Pandava lanka, waterfalls: ಅದು ಬರೀ ಜಲಪಾತವಲ್ಲ; ಔಷಧೀಯ ಗುಣಗಳಿಂದ ಧುಮ್ಮಿಕ್ಕುತ್ತಿದೆ ಆ ನೀರು.. ಸ್ಥಳ ಮಹಾತ್ಮೆ ಏನು!

| Updated By: ಸಾಧು ಶ್ರೀನಾಥ್​

Updated on: Sep 09, 2024 | 1:52 PM

Pandava lanka waterfalls: ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಗುಡ್ಡದ ಮೇಲೆ ಕೆಲವು ದಿನಗಳನ್ನು ಕಳೆದರು ಎನ್ನುತ್ತದೆ ಸ್ಥಳ ಪುರಾಣ. ಅಷ್ಟೇ ಅಲ್ಲ; ಅವರು ಆಗ ಸ್ಥಾಪಿಸಿರುವ ಶಿವಲಿಂಗ ಇಂದಿಗೂ ಇಲ್ಲಿ ಗೋಚರಿಸುತ್ತದೆ. ಶ್ರೀರಾಮ ತನ್ನ ವನವಾಸದ ಸಮಯದಲ್ಲಿ ಇಲ್ಲಿನ ಶಿವಲಿಂಗವನ್ನು ಪೂಜಿಸಿದನೆಂದು ಪುರಾಣವು ಹೇಳುತ್ತದೆ.

Pandava lanka, waterfalls: ಅದು ಬರೀ ಜಲಪಾತವಲ್ಲ; ಔಷಧೀಯ ಗುಣಗಳಿಂದ ಧುಮ್ಮಿಕ್ಕುತ್ತಿದೆ ಆ ನೀರು.. ಸ್ಥಳ ಮಹಾತ್ಮೆ ಏನು!
ಅದು ಬರೀ ಜಲಪಾತವಲ್ಲ; ಔಷಧೀಯ ಗುಣಗಳಿಂದ ಧುಮ್ಮಿಕ್ಕುತ್ತಿದೆ ಆ ನೀರು
Follow us on

Pandava lanka, waterfalls: ಎಲ್ಲೇ ಆಗಲಿ ಮಳೆಗಾಲದಲ್ಲಿ ಎತ್ತರೆತ್ತರದ ಮೇಲ್ಭಾಗದಿಂದ ಹರಿದು ಬರುವ ನೀರು ಸದಾ ಚಿತ್ತಾಕರ್ಷಕ. ನಿಸರ್ಗ ಸೌಂದರ್ಯದ ದೃಶ್ಯಕಾವ್ಯ ಈ ಜಲಪಾತ. ಭಾರೀ ಮಳೆಯಿಂದಾಗಿ ಎತ್ತರದ ಗುಡ್ಡಗಳಿಂದ ಬರುವ ನೀರಿಗೆ ಪ್ರವಾಸಿಗರು ಮೈಯೊಡ್ಡಿ ನಿಂತಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ ಈ ಸ್ಟೋರಿ ನೋಡಿ. ಇಲ್ಲಿನ ನುರಗಲ್ ಜಲಪಾತದಿಂದ ಧುಮ್ಮಿಕ್ಕುವ ನೀರು ಕುಡಿದರೆ/ ನೀರನ್ನು ಮೈಮೇಲೆ ಹಾಕಿಕೊಂಡರೆ ಎಲ್ಲ ರೋಗಗಳೂ ವಾಸಿಯಾಗುತ್ತವೆ ಎನ್ನುತ್ತಾರೆ ಇಲ್ಲಿಗೆ ಭೇಟಿ ನೀಡುವ ಜನ. ಇದರಿಂದಾಗಿ ಆ ನೀರನ್ನು ಕುಡಿಯಲು, ಸ್ನಾನ ಮಾಡಲು ಆ ಕಾಡಿನತ್ತ ಹೆಜ್ಜೆ ಹಾಕುತ್ತಾರೆ ಜನ. ಅದೂ ಒಬ್ಬರಲ್ಲ, ಇಬ್ಬರಲ್ಲ. ನೂರಾರು ಮಂದಿ ಪ್ರತಿದಿನವೂ ಇಲ್ಲಿಗೆ ಬಂದು, ಹರಿಯುವ ಜಲಪಾತದಲ್ಲಿ ಸ್ನಾನ ಮಾಡಿ, ನೀರು ಕುಡಿಯುವುದೂ ಅಲ್ಲದೆ; ಜೊತೆಗಿರಲಿ ಅಂತಾ ಬಾಟಲಿ, ಕ್ಯಾನ್​​ಗಳಲ್ಲಿ ನೀರು ತುಂಬಿಸಿಕೊಂಡು ಮನೆಗೆ ತರುತ್ತಾರೆ. ವಾರಾಂತ್ಯದ ವೇಳೆಯಂತೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.

ರಾಮಗಿರಿ ಜಿಲ್ಲೆಯ ಮೇಲಿರುವ ಕಾಲ್ವ ಶ್ರೀರಾಂಪುರ ಜಿಲ್ಲೆಯ ಕಾಲ್ವ ಶ್ರೀರಾಂಪುರ ಮಂಡಲದ ವೆನ್ನಂಪಲ್ಲಿ, ಜಾಫರ್ಖಾನ್ ಬೆಲ್ಟ್ ಗಡಿಯಲ್ಲಿರುವ ಪಾಂಡವ ಲಂಕಾಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಪಾಂಡವ ಲಂಕಾ ಜಲಪಾತದಲ್ಲಿ ಧುಮ್ಮಿಕ್ಕುವ ನೀರಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಮೀಪದ ಪ್ರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಗುಡ್ಡದ ಮೇಲೆ ಕೆಲವು ದಿನಗಳನ್ನು ಕಳೆದರು ಎನ್ನುತ್ತದೆ ಸ್ಥಳ ಪುರಾಣ. ಅಷ್ಟೇ ಅಲ್ಲ; ಅವರು ಆಗ ಸ್ಥಾಪಿಸಿರುವ ಶಿವಲಿಂಗ ಇಂದಿಗೂ ಇಲ್ಲಿ ಗೋಚರಿಸುತ್ತದೆ. ಶ್ರೀರಾಮ ತನ್ನ ವನವಾಸದ ಸಮಯದಲ್ಲಿ ಇಲ್ಲಿನ ಶಿವಲಿಂಗವನ್ನು ಪೂಜಿಸಿದನೆಂದು ಪುರಾಣವು ಹೇಳುತ್ತದೆ. ವನವಾಸದ ಸಮಯದಲ್ಲಿ, ಅದೊಮ್ಮೆ ಭೀಮನ ಗದೆ ಗುಡ್ಡದ ಮೇಲಿಂದ ಕೆಳಗೆ ಬಿದ್ದುಬಿಡುತ್ತದೆ. ಮುಂದೆ ಅದೇ ಆಕಾರದಲ್ಲಿ ಜಲಪಾತದಿಂದ ನೀರು ಬೀಳಲು ಆರಂಭವಾಯಿತಂತೆ.

ಜಲಪಾತದಿಂದ ರೂಪುಗೊಂಡ ಕೊಳದಲ್ಲಿ ಸ್ನಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಭಕ್ತರು ಅಪಾರ ನಂಬಿಕೆ ಹೊಂದಿದ್ದಾರೆ. ಮಳೆಗಾಲದಲ್ಲಿ ಬೆಟ್ಟದಿಂದ ಬರುವ ನೀರಿನಲ್ಲಿ ಜನರು ಸ್ನಾನ ಮಾಡುತ್ತಾರೆ ಮತ್ತು ಆ ನೀರನ್ನು ಕುಡಿದ ಸಕಲ ರೋಗಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ.

ರಾಮಗಿರಿ ಖಿಲ್ಲ ಗುಟ್ಟದಿಂದ ಪಾಂಡವರು ಹೊರಟ ಲಂಕಾದವರೆಗೆ ಸಂಜೀವಿನಿ ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಮರಗಳಿವೆ. ಈ ನೀರು ಕುಡಿಯುವುದರಿಂದ ಸರ್ವ ರೋಗಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ ಈ ಪ್ರದೇಶಕ್ಕೆ ಬರುತ್ತಿರುವ ಪ್ರವಾಸಿಗರು.

ಆದರೆ ಈ ಪ್ರದೇಶಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲದ ಕಾರಣ ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನಾದರೂ ರಾಜ್ಯ ಸರಕಾರ ಈ ಜಲಪಾತಕ್ಕೆ ರಸ್ತೆ ಸೌಕರ್ಯ ಕಲ್ಪಿಸುವಂತೆ ಪ್ರವಾಸಿಗರು ಮನವಿ ಮಾಡುತ್ತಿದ್ದಾರೆ.

 

 

Published On - 1:43 pm, Mon, 9 September 24