Travel Tips: ಪ್ರವಾಸದ ಸಮಯದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಿ
ಮಕ್ಕಳನ್ನು ಆರೋಗ್ಯಕರವಾಗಿ ಬೆಳೆಸಲು ಪೋಷಕರು ಸಾಕಷ್ಟು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಮ್ಮ ಮಕ್ಕಳಿಗಾಗಿ ಅವರು ಅನೇಕ ರೀತಿಯಲ್ಲಿ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಜೀವನದುದ್ದಕ್ಕೂ ಹಲವಾರು ರೀತಿಯ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಇದರಲ್ಲಿ ಮಕ್ಕಳೊಂದಿಗೆ ಪ್ರಯಾಣ ಮಾಡುವುದು ಕೂಡ ಸೇರಿಕೊಂಡಿರುತ್ತದೆ. ಇದು ನಮಗೆ ದೊಡ್ಡ ವಿಷಯವಲ್ಲ ಎನಿಸಬಹುದು. ಆದರೆ ಮಕ್ಕಳ ಜೊತೆಯಲ್ಲಿ ಪ್ರಯಾಣ ಮಾಡುವುದು ಸುಲಭವಲ್ಲ, ಅದರಲ್ಲಿಯೂ ರಾತ್ರಿಯಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನವಜಾತ ಶಿಶುವಾಗಿದ್ದರೆ, ಅವರ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಹಾಗಾದರೆ ಪುಟ್ಟ ಮಕ್ಕಳ ಜೊತೆ ಪ್ರಯಾಣಿಸುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಮಕ್ಕಳಿಗೆ ಜನ್ಮ ನೀಡುವುದರ ಜೊತೆಗೆ ಅವರನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಮತ್ತು ಆರೋಗ್ಯಕರವಾಗಿ ಬೆಳೆಸಲು ಪೋಷಕರು ಸಾಕಷ್ಟು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಮ್ಮ ಮಕ್ಕಳಿಗಾಗಿ ಅವರು ಅನೇಕ ರೀತಿಯಲ್ಲಿ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಚಿಕ್ಕ ಚಿಕ್ಕ ಕಷ್ಟಗಳನ್ನು ಪರಿಹರಿಸಿಕೊಳ್ಳುವುದರ ಜೊತೆಗೆ ಅವರ ಭವಿಷ್ಯದ ಬಗ್ಗೆ ಯೋಚಿಸುವವರೆಗೆ, ಜೀವನದುದ್ದಕ್ಕೂ ಹಲವಾರು ರೀತಿಯ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಇದರಲ್ಲಿ ಮಕ್ಕಳೊಂದಿಗೆ ಪ್ರಯಾಣ ಮಾಡುವುದು ಕೂಡ ಸೇರಿಕೊಂಡಿರುತ್ತದೆ. ಇದು ನಮಗೆ ದೊಡ್ಡ ವಿಷಯವಲ್ಲ ಎನಿಸಬಹುದು. ಆದರೆ ಮಕ್ಕಳ ಜೊತೆಯಲ್ಲಿ ಪ್ರಯಾಣ ಮಾಡುವುದು ಸುಲಭವಲ್ಲ, ಅದರಲ್ಲಿಯೂ ರಾತ್ರಿಯಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನವಜಾತ ಶಿಶುವಾಗಿದ್ದರೆ, ಅವರ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಹಾಗಾದರೆ ಪುಟ್ಟ ಮಕ್ಕಳ ಜೊತೆ ಪ್ರಯಾಣಿಸುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಡಬೇಕು ಎಂಬುದನ್ನು ತಿಳಿದುಕೊಳ್ಳಿ.
ನೀವು ಮೊದಲು ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸಬೇಕು. ಮಕ್ಕಳೊಂದಿಗೆ ಜನದಟ್ಟಣೆ ಇರುವ ಪ್ರದೇಶಗಳಿಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಅದರಲ್ಲಿಯೂ ನೀವು ಸಣ್ಣ ಮಕ್ಕಳೊಂದಿಗೆ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಹತ್ತಿರದಲ್ಲಿಯೇ ಸುಸಜ್ಜಿತ ಆಸ್ಪತ್ರೆ ಇರುವ ಪ್ರದೇಶಗಳನ್ನು ಆರಿಸಿ. ಅಂದರೆ ನಿಮ್ಮ ಮಕ್ಕಳಿಗೆ ಯಾವುದೇ ಸಂದರ್ಭದಲ್ಲಿಯೂ ತೊಂದರೆಯಾಗದಂತಹ ಜಾಗವಾಗಿರಬೇಕು. ಸುರಕ್ಷತೆಯ ದೃಷ್ಟಿಯಿಂದ ಮಕ್ಕಳನ್ನು ಎತ್ತರದ ಸ್ಥಳಗಳಿಗೆ ಅಂದರೆ ಗುಡ್ಡಗಾಡು ಪ್ರದೇಶಗಳಿಗೆ ಕರೆದೊಯ್ಯಬಾರದು.
ಇದನ್ನೂ ಓದಿ: ನಿಮ್ಮ ಎತ್ತರ ಹೆಚ್ಚಿಸಲು ಕೆಲವು ನೈಸರ್ಗಿಕ ಮಾರ್ಗಗಳು ಇಲ್ಲಿವೆ
ಆಹಾರದ ಮೇಲಿರಲಿ ಗಮನ:
ಆರು ತಿಂಗಳ ಮಗುವಿಗೆ ಸ್ತನ್ಯಪಾನ ಸಾಕು. ಅವರಿಗೆ ಹೊರಗಿನ ಆಹಾರದ ಅಗತ್ಯವಿಲ್ಲ. ಆದರೆ 1- 2 ವರ್ಷದ ಮಕ್ಕಳು ಮನೆಯ ಆಹಾರವನ್ನು ತಿನ್ನಲು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದ್ದರಿಂದ ಅವರಿಗೆ ಸಾಕಷ್ಟು ರೀತಿಯ ಆಹಾರ ವ್ಯವಸ್ಥೆಗಳಿರುವ ಸ್ಥಳವನ್ನು ಆಯ್ಕೆ ಮಾಡಬೇಕು. ಮಕ್ಕಳಿಗೆ ನೀರನ್ನು ಕುದಿಸಿ ಕುಡಿಯುವ ಅಭ್ಯಾಸ ಮಾಡಿಸಿ, ಹೊರಗೆ ಹೋದ ಸಂದರ್ಭದಲ್ಲಿಯೂ ಈ ಅಭ್ಯಾಸವನ್ನು ಬಿಡಬೇಡಿ.
ಮನೆಮದ್ದು ನೀಡುವುದನ್ನು ರೂಢಿಸಿಕೊಳ್ಳಿ
ಕಾರು, ರೈಲು ಮತ್ತು ವಿಮಾನಗಳಲ್ಲಿ ಸಣ್ಣ ಮಕ್ಕಳೊಂದಿಗೆ ಪ್ರಯಾಣಿಸುವಾಗ ಮಕ್ಕಳು ಶಬ್ದಗಳಿಗೆ ಹೆದರುತ್ತಾರೆ. ಹಾಗಾಗಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಮಕ್ಕಳ ಕಿವಿಯಲ್ಲಿ ಹತ್ತಿಯನ್ನು ಹಾಕಬೇಕು. ಕಾರು ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ವಾಂತಿ, ತಲೆ ತಿರುಗುವ ಅನುಭವ ಆಗುವುದಿಲ್ಲ. ಆದರೆ ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದರೆ, ಇಂತಹ ಸಮಸ್ಯೆ ಉಂಟಾದರೆ, ಅಗತ್ಯ ಔಷಧಿಗಳನ್ನು ನೀಡಬೇಕು. ಹಾಗಾಗಿ ಸಾಧ್ಯವಾದಷ್ಟು ಮಕ್ಕಳಿಗೆ ಮನೆಮದ್ದು ನೀಡುವುದನ್ನು ರೂಢಿಸಿಕೊಳ್ಳಿ, ಇದರಿಂದ ಮಕ್ಕಳಿಗೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಔಷಧಿಗಳನ್ನು ಕೇಳಿ ತೆಗೆದುಕೊಳ್ಳಿ
ಪ್ರವಾಸಕ್ಕೆ ಹೋಗುವ ಮೊದಲು, ನಿಮಗೆ ಮತ್ತು ನಿಮ್ಮ ಮಗುವಿಗೆ ಅಗತ್ಯವಿರುವ ಔಷಧಿಗಳನ್ನು ವೈದ್ಯರೊಂದಿಗೆ ಕೇಳಿ ತೆಗೆದುಕೊಳ್ಳಿ. ಹೋಗುವ ಮೊದಲು ಶಿಶು ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ. ಶುದ್ಧೀಕರಿಸಿದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಇದಲ್ಲದೆ, ಜ್ವರ, ಶೀತ, ಹೊಟ್ಟೆ ನೋವು ಮತ್ತು ವಾಂತಿಗೆ ಅಗತ್ಯವಾದ ಔಷಧಿಗಳನ್ನು ಒಯ್ಯಬೇಕು. ಇದರಿಂದ ಪ್ರಯಾಣದ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ