
ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ನಮಗೆಲ್ಲಾ ತಿಳಿದಿರುವ ಬಾಯಿ ಸ್ವಚ್ಛತೆ ಮಂತ್ರ. ಇದು ಹಲ್ಲಿನ ಹುಳುಕು, ದುರ್ವಾಸನೆ ಸೇರಿದಂತೆ ಹಲವು ಸಮಸ್ಯೆಗಳನ್ನು ತಡೆಯುತ್ತದೆ. ಹಾಗಾದರೆ ರಾತ್ರಿ ಹಲ್ಲುಜ್ಜುವುದು ಹಾಗೂ ಹೃದಯದ ಆರೋಗ್ಯ ಎರಡಕ್ಕೂ ಏನು ಸಂಬಂಧವಿದೆ ಅದಕ್ಕೆ ಉತ್ತರ ಇಲ್ಲಿದೆ.
ರಾತ್ರಿ ನಿದ್ರೆ ಬಂದುಬಿಡ್ತು ಹಾಗಾಗಿ ಹಲ್ಲುಜ್ಜಲು ಮರೆತುಹೋಯಿತು ಎಂಬುವ ಸಬೂಬು ನೀಡಬೇಡಿ ಇದು ದೀರ್ಘಾವಧಿಯಲ್ಲಿ ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿ ಮಾಡಬಹುದು, ಹೃದಯಾಘಾತಕ್ಕೂ ಕಾರಣವಾಗಬಹುದು.
ಡಾ. ಕುನಾಲ್ ಸೂದ್ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಒಂದು ರೀಲ್ ಹಂಚಿಕೊಂಡಿದ್ದು, ಅದರಲ್ಲಿ ನಿಮ್ಮ ಬಾಯಿಯ ಆರೋಗ್ಯ ಎಷ್ಟು ಮುಖ್ಯ ಎಂಬುದರ ಬಗ್ಗೆ ವಿವರಿಸಿದ್ದಾರೆ. ರಾತ್ರಿ ವೇಳೆ ಹಲ್ಲುಜ್ಜುವುದನ್ನು ನಿರ್ಲಕ್ಷಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ರಾತ್ರಿ ಹಲ್ಲುಜ್ಜುವುದುನ್ನು ಕೇವಲ ಹುಳುಕು ಹಲ್ಲಾಗುವುದನ್ನು ತಪ್ಪಿಸುವುದಕ್ಕಾಗಿ ಅಲ್ಲ. ಅದಕ್ಕಿಂತ ಹೆಚ್ಚು ಅಪಾಯವನ್ನು ತಂದುಕೊಳ್ಳುವ ಸಾಧ್ಯತೆ ಇದೆ.
ನಿಮ್ಮ ಬಾಯಿಯಿಂದ ಬ್ಯಾಕ್ಟೀರಿಯಾಗಳು ನಿಮ್ಮ ರಕ್ತನಾಳವನ್ನು ಪ್ರವೇಶಿಸಬಹುದು, ಇದು ಕಾಲಾನಂತರದಲ್ಲಿ ನಿಮ್ಮ ಹೃದಯದ ಮೇಲೆ ಪರಿಣಾಮ ಬೀರಬಹುದು. ಉರಿಯೂತ ಉಂಟು ಮಾಡಬಹುದು. ಮೌಖಿಕ ನೈರ್ಮಲ್ಯವು ನೇರವಾಗಿ ಹೃದಯ ಕಾಯಿಲೆಗೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸದಿದ್ದರೂ ಬಲವಾದ ಸಂಬಂಧವಿದೆ ಎಂಬುದನ್ನು ಹೇಳಿದ್ದಾರೆ.
ಮತ್ತಷ್ಟು ಓದಿ: ಹೋಟೆಲ್ಅಂಗಡಿಗಳಲ್ಲಿ ಪೇಪರ್ ಕಪ್ ಗಳಲ್ಲಿ ಟೀ ಹೀರೋರು ಇನ್ಮುಂದೆ ಹುಷಾರಾಗಿರಿ!
ಅಧ್ಯಯನಗಳನ್ನು ಉಲ್ಲೇಖಿಸಿ ವಿಡಿಯೋ ಮಾಡಿದ್ದಾರೆ. 2023ರಲ್ಲಿ ಪ್ರಕಟವಾದ ಅಧ್ಯಯನದ ವರದಿ ಬಗ್ಗೆ ಮಾತನಾಡಿರುವ ಅವರು ರಾತ್ರಿ ಹಲ್ಲುಜ್ಜದೇ ಇರುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.
ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಕೇವಲ ನಿಮ್ಮ ಮುಖದಲ್ಲಿ ನಿಮ್ಮ ನಗು ಮತ್ತು ಉತ್ತಮ ಉಸಿರಾಟ ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತದೆ.
ಕೇವಲ ಎರಡು ಬಾರಿಯಲ್ಲ ಅದಕ್ಕಿಂತ ಹೆಚ್ಚು ಮಾಡಿ ಬಾಯಿಯನ್ನು ಸ್ವಚ್ಛಗೊಳಿಸಬೇಕು, ಆದರೆ ಅಧ್ಯಯನದಲ್ಲಿ ಕನಿಷ್ಠ 2 ಬಾರಿಯಾದರೂ ಹಲ್ಲುಜ್ಜುವುದು ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.
ಸೂಚನೆ: ಇದು ಟಿವಿ9ನ ವೈಯಕ್ತಿಕ ಅಭಿಪ್ರಾಯವಾಗಿರುವುದಿಲ್ಲ, ಅಧ್ಯಯನ ವರದಿಯಲ್ಲಿ ಹೇಳಲಾದ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:20 am, Mon, 17 March 25