನು?

ಡಾ. ಮುರುಳೀಧರ್ ಅವರು ಹೇಳುವ ಪ್ರಕಾರ ತಲೆ ನೋವಿಗೆ ಮಾತ್ರೆ ತೆಗೆದುಕೊಳ್ಳುವ ಬದಲು “ನೋಳಿ ಬಳ್ಳಿ” ಅಥವಾ ವೀರಭದ್ರನ ಬಳ್ಳಿಯಿಂದ ಪರಿಹಾರ ಕಂಡುಕೊಳ್ಳಬಹುದು. ಇದು ಒಂದು ಚಿಕ್ಕ ಬಳ್ಳಿಯಾಗಿದ್ದು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿಯೂ ಕಂಡು ಬರುತ್ತದೆ. ಈ ಸಸ್ಯದ ದಂಟು ಅಥವಾ ಎಲೆಯನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಉಜ್ಜಿ ಅದನ್ನು ಮೂಗಿನ ಹೊಳ್ಳೆಯ ಹತ್ತಿರ ಹಿಡಿದು ಉಸಿರನ್ನು ತೆಗೆದುಕೊಳ್ಳಬೇಕು. ಇದರಲ್ಲಿರುವ ಆರೋಮಾ ತಕ್ಷಣ ನಿಮ್ಮ ತಲೆ ನೋವನ್ನು ಮಾಯವಾಗಿಸುತ್ತದೆ. ಇದನ್ನು ಮನೆಗಳಲ್ಲಿ ಬೆಳೆಸಿಕೊಳ್ಳಬಹುದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆಯೇ ತಲೆನೋವಿನಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ: ಕಾಡು ಬದನೆಕಾಯಿ ಪ್ರಯೋಜನ ಕೇಳಿದ ಮೇಲೆ ಇದನ್ನು ತಿಂದೆ ತಿನ್ನುತ್ತೀರಿ!

ಮನೆಮದ್ದಿನ ವಿಡಿಯೋ ಇಲ್ಲಿದೆ:

ಪದೇ ಪದೇ ತಲೆನೋವು ಬರುತ್ತಿದ್ದರೆ, ಒತ್ತಡದಿಂದ ತಲೆ ಸಿಡಿಯುತ್ತಿದ್ದರೆ ಈ ವಿಧಾನವನ್ನು ನೀವು ಮಾಡಿ ನೋಡಿ. ನಿಮಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಮೊದಲು ವೈದ್ಯರನ್ನು ಸಂಪರ್ಕಿಸಿ ಬಳಿಕ ಇದನ್ನು ಬಳಸಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: