Paracetamol Side Effect: ಗರ್ಭಿಣಿಯರು ಪ್ಯಾರೆಸಿಟಮಾಲ್ ಯಾಕೆ ತೆಗೆದುಕೊಳ್ಳಬಾರದು?

|

Updated on: Feb 23, 2023 | 3:32 PM

ಗರ್ಭಾವಸ್ಥೆಯಲ್ಲಿ ಪ್ಯಾರಸಿಟಮಾಲ್ ಬಳಕೆಯು ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗಬಹುದು ಮತ್ತು ಇದು ಅನೇಕ ರೀತಿಯ ಅಸ್ವಸ್ಥತೆಗಳನ್ನು ಉಂಟುಮಾಡಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Paracetamol Side Effect: ಗರ್ಭಿಣಿಯರು ಪ್ಯಾರೆಸಿಟಮಾಲ್ ಯಾಕೆ ತೆಗೆದುಕೊಳ್ಳಬಾರದು?
ಸಾಂದರ್ಭಿಕ ಚಿತ್ರ
Image Credit source: Aidsmap
Follow us on

ಯಾವುದೇ ಕಾಯಿಲೆ ಅಥವಾ ಸೋಂಕಿನಿಂದ ಬಳಲುತ್ತಿರುವಾಗ, ಮೊದಲು ವೈದ್ಯರನ್ನು ಸಂಪರ್ಕಿಸದೇ ತಕ್ಷಣಕ್ಕೆ ಮೆಡಿಕಲ್​​​ಗಳಿಂದ ಮಾತ್ರೆಗಳನ್ನು ತೆಗೆದುಕೊಳ್ಳುವವರು ನಿಮ್ಮಲ್ಲಿಯೇ ಹಲವರಿದ್ದಾರೆ. ಆದರೆ ಅನಾವಶ್ಯಕವಾಗಿ ಔಷಧಗಳನ್ನು ಸೇವಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಹೆಚ್ಚಿನವರು ಆರೋಗ್ಯ ತಜ್ಞರನ್ನು ಸಂಪರ್ಕಿಸದೆ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಶೀತ ಮತ್ತು ಜ್ವರ ಸೋಂಕಿನಿಂದ ಪರಿಹಾರವನ್ನು ಪಡೆಯಲು ಪ್ಯಾರಸಿಟಮಾಲ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಯಾರಾದರೂ ಸೌಮ್ಯ ಜ್ವರ ಅಥವಾ ತಲೆನೋವಿನಿಂದ ಬಳಲುತ್ತಿದ್ದರೆ, ಅವರು ವೈದ್ಯರನ್ನು ಸಂಪರ್ಕಿಸದೆ ಪ್ಯಾರಸಿಟಮಾಲ್ ಮಾತ್ರೆಗಳನ್ನು ಸೇವಿಸುತ್ತಾರೆ. ಆದಾಗ್ಯೂ, ಸೌಮ್ಯ ಜ್ವರಕ್ಕೆ ಪ್ಯಾರೆಸಿಟಮಾಲ್ ಅಗತ್ಯವಿಲ್ಲ. ಕೆಲವು ಅಧ್ಯಯನಗಳು ಮತ್ತು ಸಂಶೋಧನೆಗಳು ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ,ಮೆದುಳಿನಲ್ಲಿರುವ ರಾಸಾಯನಿಕ ಸಂದೇಶವಾಹಕಗಳನ್ನು ನಿರ್ಬಂಧಿಸುವ ಮೂಲಕ ಪ್ಯಾರಸಿಟಮಾಲ್ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ. ಪ್ಯಾರೆಸಿಟಮಾಲ್ ರೋಗ, ಸೋಂಕುಗಳು ಮತ್ತು ಗಾಯಗಳನ್ನು ಎದುರಿಸಲು ದೇಹದಿಂದ ಉತ್ಪತ್ತಿಯಾಗುವ ಪ್ರೊಸ್ಟಗ್ಲಾಂಡಿನ್‌ಗಳ ಉತ್ಪಾದನೆಯನ್ನು ತಡೆಯುತ್ತದೆ.

ಡೈಲಿ ಮೇಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಗರ್ಭಾವಸ್ಥೆಯಲ್ಲಿ ಪ್ಯಾರಸಿಟಮಾಲ್ ಬಳಕೆಯು ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗಬಹುದು ಮತ್ತು ಇದು ಅನೇಕ ರೀತಿಯ ಅಸ್ವಸ್ಥತೆಗಳನ್ನು ಉಂಟುಮಾಡಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೈಪರ್ಆಕ್ಟಿವಿಟಿ ಡಿಸಾರ್ಡರ್, ಸ್ವಲೀನತೆ, ಗಮನ ಕೊರತೆಯ ಅಸ್ವಸ್ಥತೆ, ಮಾತನಾಡುವಾಗ ತೊಂದರೆ ಮತ್ತು ಐಕ್ಯೂ ಮಟ್ಟದಲ್ಲಿನ ಇಳಿಕೆಗೆ ಪ್ಯಾರಸಿಟಮಾಲ್ನ ಅಡ್ಡ ಪರಿಣಾಮಗಳನ್ನು ಹಲವಾರು ಅಧ್ಯಯನಗಳು ತಿಳಿಸಿವೆ.

ಇದನ್ನೂ ಓದಿ: ಪ್ರಪಂಚದಾದ್ಯಂತ ಗರ್ಭಾವಸ್ಥೆ, ಹೆರಿಗೆಯ ಸಮಯದಲ್ಲಿ ಪ್ರತಿ 2 ನಿಮಿಷಕ್ಕೆ ಒಬ್ಬ ಮಹಿಳೆ ಸಾವು: ಯು ಎನ್​​​ ಏಜೆನ್ಸಿ

ಗರ್ಭಾವಸ್ಥೆಯಲ್ಲಿ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದರಿಂದಾಗುವ  ಅಡ್ಡಪರಿಣಾಮಗಳು:

ಗರ್ಭಾವಸ್ಥೆಯಲ್ಲಿ ಪ್ಯಾರಸಿಟಮಾಲ್ ತೆಗೆದುಕೊಳ್ಳುವುದರಿಂದ ಭ್ರೂಣದ ಬೆಳವಣಿಗೆಯನ್ನು ನಿಲ್ಲಿಸಬಹುದು ಎಂದು ಡೆನ್ಮಾರ್ಕ್ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಪ್ಯಾರಸಿಟಮಾಲ್‌ನ ಅಡ್ಡ ಪರಿಣಾಮಗಳನ್ನು ಗಮನಿಸಿದರೆ, ವಿಶೇಷ ಸಂದರ್ಭಗಳಲ್ಲಿ ವೈದ್ಯರ ಸಲಹೆಯ ಮೇರೆಗೆ ಮಾತ್ರ ಪ್ಯಾರೆಸಿಟಮಾಲ್ ಬಳಸಬೇಕೆಂದು ಸಂಶೋಧಕರು ಗರ್ಭಿಣಿಯರಿಗೆ ಎಚ್ಚರಿಸಿದ್ದಾರೆ. ಗರ್ಭಾವಸ್ಥೆಯಲ್ಲಿ ಪ್ಯಾರಸಿಟಮಾಲ್ ಸೇವಿಸುವುದರಿಂದ ಮಕ್ಕಳಲ್ಲಿ ನರವೈಜ್ಞಾನಿಕ ಅಸ್ವಸ್ಥತೆಗಳು ಉಂಟಾಗಬಹುದು. ಈ ಅಧ್ಯಯನವನ್ನು ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯವು ಡಾ ಕೆವಿನ್ ಕ್ರಿಸ್ಟೇನ್ಸೆನ್ ನೇತೃತ್ವದಲ್ಲಿ ನಡೆಸಿದ್ದು, ಪ್ಯಾರಸಿಟಮಲ್​​ ಬಳಕೆಯ ಪರಿಣಾಮಗಳನ್ನು ಮಾನವರು ಮತ್ತು ಪ್ರಾಣಿಗಳ ಮೇಲೆ ಸಂಶೋಧಿಸಿದರು. ಗರ್ಭಾವಸ್ಥೆಯಲ್ಲಿ ಪ್ಯಾರಸಿಟಮಾಲ್ ಬಳಕೆಯು ಮಕ್ಕಳ ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ಕಲಿಯುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಡುಬಂದಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:31 pm, Thu, 23 February 23