Health Tips: ಈ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಹೃದ್ರೋಗದ ಅಪಾಯ ಹೆಚ್ಚಾಗಬಹುದು ಎಚ್ಚರ

ದೇಹಕ್ಕೆ ಅನೇಕ ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ. ಇದು ನಮ್ಮ ಆಹಾರದಲ್ಲಿ ಸಿಗದಿದ್ದಾಗ ಅವುಗಳನ್ನು ಪಡೆಯಲು ನಾವು ಪೂರಕ ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಕೆಲವರಿಗಂತೂ ಇದನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇತ್ತೀಚಿಗಿನ ಸಂಶೋಧನೆಯೊಂದು ಈ ವಿಷಯದ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿದ್ದು, ಅದರ ಫಲಿತಾಂಶದ ಪ್ರಕಾರ, ಒಂದು ನಿರ್ದಿಷ್ಟ ಪೋಷಕಾಂಶವನ್ನು ಪಡೆಯಲು ಅದಕ್ಕೆ ಪೂರಕವಾದ ಮಾತ್ರೆಗಳನ್ನು ಅದರಲ್ಲಿಯೂ ನಿಯಾಸಿನ್ ಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಹೃದ್ರೋಗದ ಅಪಾಯವೂ ಹೆಚ್ಚಾಗುತ್ತದೆ ಎಂಬ ಕಳವಳಕಾರಿ ವಿಷಯವೊಂದನ್ನು ಹಂಚಿಕೊಂಡಿದೆ.

Health Tips: ಈ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಹೃದ್ರೋಗದ ಅಪಾಯ ಹೆಚ್ಚಾಗಬಹುದು ಎಚ್ಚರ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 09, 2024 | 3:21 PM

ನಮ್ಮ ದೇಹವು ಸರಾಗವಾಗಿ ಕಾರ್ಯನಿರ್ವಹಿಸಲು ನಮಗೆ ಅನೇಕ ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ. ಇದು ನಮ್ಮ ಆಹಾರದಲ್ಲಿ ಸಿಗದಿದ್ದಾಗ ಅವುಗಳನ್ನು ಪಡೆಯಲು ನಾವು ಪೂರಕ ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಕೆಲವರಿಗಂತೂ ಇದನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇತ್ತೀಚಿಗಿನ ಸಂಶೋಧನೆಯೊಂದು ಈ ವಿಷಯದ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿದ್ದು, ಅದರ ಫಲಿತಾಂಶದ ಪ್ರಕಾರ, ಒಂದು ನಿರ್ದಿಷ್ಟ ಪೋಷಕಾಂಶವನ್ನು ಪಡೆಯಲು ಅದಕ್ಕೆ ಪೂರಕವಾದ ಮಾತ್ರೆಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಹೃದ್ರೋಗದ ಅಪಾಯವೂ ಹೆಚ್ಚಾಗುತ್ತದೆ ಎಂಬ ಕಳವಳಕಾರಿ ವಿಷಯವೊಂದನ್ನು ಹಂಚಿಕೊಂಡಿದೆ.

ಅತಿಯಾಗಿ ನಿಯಾಸಿನ್ ಸೇವಿಸುವುದು ಕೂಡ ಅಪಾಯಕಾರಿ

ಇತ್ತೀಚಿನ ವರ್ಷಗಳಲ್ಲಿ ಅನೇಕ ಜನರು ವಿಟಮಿನ್ ಬಿ ಅಗತ್ಯವಾದ ಪೂರಕವನ್ನು ತೆಗೆದುಕೊಳ್ಳುತ್ತಿದ್ದಾರೆ. ವಿಟಮಿನ್ ಬಿ ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ ಎನ್ನುವುದು ಸತ್ಯವಾದರೂ ಕೂಡ ಇದರ ಹೆಚ್ಚುವರಿ ಸೇವನೆಯು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. “ನೇಚರ್ ಮೆಡಿಸಿನ್” ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಟಮಿನ್ ಬಿ ಗೆ ಪೂರಕವಾಗಿ ತೆಗೆದುಕೊಳ್ಳುವ ನಿಯಾಸಿನ್ ಎಂಬ ಔಷಧಿಯ ಹೆಚ್ಚಿನ ಸೇವನೆಯು ಉರಿಯೂತವನ್ನು ಪ್ರಚೋದಿಸುತ್ತದೆ ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಇದು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ವಿಟಮಿನ್ ಬಿ ಗೆ ಅಗತ್ಯವಿರುವ ಜೀವಸತ್ವಗಳನ್ನು ಮಾಂಸ, ಮೀನು, ಧಾನ್ಯಗಳ ಮೂಲಕ ಪಡೆಯಬಹುದಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ಮೆದುಳಿನ ಮೇಲೆ ದಾಳಿ ಮಾಡುವ ಹೊಸ ವೈರಸ್ ಪತ್ತೆ

ದೈನಂದಿನ ಅಗತ್ಯವನ್ನು ಮೀರಬೇಡಿ

ನಿಯಾಸಿನ್ ಪುರುಷರಿಗಾದರೆ ದಿನಕ್ಕೆ 16 ಮಿಗ್ರಾಂ ಮತ್ತು ಮಹಿಳೆಯರಿಗಾದರೆ ದಿನಕ್ಕೆ 14 ಮಿಗ್ರಾಂ ಸಾಕಾಗುತ್ತದೆ. ಆದರೆ ಈ ಸಂಶೋಧನೆಯಲ್ಲಿ 4 ರಲ್ಲಿ ಒಬ್ಬರಿಗೆ ನಿಯಾಸಿನ್ ಮಟ್ಟವು ಅಗತ್ಯಕ್ಕಿಂತ ಹೆಚ್ಚಾಗಿದೆ ಎಂದು ಕಂಡು ಹಿಡಿದಿದ್ದು ಇದು ಹೃದ್ರೋಗಗಳನ್ನು ಪ್ರಚೋದಿಸುತ್ತದೆ. ಹಾಗಾಗಿ ವ್ಯಕ್ತಿಯು ನಿಯಾಸಿನ್ ನನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಎಂದು ಸಂಶೋಧಕರು ಹೇಳುತ್ತಾರೆ. ಹೆಚ್ಚಿನ ಜನರಿಗೆ ಇದು ಅವರ ಆಹಾರದಲ್ಲಿಯೇ ಸಿಗುತ್ತದೆ ಹಾಗಾಗಿ ಇದನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ ಈ ಪೋಷಕಾಂಶದ ಕೊರತೆ ಆದರೆ ಪೆಲ್ಲಗ್ರಾ ಎಂಬ ಮಾರಣಾಂತಿಕ ಕಾಯಿಲೆ ಬರುವ ಅಪಾಯವಿದೆ. ಹಾಗಾಗಿ ಇದಕ್ಕೆ ಬೇಕಾಗಿರುವ ಔಷಧಿಗಳನ್ನು ಸೇವನೆ ಮಾಡುವ ಮೊದಲು ವೈದ್ಯರ ಸಂಪರ್ಕಿಸುವುದನ್ನು ಮರೆಯಬೇಡಿ. ಆದಷ್ಟು ಆಹಾರದಲ್ಲಿಯೇ ಸಿಗುವ ಪೋಷಕಾಂಶಗಳನ್ನು ತಿಂದು, ಆರೋಗ್ಯವಾಗಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ