Mpox case in India: ದೇಶದಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿ, ಕೋತಿಗಳಿಗೂ ಮಂಕಿಪಾಕ್ಸ್​​​ಗೂ ಸಂಬಂಧವಿದೆಯೇ?

Mpox case in India: ಆಫ್ರಿಕನ್ ಮತ್ತು ಅನೇಕ ಯುರೋಪಿಯನ್ ದೇಶಗಳ ಬಳಿಕ ನಮ್ಮ ದೇಶದಲ್ಲಿ ಮಂಕಿಪಾಕ್ಸ್ ಮೊದಲ ಶಂಕಿತ ಪ್ರಕರಣ ಬೆಳಕಿಗೆ ಬಂದಿದೆ. ಸೋಂಕು ಪೀಡಿತ ದೇಶದಿಂದ ಯುವಕನೊಬ್ಬ ಭಾರತಕ್ಕೆ ಮರಳಿದ್ದು ಆತನಲ್ಲಿ ಈ ರೋಗಲಕ್ಷಣಗಳು ಕಂಡು ಬಂದಿದ್ದು ಬಳಿಕ ಆತನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಈ ರೋಗ ಕೋತಿಗಳೊಂದಿಗೆ ಸಂಬಂಧವಿದೆ ಎಂಬುದು ಸತ್ಯ. ಆದರೆ ಆಶ್ಚರ್ಯಕರ ಸಂಗತಿ ಎಂದರೆ ಈ ವೈರಸ್ ಕೋತಿಗಳ ಮೂಲಕವೇ ಹರಡುವುದು 100% ಖಚಿತವಲ್ಲ. ಹಾಗಾದರೆ ಈ ರೋಗಕ್ಕೆ ಕೋತಿಗಳ ಹೆಸರನ್ನು ಏಕೆ ಮತ್ತು ಹೇಗೆ ಇಡಲಾಯಿತು ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವಿಸುತ್ತದೆ. ಇದಕ್ಕೆ ಸರಿಯಾದ ಮಾಹಿತಿ ಇಲ್ಲಿದೆ.

Mpox case in India: ದೇಶದಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್ ಪ್ರಕರಣ ವರದಿ, ಕೋತಿಗಳಿಗೂ ಮಂಕಿಪಾಕ್ಸ್​​​ಗೂ ಸಂಬಂಧವಿದೆಯೇ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 09, 2024 | 5:50 PM

ಆಫ್ರಿಕನ್ ಮತ್ತು ಅನೇಕ ಯುರೋಪಿಯನ್ ದೇಶಗಳ ಬಳಿಕ ನಮ್ಮ ದೇಶದಲ್ಲಿ ಮಂಕಿಪಾಕ್ಸ್ ಮೊದಲ ಶಂಕಿತ ಪ್ರಕರಣ ಬೆಳಕಿಗೆ ಬಂದಿದೆ. ಸೋಂಕು ಪೀಡಿತ ದೇಶದಿಂದ ಯುವಕನೊಬ್ಬ ಭಾರತಕ್ಕೆ ಮರಳಿದ್ದು ಆತನಲ್ಲಿ ಈ ರೋಗಲಕ್ಷಣಗಳು ಕಂಡು ಬಂದಿದ್ದು ಬಳಿಕ ಆತನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಆಫ್ರಿಕಾದ ಅನೇಕ ದೇಶಗಳು ಮಂಕಿಪಾಕ್ಸ್ ನಿಂದ ಬಾಧಿತವಾಗಿವೆ. ಈ ರೋಗ ಕೋತಿಗಳೊಂದಿಗೆ ಸಂಬಂಧವಿದೆ ಎಂಬುದು ಸತ್ಯ. ಆದರೆ ಆಶ್ಚರ್ಯಕರ ಸಂಗತಿ ಎಂದರೆ ಈ ವೈರಸ್ ಕೋತಿಗಳ ಮೂಲಕವೇ ಹರಡುವುದು 100% ಖಚಿತವಲ್ಲ. ಹಾಗಾದರೆ ಈ ರೋಗಕ್ಕೆ ಕೋತಿಗಳ ಹೆಸರನ್ನು ಏಕೆ ಮತ್ತು ಹೇಗೆ ಇಡಲಾಯಿತು ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವಿಸುತ್ತದೆ. ಇದಕ್ಕೆ ಸರಿಯಾದ ಮಾಹಿತಿ ಇಲ್ಲಿದೆ.

ಮಂಗನ ಹೆಸರಿಗೂ ಈ ರೋಗಕ್ಕೂ ಯಾವ ರೀತಿಯ ಸಂಬಂಧವಿದೆ?

ಅಮೇರಿಕನ್ ಹೆಲ್ತ್ ಏಜೆನ್ಸಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿಯ ಪ್ರಕಾರ, ಈ ರೋಗವನ್ನು ಮೊದಲು ಮಂಕಿಪಾಕ್ಸ್ ಎಂದು ಕರೆಯಲಾಗುತ್ತಿತ್ತು, ಬಳಿಕ ಇದನ್ನು ಎಂಪಾಕ್ಸ್ ಎಂದು ಹೆಸರಿಸಲಾಯಿತು. ಆದರೆ ಸಾಮಾನ್ಯ ಪರಿಭಾಷೆಯಲ್ಲಿಯೂ, ಇದನ್ನು ಎಂಪಾಕ್ಸ್ ಬದಲಿಗೆ ಮಂಕಿಪಾಕ್ಸ್ ಎಂದು ಕರೆಯಲಾಗುತ್ತದೆ. ಎಂಪೋಕ್ಸ್ ಒಂದು ಝೂನೋಟಿಕ್ ಕಾಯಿಲೆಯಾಗಿದೆ, ಅಂದರೆ ಇದು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹರಡಬಹುದು. ಇದರ ಮೊದಲ ಪ್ರಕರಣ 1958 ರಲ್ಲಿ ಬೆಳಕಿಗೆ ಬಂದಿತ್ತು. ಈ ವೈರಸ್ ಮೊದಲು ಕೋತಿಗಳಲ್ಲಿ ಕಂಡು ಬಂದಿದೆ. ಹಾಗಾಗಿ ಈ ರೋಗವನ್ನು ಮಂಕಿಪಾಕ್ಸ್ ಎಂದು ಹೆಸರಿಸಲು ಇದು ಕೂಡ ಒಂದು ಕಾರಣವಾಗಿದೆ, ಆದರೂ ಈ ವೈರಸ್ ಎಲ್ಲಿಂದ ಬಂದಿತು ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಆಫ್ರಿಕನ್ ಇಲಿ, ಅಳಿಲು ಮತ್ತು ಕೋತಿಗಗಳು ಈ ವೈರಸ್ಗೆ ನೆಲೆಯಾಗಿದೆ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಹಾಗಾಗಿ ಇವುಗಳ ಮೂಲಕ ಸೋಂಕು ಹರಡಬಹುದು. ಇನ್ನು ಮಾನವರಲ್ಲಿ ಮಂಕಿಪಾಕ್ಸ್ನ ಮೊದಲ ಪ್ರಕರಣವು 1970 ರಲ್ಲಿ ಕಂಡು ಬಂದಿತ್ತು. ಆ ರೋಗಿಯು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ನಿವಾಸಿಯಾಗಿದ್ದರು. 2022 ರಲ್ಲಿ, ಎಂಪಾಕ್ಸ್ ಪ್ರಪಂಚದಾದ್ಯಂತ ಹರಡಿತು ಎಂದು ವರದಿಗಳು ಹೇಳುತ್ತವೆ.

ವೈರಸ್ ಹೇಗೆ ಹರಡುತ್ತದೆ?

ಸಿಡಿಸಿ ವರದಿಯ ಪ್ರಕಾರ, ಸೋಂಕಿತ ರೋಗಿಯ ಲಾಲಾರಸ, ಬೆವರು ಮತ್ತು ಸೋಂಕಿತ ವಸ್ತುಗಳ ಮೂಲಕ ವೈರಸ್ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಜೊತೆಗೆ ಈ ವೈರಸ್ ಸೋಂಕಿತ ಗರ್ಭಿಣಿಯಿಂದ ಅವಳ ಮಗುವಿಗೂ ಹರಡಬಹುದು. ಆರೋಗ್ಯವಂತ ವ್ಯಕ್ತಿ ಸೋಂಕಿತ ವ್ಯಕ್ತಿಯ ಬಟ್ಟೆ ಅಥವಾ ವಸ್ತುಗಳ ಮೇಲ್ಮೈಯನ್ನು ಸ್ಪರ್ಶಿಸಿದರೂ ಕೂಡ ಮಂಕಿಪಾಕ್ಸ್ ಲಕ್ಷಣಗಳು ಕಂಡುಬರಬಹುದು. ಸೋಂಕಿತ ರೋಗಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಲು 1 ರಿಂದ 4 ದಿನಗಳು ತೆಗೆದುಕೊಳ್ಳಬಹುದು. ಜ್ವರ, ಸ್ನಾಯು ನೋವು, ಶೀತ, ದದ್ದು, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ರೋಗಲಕ್ಷಣಗಳು ಕಂಡುಬರುತ್ತವೆ. ಕೆಲವು ಸಂದರ್ಭಗಳಲ್ಲಿ ಉಸಿರಾಟದ ತೊಂದರೆ, ಆಹಾರವನ್ನು ನುಂಗಲು ಕಷ್ಟವಾಗುವಂತದ್ದು ಮತ್ತು ಕಣ್ಣುಗಳಲ್ಲಿ ಊತ ಉಂಟಾಗಬಹುದು. ಆದರೆ ಇಲ್ಲಿಯ ವರೆಗೆ ಅಂತಹ ಪ್ರಕರಣಗಳು ಬೆಳಕಿಗೆ ಬಂದಿಲ್ಲ, ಇದು ಪ್ರಾಣಿಗಳಿಂದಲೂ ಮನುಷ್ಯರಿಗೆ ಹರಡಬಹುದು. ಆಫ್ರಿಕಾದ ದೇಶಗಳಲ್ಲಿ ಈ ರೀತಿಯ ಅನೇಕ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ಈ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಹೃದ್ರೋಗದ ಅಪಾಯ ಹೆಚ್ಚಾಗಬಹುದು ಎಚ್ಚರ

ಯಾರು ಹೇಳುತ್ತಾರೆ?

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಆಫ್ರಿಕಾದ ದೇಶಗಳಲ್ಲಿ ಇಂತಹ ಅನೇಕ ಪ್ರಕರಣಗಳು ವರದಿಯಾಗಿವೆ ಎಂದು ಹೇಳುತ್ತದೆ, ಆದರೆ ಅವುಗಳು ಹರಡುತ್ತಿರುವುದಕ್ಕೆ ಇಲ್ಲಿಯ ವರೆಗೆ ಯಾವುದೇ ರೀತಿಯ ಕಾರಣವನ್ನು ಕಂಡುಹಿಡಿಯಲಾಗಿಲ್ಲ. ಈ ರೋಗದ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿಂದಾಗಿ, ಅದರ ಪ್ರಕರಣಗಳು ಹರಡಿ ಬೆಳಕಿಗೆ ಬಂದ ಅನೇಕ ದೇಶಗಳಿವೆ. ಆಫ್ರಿಕನ್ ದೇಶಗಳಲ್ಲಿ, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಮಂಕಿಪಾಕ್ಸ್ ವೈರಸ್ ಅನ್ನು ನಿಯಂತ್ರಿಸಲು ಪ್ರಯತ್ನಗಳು ನಡೆಯುತ್ತಿವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ