AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಈ 4 ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ವಿಷವಾಗುತ್ತೆ!

ತಜ್ಞರು ಹೇಳುವ ಪ್ರಕಾರ ಕೆಲವು ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸುವುದು ವಿಷಕಾರಿಯಾಗಬಹುದು ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ಈ 4 ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟ ತಕ್ಷಣ ವಿಷವಾಗಿ ಬದಲಾಗುತ್ತದೆ. ನೀವು ಕೂಡ ಇದೇ ರೀತಿಯ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ಜಾಗೃತರಾಗಿ. ಹಾಗಾದರೆ ಯಾವ ರೀತಿಯ ಆಹಾರಗಳನ್ನು ರೆಫ್ರಿಜರೇಟರ್ ನಲ್ಲಿ ಇಡಬಾರದು ಎಂಬುದನ್ನು ತಿಳಿದುಕೊಳ್ಳಿ.

Health Tips: ಈ 4 ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ವಿಷವಾಗುತ್ತೆ!
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Jan 10, 2025 | 12:59 PM

Share

ಬಿಡುವಿಲ್ಲದ ಜೀವನ ಶೈಲಿ ನಮ್ಮನ್ನು ಅತ್ಯಾಧುನಿಕ ಉಪಕರಣಗಳ ಬಳಕೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಇದು ಸಾಕಷ್ಟು ರೀತಿಯಲ್ಲಿ ವರದಾನ. ಹಾಗಾಗಿ ಅನೇಕರು ಅಡುಗೆ ಕೆಲಸದಿಂದ ಹಿಡಿದು ಮನೆ ಕೆಲಸದ ವರೆಗೆ ಅನೇಕ ರೀತಿಯ ಉಪಕರಣಗಳನ್ನು ಬಳಸುತ್ತಿದ್ದಾರೆ. ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ವ್ಯಾಕ್ಯೂಮ್ ಕ್ಲೀನರ್, ಓವನ್ ಹೀಗೆ ಪಟ್ಟಿ ಮಾಡಿದರೆ ಮುಗಿಯದಷ್ಟು ಸಾಧನಗಳಿವೆ.

ಅದೇ ರೀತಿ, ಅಡುಗೆ ಮನೆಯಲ್ಲಿ ಆಹಾರ ಕೊಳೆಯದಂತೆ ತಡೆಯಲು ಬಹುತೇಕ ಪ್ರತಿ ಮನೆಯಲ್ಲಿಯೂ ರೆಫ್ರಿಜರೇಟರ್ ಅನ್ನು ಬಳಸಲಾಗುತ್ತದೆ. ಆದರೆ ಆಹಾರ ವ್ಯರ್ಥವನ್ನು ಕಡಿಮೆ ಮಾಡುವ ಈ ಉಪಕರಣವನ್ನು ಸರಿಯಾಗಿ ಬಳಸದಿದ್ದರೆ ನಿಮ್ಮ ಆರೋಗ್ಯವನ್ನು ಸಹ ಅಪಾಯಕ್ಕೆ ತಳ್ಳುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ವಿಷಯ ಕಹಿ ಎನಿಸಿದರೂ ಅದು ನಿಜ. ಕೆಲವರಿಗೆ ಈ ಬಗ್ಗೆ ತಿಳಿದಿರುವುದಿಲ್ಲ, ಇನ್ನು ಹಲವರಿಗೆ ತಿಳಿದಿರುತ್ತದೆ ಆದರೆ ಅದನ್ನು ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ತಜ್ಞರು ಹೇಳುವ ಪ್ರಕಾರ ಕೆಲವು ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸುವುದು ವಿಷಕಾರಿಯಾಗಬಹುದು ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಕಾರಣವಾಗಬಹುದು.

ಅದರಲ್ಲಿಯೂ ಈ 4 ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟ ತಕ್ಷಣ ವಿಷವಾಗಿ ಬದಲಾಗುತ್ತದೆ. ನೀವು ಕೂಡ ಇದೇ ರೀತಿಯ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ಜಾಗೃತರಾಗಿ. ಹಾಗಾದರೆ ಯಾವ ರೀತಿಯ ಆಹಾರಗಳನ್ನು ರೆಫ್ರಿಜರೇಟರ್ ನಲ್ಲಿ ಇಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಡಾ. ಡಿಂಪಲ್ ಜಂಗ್ಡಾ ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಬಗ್ಗೆ ಒಂದು ವಿಡಿಯೋ ಹಂಚಿಕೊಂಡಿದ್ದು ಅದರಲ್ಲಿ ಈ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಡಬೇಡಿ ಎಂದಿದ್ದಾರೆ. ಹಾಗಾದರೆ ಇದರಿಂದ ಯಾವ ರೀತಿಯ ಅಪಾಯವಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

1. ಈರುಳ್ಳಿ:

ಈರುಳ್ಳಿ ತೇವಾಂಶ ಮತ್ತು ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ಅದರಲ್ಲಿಯೂ ಕತ್ತರಿಸಿದ ಈರುಳ್ಳಿ ಬಹಳ ಅಪಾಯಕಾರಿ. ಹಾಗಾಗಿ ಇದನ್ನು ಎಂದಿಗೂ ಎಂದಿಗೂ ರೆಫ್ರಿಜರೇಟರ್ ನಲ್ಲಿ ಇಡಬಾರದು. ಇದನ್ನು ಯಾವಾಗಲೂ ತಂಪಾದ, ಶುಷ್ಕ ಸ್ಥಳದಲ್ಲಿ ಇಡಬೇಕು. ಅಗತ್ಯವಾಗಿ ಇಡಬೇಕು ಎಂದಾಗ ಕತ್ತರಿಸಿದ ಈರುಳ್ಳಿಯನ್ನು ಗಾಳಿಯಾಡದ ಪಾತ್ರೆಯಲ್ಲಿ ಫ್ರಿಡ್ಜ್ ನಲ್ಲಿಡಿ.

2. ಬೆಳ್ಳುಳ್ಳಿ:

ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್ ನಲ್ಲಿ ಇಡಬಾರದು. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಬೆಳ್ಳುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಟ್ಟಾಗ ಅದು ತನ್ನ ರುಚಿ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಬೆಳ್ಳುಳ್ಳಿಯನ್ನು ಸಂಗ್ರಹಿಸಲು ಉತ್ತಮ ಮಾರ್ಗವೆಂದರೆ ತಂಪಾದ, ಶುಷ್ಕ ಮತ್ತು ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಇರಿಸುವುದಾಗಿದೆ. ಅಗತ್ಯವಿದ್ದಾಗ ಸಿಪ್ಪೆ ಸುಲಿದ ಅಥವಾ ಕತ್ತರಿಸಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್ ನಲ್ಲಿ ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಿ.

3. ಶುಂಠಿ:

ಹೆಚ್ಚಿನ ಜನರು ಶುಂಠಿಯನ್ನು ತಾಜಾವಾಗಿಡಲು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಹಾಗೆ ಮಾಡುವುದರಿಂದ ಶುಂಠಿಯಲ್ಲಿ ಶಿಲೀಂಧ್ರ ಬೆಳೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಇದು ಮೂತ್ರಪಿಂಡಗಳು ಮತ್ತು ಯಕೃತ್ತಿಗೆ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ, ಇದನ್ನು ರೆಫ್ರಿಜರೇಟರ್ನಲ್ಲಿ ಇಡಬಾರದು. ಇಡಲೇಬೇಕಾದ ಸಂದರ್ಭಗಳಲ್ಲಿ ಶುಂಠಿಯನ್ನು ರೆಫ್ರಿಜರೇಟರ್ ನಲ್ಲಿ ಇಡುವ ಮೊದಲು ತೇವಾಂಶವನ್ನು ಹೀರಿಕೊಳ್ಳಲು ಕಾಗದದ ಟವೆಲ್ ಗಳಲ್ಲಿ ಬಿಗಿಯಾಗಿ ಸುತ್ತಿ. ಪರ್ಯಾಯವಾಗಿ, ಅದರ ಶೆಲ್ಫ್ ಜೀವಿತಾವಧಿಯನ್ನು ವಿಸ್ತರಿಸಲು ಅದನ್ನು ಫ್ರೀಜ್ ಮಾಡಿ.

4. ಅನ್ನ:

ಅನ್ನವನ್ನು ರೆಫ್ರಿಜರೇಟರ್ನಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಇಟ್ಟರೆ, ಅದು ವಿಷವಾಗುತ್ತದೆ. ಅದಲ್ಲದೆ ಬ್ಯಾಕ್ಟೀರಿಯಾಗಳಿಗೆ ಪರಿಪೂರ್ಣ ಸಂತಾನೋತ್ಪತ್ತಿ ಸ್ಥಳವಾಗುತ್ತದೆ. ಶೈತ್ಯೀಕರಣಕ್ಕೆ ಮುಂಚಿತವಾಗಿ ಬಹಳ ಸಮಯದ ವರೆಗೆ ಬಿಡುವುದು ಸಹ ಹಾಳಾಗಲು ಕಾರಣವಾಗುತ್ತದೆ. ಇಡಲೇಬೇಕಾದರೆ ಬೇಯಿಸಿದ ನಂತರ ಅನ್ನವನ್ನು ಬೇಗನೆ ತಣ್ಣಗಾಗಿಸಿ ಬಳಿಕ ರೆಫ್ರಿಜರೇಟರ್ನಲ್ಲಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಪ್ಪಿಸಲು 1 ದಿನದಲ್ಲಿ ಸೇವಿಸಿ.

ಇದನ್ನೂ ಓದಿ: ಫ್ರಿಡ್ಜ್ ನಲ್ಲಿ ನಿಂಬೆಹಣ್ಣಿನ ತುಂಡನ್ನು ಇಟ್ಟರೆ ಏನಾಗುತ್ತೆ ತಿಳಿದಿದೆಯೇ?

ಆಹಾರವನ್ನು ಫ್ರಿಡ್ಜ್ ನಲ್ಲಿ ಇಡುವುದು ಹೇಗೆ?

ತಜ್ಞರ ಪ್ರಕಾರ, ಆಹಾರವನ್ನು ಆರೋಗ್ಯಕರವಾಗಿಡಲು ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಇಟ್ಟ ಆಹಾರಗಳನ್ನು ಬೇಗ ಖಾಲಿ ಮಾಡಿ. ಅದಲ್ಲದೆ ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸಿಡುವ ಪಾತ್ರೆ ಅಥವಾ ಡಬ್ಬಗಳನ್ನು ಆಗಾಗ ಸ್ವಚ್ಛಗೊಳಿಸುವುದು ಉತ್ತಮ. ಅಡುಗೆ ಮಾಡಿದ ಎರಡು ಗಂಟೆಗಳ ಒಳಗೆ ಉಳಿಕೆಯನ್ನು ಶೈತ್ಯೀಕರಿಸುವುದು ಜೊತೆಗೆ ಆಹಾರಗಳನ್ನುಇಡುವ ಮೊದಲು ಬಿಸಿ ಆಹಾರವನ್ನು ತಂಪಾಗಿಸುವುದು ರೂಢಿಯಲ್ಲಿರಲಿ.

(ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಸಂದೇಹಗಳಿದ್ದರೆ ತಜ್ಞರನ್ನು ಸಂಪರ್ಕಿಸಿ.)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ